ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ Moto Edge 30 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ ಎಷ್ಟು?

Published : May 09, 2022, 06:27 PM ISTUpdated : May 09, 2022, 07:33 PM IST
ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ Moto Edge 30 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ: ನಿರೀಕ್ಷಿತ ಬೆಲೆ ಎಷ್ಟು?

ಸಾರಾಂಶ

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ Edge 30 Pro ನಂತರ Moto Edge 30 ಭಾರತದಲ್ಲಿ Edge 30 ಸರಣಿಯಲ್ಲಿ ತನ್ನ ಎರಡನೇ ಸ್ಮಾರ್ಟ್‌ಫೋನ್ ಆಗಿ ಮೊಟೊರೊಲಾ ಬಿಡುಗಡೆ ಮಾಡಲಿದೆ.

Moto Edge 30 Launch: ಮೊಟೊರೊಲಾ ಶೀಘ್ರದಲ್ಲೇ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಕಂಪನಿಯು ಮೋಟೋ ಎಡ್ಜ್ 30 ಇಂಡಿಯಾ ಲಾಂಚ್ ಈವೆಂಟ್ ವಿವರಗಳನ್ನು ಕಂಪನಿ ದೃಢಪಡಿಸಿದೆ. ಮೊಟೊರೊಲಾ ತನ್ನ ಹೊಸ ಸ್ಮಾರ್ಟ್‌ಫೋನನ್ನು ಮೇ 12 ರಂದು ಭಾರತದಲ್ಲಿ ಬಿಡುಗಡೆ ಮಾಡಲಿದೆ. ವೆನಿಲ್ಲಾ ಎಡ್ಜ್ 30 ಮಾದರಿಯು ಎಡ್ಜ್ 30 ಪ್ರೊನ ಕಡಿಮೆ ವೈಶಿಷ್ಟ್ಯವುಳ್ಳ ಮಾದರಿಯಾಗಿದೆ.

ಎಡ್ಜ್ 30 ಪ್ರೊ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಸ್ನಾಪ್‌ಡ್ರಾಗನ್ 8 ಜನ್ 1 SoC ನೊಂದಿಗೆ ಪ್ರಾರಂಭಿಸಲಾಯಿತು. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ, ಮೊಟೊರೊಲಾದ Moto Edge 30 ಕುರಿತು ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ. 

Moto Edge 30 ಭಾರತ ಬಿಡುಗಡೆ ದಿನಾಂಕ: Moto Edge 30 ಇಂಡಿಯಾ ಲಾಂಚ್ ಕಾರ್ಯಕ್ರಮವನ್ನು ಮೇ 12 ರಂದು ಆಯೋಜಿಸಲಾಗುವುದು ಎಂದು ಮೊಟೊರೊಲಾ ದೃಢಪಡಿಸಿದೆ. ಬಿಡುಗಡೆಯ ನಂತರ ಫ್ಲಿಪ್‌ಕಾರ್ಟ್, ರಿಲಯನ್ಸ್‌ ಡಿಜಿಟಲ್ ಮತ್ತು ಭಾರತದಲ್ಲಿನ ಪ್ರಮುಖ ಚಿಲ್ಲರೆ ಮಳಿಗೆಗಳ ಮೂಲಕ ಫೋನ್ ಖರೀದಿಸಲು ಲಭ್ಯವಿರುತ್ತದೆ ಎಂದು ಕಂಪನಿಯು ದೃಢಪಡಿಸಿದೆ.‌

Moto Edge 30 ಫೀಚರ್ಸ್:‌ Moto Edge 30  ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ವಿಶ್ವದ ಅತ್ಯಂತ ತೆಳುವಾದ 5G ಸ್ಮಾರ್ಟ್‌ಫೋನ್ ಎಂದು ಬಿಡುಗಡೆ ಮಾಡಲಾಗಿದೆ. ಫೋನ್ ಕೇವಲ 6.79 ಮಿಮೀ ದಪ್ಪವಾಗಿದೆ. ಇದು ಸ್ನಾಪ್‌ಡ್ರಾಗನ್ 778G+ SoC ಜೊತೆಗೆ ಬರುತ್ತದೆ. 6nm ಚಿಪ್  8GB RAM ಮತ್ತು 128GB ವರೆಗಿನ ಆಂತರಿಕ ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಇದನ್ನೂ ಓದಿ: ಕ್ವಾಡ್ ರಿಯರ್ ಕ್ಯಾಮೆರಾ, 5,000mAh ಬ್ಯಾಟರಿ: ಅತೀ ಅಗ್ಗದ Moto G22 ಭಾರತದಲ್ಲಿ ಲಾಂಚ್!‌

