21 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ ಹ್ಯುಂಡೈ i20 ಕಾರು!

By Suvarna NewsFirst Published Oct 27, 2020, 6:17 PM IST
Highlights

ಬಹುನಿರೀಕ್ಷಿತ ಹ್ಯುಂಡೈ i20 ಕಾರು ಬಿಡುಗಡೆಗೆ ಸಜ್ಜಾಗಿದೆ. ಇದೀಗ ನಾಳೆಯಿಂದ(ಅ.28) ಭಾರತದಲ್ಲಿ ನೂತನ ಹ್ಯುಂಡೈ i20 ಕಾರು ಬುಕಿಂಗ್ ಆರಂಭಗೊಳ್ಳಲಿದೆ. ನೂತನ ಹ್ಯುಂಡೈ i20 ಕಾರು ವಿನ್ಯಾಸದಲ್ಲಿ ಬದಲಾವೆ, ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ವಿಸೇಷತೆ ಹೊಂದಿದೆ. 21,000 ರೂಪಾಯಿ ನೀಡಿ ನೂತನ ಕಾರನ್ನು ಬುಕ್ ಮಾಡಿಕೊಳ್ಳಬಹುದು. 

ನವದೆಹಲಿ(ಅ.27):  ಮಾರುತಿ ಬಲೆನೋ, ಟೊಯೋಟಾ ಗ್ಲಾಂಜಾ, ಟಾಟಾ ಅಲ್ಟ್ರೋಜ್, ಹೊಂಡಾ ಜಾಝ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ i20 ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ವಿನ್ಯಾಸ ಬಹುತೇಕ ಬದಲಾಗಿದೆ. ಹೆಚ್ಚುವರಿ ಫೀಚರ್ಸ್ ಸೇರಿಕೊಂಡಿದೆ. ಆಕರ್ಷಕ ಲುಕ್, ಪವರ್‌ಫುಲ್ ಫರ್ಮಾಮೆನ್ಸ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿವೆ.

ಹ್ಯುಂಡೈ ಕ್ರೆಟಾಗೆ ಮಾರು ಹೋದ ಜನ; ಮಾರಾಟದಲ್ಲಿ ಶೇ.20ರಷ್ಟು ಏರಿಕೆ!.

ಅಕ್ಟೋಬರ್ 28 ರಿಂದ ಭಾರತದಲ್ಲಿ ಹೊಚ್ಚ ಹೊಸ ಹ್ಯುಂಡೈ i20 ಕಾರು ಬುಕಿಂಗ್ ಮಾಡಿಕೊಳ್ಳಬಹುದು. 21,000 ರೂಪಾಯಿ ನೀಡಿ ನೂತನ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಹ್ಯುಂಡೈ ಅಧೀಕೃತ ವೆಬ್‌ಸೈಟ್ ಮೂಲಕ ಹಾಗೂ ದೇಶದಲ್ಲಿರುವ ಹ್ಯುಂಡೈ ಡೀಲರ್‌ಶಿಪ್ ಬಳಿ ಕಾರು ಬುಕಿ ಮಾಡಿಕೊಳ್ಳಬಹುದು.

 

The wait is finally over. Catch the first design sketches of the all-new i20 inspired by Hyundai Global Design Philosophy – Sensuous Sportiness with a futuristic and dynamic expression.
.
. pic.twitter.com/vq5XGXnODi

— Hyundai India (@HyundaiIndia)

ಹಲವು ವಿಶೇಷತೆಗಳ ಹ್ಯುಂಡೈ ವೆನ್ಯೂ iMT; ಇತರ ಕಾರಿಗಿಂತ ಹೇಗೆ ಭಿನ್ನ?

ನವೆಂಬರ್ 5 ರಂದು ನೂತನ ಹ್ಯುಂಡೈ i20 ಕಾರು ಬಿಡುಗಡೆಯಾಗಲಿದೆ.  2 ಪೆಟ್ರೋಲ್ ಹಾಗೂ 1 ಡೀಸೆಲ್ ವೇರಿಯೆಂಟ್ ಎಂಜಿನ್‌ಗಳಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ. ಆರಂಭಿಕ ಬೆಲೆ 5.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. 

1.2 ಲೀಟರ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್, 1 ಲೀಟರ್, 3 ಸಿಲಿಂಡರ್ ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಆಯ್ಕೆ ಲಭ್ಯವಿದೆ. ವಿಶೇಷ ಅಂದರೆ ಮ್ಯಾನ್ಯುಯೆಲ್, ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್, 6 ಸ್ಪೀಡ್  iMT(ಸೆಮಿ ಆಟೋಮ್ಯಾಟಿಕ್, 7 ಸ್ಪೀಡ್ ಟ್ಲಿನ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.

click me!