ಭಾರತೀಯ ಆಟೋಮೊಬೈಲ್‌ಗೆ ನಗು ತಂದ ನವರಾತ್ರಿ, 9 ದಿನದಲ್ಲಿ ದಾಖಲೆ ಕಾರು ಮಾರಾಟ!

By Suvarna NewsFirst Published Oct 28, 2020, 3:39 PM IST
Highlights

ಕೊರೋನಾ ವೈರಸ್ ಕಾರಣ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಭಾರತೀಯ ಆಟೋ ಇಂಡಸ್ಟ್ರಿಗೆ ನವರಾತ್ರಿ ಹಬ್ಬ ಸಿಹಿ ನೀಡಿದೆ.  10 ದಿನದ ಹಬ್ಬ ಕಾರು ಮಾರಟದ ಗಣನೀಯ ಏರಿಕೆ ಮಾಡಿದೆ. ನಷ್ಟದಿಂದ ಸೊರಗಿದ್ದ ಕಂಪನಿಗಳು ಇದೀಗ ಚೇತರಿಸಿಕೊಳ್ಳುತ್ತಿದೆ. ಈ ನವರಾತ್ರಿ ಹಬ್ಬದ ದಿನಗಳಲ್ಲಿ ಭಾರತದಲ್ಲಿ ಮಾರಾಟವಾದ ಕಾರುಗಳ ವಿವರ ಇಲ್ಲಿವೆ.
 

ಬೆಂಗಳೂರು(ಅ28):  ಕೊರೋನಾ ವೈರಸ್ ಕಾರಣ ಕಳೆದ ವರ್ಷಗಳಲ್ಲಿ ಆಚರಿಸಿದ ರೀತಿಯಲ್ಲಿ ನವರಾತ್ರಿ ಹಬ್ಬ ಆಚರಿಸಲು ಸಾಧ್ಯವಾಗಿಲ್ಲ. ಸಾಮಾಜಿಕ ಅಂತರ ಕಡ್ಡಾಯವಾಗಿರುವ ಕಾರಣ ಹಬ್ಬದ ಆಚರಣೆಗೆ ಕೆಲ ನಿರ್ಬಂಧಗಳನ್ನು ಹೇರಲಾಗಿತ್ತು. ಹೀಗಾಗಿ ಸರಳವಾಗಿ ಆಚರಿಸಲಾಗಿದೆ. ಆದರೆ ಭಾರತೀಯ ಆಟೋಮೊಬೈಲ್ ಕಂಪನಿಗಳಿಗೆ ಈ ನವರಾತ್ರಿ ಹಬ್ಬ ಹೊಸ ಚೈತನ್ಯ ನೀಡಿದೆ. 10 ದಿನದ ಹಬ್ಬದಲ್ಲಿ 2 ಲಕ್ಷ ಕಾರುಗಳು ಮಾರಾಟವಾಗಿದೆ.

ಹೊಸ ದಾಖಲೆ ಬರೆದ ಟಾಟಾ ಮೋಟಾರ್ಸ್, ದೇಶಕ್ಕೆ ಮತ್ತೊಂದು ಹೆಮ್ಮೆ!.

ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ, ಕಿಯೋ ಮೋಟಾರ್ಸ್ ಸೇರಿದಂತೆ ಪ್ರಮುಖ ಬ್ರ್ಯಾಂಡ್ ಕಾರುಗಳು ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಕಳೆದ ವರ್ಷದ ನವರಾತ್ರಿಗೆ ಹೋಲಿಸಿದರೆ, ಮಾರುತಿ ಸುಜುಕಿ ದಾಖಲೆ ಬರೆದಿದೆ. ಈ ಬಾರಿಯ ನವರಾತ್ರಿ 10 ದಿನದಲ್ಲಿ ಮಾರುತಿ ಸುಜುಕಿ ಇಂಡಿಯಾ 95,000 ಕಾರುಗಳನ್ನು ಮಾರಾಟ ಮಾಡಿದೆ. 2019ರ ನವರಾತ್ರಿಯಲ್ಲಿ ಮಾರುತಿ ಸುಜುಕಿ 60,000 ದಿಂದ 65,0000 ಕಾರುಗಳು ಮಾರಾಟ ಮಾಡಿದೆ.

ಕೊರೋನಾ ಸಂಕಷ್ಟದಿಂದ ಹೊರಬಂದ ಭಾರತದ ಆಟೋ ಇಂಡಸ್ಟ್ರಿ; ಶೇ.29ರಷ್ಟು ಚೇತರಿಕೆ!

ಹ್ಯುಂಡೈ ಇಂಡಿಯಾ ಕೂಡ ದಾಖಲೆ ಬರೆದಿದೆ. 2019ರ ನವರಾತ್ರಿಗೆ ಹೋಲಿಸಿದರೆ, ಈ ಬಾರಿ ಶೇಕಡಾ 25 ರಷ್ಟು ಹ್ಯುಂಡೈ ಕ್ರೇಟಾ ಕಾರಿನ ಮಾರಾಟದಲ್ಲಿ ಏರಿಕೆಯಾಗಿದೆ. ಈ ಬಾರಿಯ ನವರಾತ್ರಿಯಲ್ಲಿ ಹ್ಯುಂಡೈ ಇಂಡಿಯಾ 36,000 ಕಾರುಗಳು ಮಾರಾಟ ಮಾಡಿದೆ. ಇದರಲ್ಲಿ ಹ್ಯುಂಡೈ ಕ್ರೆಟಾ ಹಾಗೂ ಹ್ಯುಂಡೈ ಗ್ರ್ಯಾಂಜ್ i10ನಿಯೋಸ್ ಕಾರಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಕೊರೋನಾ ಅವಧಿಯಲ್ಲಿ 41 ಲಕ್ಷ ಸೈಕಲ್‌ ಸೇಲ್‌!...

ಕಿಯಾ ಮೋಟಾರ್ಸ್ ಮಾರಾಟದಲ್ಲಿ ಶೇಕಡಾ 13 ರಷ್ಟು ಏರಿಕೆ ತಂಡಿದೆ. ಕಿಯಾ ಸೆಲ್ಟೋಸ್, ಕಿಯಾ ಕಾರ್ನಿವಲ್ ಹಾಗೂ ಕಿಯೋ ಸೊನೆಟ್ ಕಾರು ಭಾರತದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಇನ್ನು ಟೊಯೋಟಾ ಕಿರ್ಲೋಸ್ಕರ್ ಕೂಡ ಶೇಕಡಾ 13 ರಷ್ಟು ಏರಿಕೆ ಕಂಡಿದೆ. ರೆನಾಲ್ಟ್ ಇಂಡಿಯಾ ಈ ನವರಾತ್ರಿ ದಿನದಲ್ಲಿ 4,281 ಕಾರುಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ನವರಾತ್ರಿ ಸಮಯದಲ್ಲಿ 3,821 ಕಾರು ಮಾರಾಟ ಮಾಡಿತ್ತು.

click me!