ಮುಂಭಾಗದಲ್ಲಿ, Fulll HD+ ರೆಸಲ್ಯೂಶನ್ ಹೊಂದಿರುವ 6.5-ಇಂಚಿನ AMOLED ಡಿಸ್ಪ್ಲೇ ಇದೆ. 10-ಬಿಟ್ ಬಣ್ಣ ಪ್ರದರ್ಶನವು 144Hz ರಿಫ್ರೆಶ್ ದರ ಮತ್ತು 360Hz ಸ್ಪರ್ಶ ಮಾದರಿ ದರವನ್ನು ಹೊಂದಿದೆ. ಇದು ಮುಂಭಾಗದ ಕ್ಯಾಮೆರಾಕ್ಕಾಗಿ ಮೇಲ್ಭಾಗದ ಮಧ್ಯದಲ್ಲಿ ಸಣ್ಣ ಹೋಲ್-ಪಂಚ್ ಕಟೌಟನ್ನು ಸಹ ಹೊಂದಿದೆ.

ಕ್ಯಾಮೆರಾ ಯಾವುದು?: ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪನ್ನು ಸಹ ಹೊಂದಿದೆ. ಇದು 50MP ಮುಖ್ಯ ಕ್ಯಾಮೆರಾ ಸಂವೇದಕ ಮತ್ತು 50MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿದೆ. ಫೋನ್ 2MP ಡೆಪ್ತ್ ಸೆನ್ಸಾರನ್ನು ಸಹ ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ, 32MP ಮುಂಭಾಗದ ಕ್ಯಾಮೆರಾ ಇದೆ. 

ಎಡ್ಜ್ 30 ಸಣ್ಣ 4020 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಫೋನ್ 144Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ ಎತ್ತರದ 6.5-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ ಎಂದು ಪರಿಗಣಿಸಿದರೆ, ಇದು ಇಡೀ ದಿನದ ಬ್ಯಾಟರಿಯನ್ನು ನೀಡಲು ಸಾಧ್ಯವಾಗುತ್ತದೆಯೇ ಎಂಬುದು ಖಚಿತವಿಲ್ಲ. ಸಾಧನವು 33W ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ ಮತ್ತು ಭಾರತದಲ್ಲಿನ ಬಳಕೆದಾರರು ಬಾಕ್ಸ್‌ನಲ್ಲಿ ಅಡಾಪ್ಟರನ್ನು ಪಡೆಯುವ ಸಾಧ್ಯತೆಯಿದೆ.

ಮೋಟೋ ಎಡ್ಜ್ 30 ಆಂಡ್ರಾಯ್ಡ್ 12 ಔಟ್‌ ಆಫ್‌ ದಿ ಬಾಕ್ಸ್‌ ಬೂಟ್ ಮಾಡುತ್ತದೆ ಮತ್ತು ಮೂರು ವರ್ಷಗಳ ಭದ್ರತಾ ಬೆಂಬಲದೊಂದಿಗೆ ಎರಡು ಪ್ರಮುಖ ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯುವ ಭರವಸೆ ಇದೆ. ಫೋನ್ ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಬ್ಲೂಟೂತ್ 5.2 ಮತ್ತು ವೈ-ಫೈ 6E ಸಹ ಒಳಗೊಂಡಿದೆ.

ಭಾರತದಲ್ಲಿ Moto Edge 30 ಬೆಲೆ: ಮೊಟೊರೊಲಾ ಮೇ 12 ರಂದು ನಡೆಯುವ ಈವೆಂಟ್‌ನಲ್ಲಿ ಭಾರತದಲ್ಲಿ Edge 30 ನ ಬೆಲೆಯನ್ನು ಘೋಷಿಸಲಿದೆ. ನಾವು ಸ್ಮಾರ್ಟ್‌ಫೋನ್ ಭಾರತದಲ್ಲಿ ರೂ 30,000 ಮತ್ತು ರೂ 35,000 ರ ನಡುವೆ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಬಹುದು. ಫೋನನ್ನು ಯುರೋಪಿಯನ್ ಮಾರುಕಟ್ಟೆಗಳಲ್ಲಿ EUR 449.99 (ಸುಮಾರು ರೂ 36,000) ಗೆ ಬಿಡುಗಡೆ ಮಾಡಲಾಗಿದೆ. 

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