ಆಗಸ್ಟ್‌ನಿಂದ ನೂತನ ವಾಹನ ಬೆಲೆ ಇಳಿಕೆ, ಖರೀದಿ ಸುಲಭ!

By Suvarna News  |  First Published Jul 28, 2020, 7:55 PM IST

ಕೊರೋನಾ ಕಾರಣ ಸಾರ್ವಜನಿಕ ಸಾರಿಗೆ ಸೇವೆ ಸಾಕಷ್ಟಿಲ್ಲ, ಬಳಸವುದು ಅಪಾಯವಾಗಿಬಿಟ್ಟಿದೆ. ಹೀಗಾಗಿ ಪ್ರತಿಯೊಬ್ಬರಿಗೆ ವಾಹನ ಅನಿವಾರ್ಯವಾಗಿದೆ. ಕೊರೋನಾದಿಂದ ಆರ್ಥಿಕ ಹೊಡೆತ ಬಿದ್ದ ಕಾರಣ ವಾಹನ ಖರೀದಿ ಸುಲಭವಾಗಿಲ್ಲ. ಇದೀಗ ಆಗಸ್ಟ್ 1 ರಿಂದ ಭಾರತದಲ್ಲಿ ವಾಹನ ಬೆಲೆ ಇಳಿಕೆಯಾಗುತ್ತಿದೆ. 


ನವದೆಹಲಿ(ಜು.28): ಕೊರೋನಾ ಸಂಕಷ್ಟದ ಸಮಯದಲ್ಲಿ ಭಾರತದ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(IRDAI) ಹೊಸ ನಿಯಮ ಜಾರಿಗೆ ತರುತ್ತಿದೆ. ಆಗಸ್ಟ್ 1 ರಿಂದ ಈ ನಿಯಮ ಜಾರಿಗೆ ಬರುತ್ತಿದ್ದು, ನೂತನ ವಾಹನಗಳ ಆನ್‌ರೋಡ್ ಬೆಲೆ ಇಳಿಕೆಯಾಗಲಿದೆ. ದ್ವಿಚಕ್ರ ವಾಹನ ಬೆಲೆ ಗರಿಷ್ಠ 5,000 ರೂಪಾಯಿ ಹಾಗೂ ಕಾರು, ಸೇರಿದಂತೆ ಇತರ ವಾಹನಗಳ 15,000 ರೂಪಾಯಿ ಅಷ್ಟು ಕಡಿಮೆಯಾಗಲಿದೆ.

ಕಾರು ಕಡಿಮೆ ಓಡಿಸುತ್ತೀರಾ? ಕಡಿಮೆ ಪಾವತಿಸಿ; ಬಂದಿದೆ ಕಿ.ಮೀ ಇನ್ಶುರೆನ್ಸ್!

Tap to resize

Latest Videos

ಹೊಸ ವಾಹನ ಖರೀದಿಸುವಾಗ ಇನ್ಶುರೆನ್ಸ್ ಪಾಲಿಸಿ ಕಡ್ಡಾಯವಾಗಿ ಮಾಡಲೇಬೇಕು. ಈ ಹಿಂದೆ ಸುದೀರ್ಘ ವಿಮಾ ಪಾಲಿಸಿ ಕಡ್ಡಾಯವಾಗಿತ್ತು. ದ್ವಿಚಕ್ರ ವಾಹನಗಳಿಗೆ 5 ವರ್ಷ ಹಾಗೂ ಕಾರು ಸೇರಿದಂತೆ ಇತರ ವಾಹನಗಳಿಗೆ 3 ವರ್ಷ ವಿಮೆ ಕಡ್ಡಾಯವಾಗಿತ್ತು.  2018ರಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿತ್ತು. ಆದರೆ ಆಗಸ್ಟ್ 1ರಿಂದ ಈ ನಿಯಮ ಬದಲಾಗುತ್ತಿದೆ. ಹಳೇ ನಿಮಯ ಮತ್ತೆ ಜಾರಿಗೆ ಬರುತ್ತಿದೆ.

ವಾಹನಗಳಿಗೆ 1 ವರ್ಷ ವಿಮೆ ನಿಯಮ ಜಾರಿಗೆ ಬರುತ್ತಿದೆ. ಆದರೆ ಥರ್ಡ್ ಪಾರ್ಟಿ ವಿಮೆ ನಿಯಮದಲ್ಲಿ ಬದಲಾವಣೆ ಇಲ್ಲ. ದ್ವಿಚಕ್ರ ವಾಹನ 3 ವರ್ಷ ಹಾಗೂ ಕಾರು ಸೇರಿದಂತೆ ಇತರ ನಾಲ್ಕು ಚಕ್ರ ವಾಹನ ಥರ್ಡ್ ಪಾರ್ಟಿ ವಿಮೆ 3 ವರ್ಷ ಕಡ್ಡಾಯವಾಗಿದೆ.

ಕೊರೋನಾ ವೈರಸ್ ಕಾರಣ ವಾಹನ ಮಾರಾಟ ಉತ್ತೇಜಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದರಿಂದ ವಾಹನಗಳ ಆನ್‌ರೋಡ್ ಬೆಲೆ ಕಡಿಮೆ ಕಡಿಮೆಯಾಗಲಿದೆ.

click me!