ಭಾರತದ ಅತ್ಯಂತ ಸುರಕ್ಷತೆಯ ಮಹೀಂದ್ರ XUV300 ಸ್ಪೋರ್ಟ್ಸ್ ಕಾರು ಶೀಘ್ರದಲ್ಲೇ ಬಿಡುಗಡೆ!

By Suvarna News  |  First Published Jul 12, 2020, 3:35 PM IST

ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹೀಂದ್ರ XUV300 ಕಾರು ಇದೀಗ ಸ್ಪೋರ್ಟ್ ವೇರಿಯೆಂಟ್ ಕಾರು ಬಿಡುಗಡೆ ಮಾಡುತ್ತಿದೆ. ನೂತನ ಕಾರಿನ ವಿಶೇಷತೆ, ಪವರ್ ಕುರಿತ ಮಾಹಿತಿ ಇಲ್ಲಿದೆ.
 


ಮುಂಬೈ(ಜು.12): ವಯಸ್ಕರು ಹಾಗೂ ಮಕ್ಕಳ ಸುರಕ್ಷತೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಏಕೈಕ ಕಾರು ಮಹೀಂದ್ರ XUV300. ಮಾರುತಿ ಬ್ರೆಜಾ, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಮಹೀಂದ್ರ XUV300 ಕಾರು ಇದೀಗ ಸ್ಪೋರ್ಟ್ ವೇರಿಯೆಂಟ್ ಮಾಡೆಲ್ ಬಿಡುಗಡೆಯಾಗುತ್ತಿದೆ.

Tap to resize

Latest Videos

undefined

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!.

ಮಹೀಂದ್ರ XUV300 ಸ್ಪೋರ್ಟ್ ಎಡಿಶನ್ ಕಾರನ್ನು 2020ರ ಆಟೋ ಎಕ್ಸ್ಪೋದಲ್ಲಿ ಅನವರಣ ಮಾಡಲಾಗಿತ್ತು. ನೂತನ ಕಾರು 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದೆ. 3 ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಹೊಂದಿದ್ದು, 130bhp ಪವರ್ ಹಾಗೂ 230Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ.

ಮಹೀಂದ್ರ XUV300 ಕ್ರಾಶ್ ಟೆಸ್ಟ್ ರಿಸಲ್ಟ್ ಬಹಿರಂಗ; ಭಾರತದ ಮತ್ತೊಂದು ಸೇಫ್ಟಿ ಕಾರು

ಆಕರ್ಷಕ ಅಲೋಯ್ ವೀಲ್, ವಿನ್ಯಾಸದಲ್ಲಿ ಸ್ಪೋರ್ಟ್ಸ್ ಲುಕ್, ಕಾರಿನ ಎರಡು ಬದಿಗಳಲ್ಲಿ ಸ್ಪೋರ್ಟ್ ವೇರಿಯೆಂಟ್ ಗ್ರಾಫಿಕ್ಸ್ ಟೈಟಲ್ ಹೊಂದಿದೆ. ಮಹೀಂದ್ರ XUV300 ಸ್ಪೋರ್ಟ್ಸ್ ಮಾಡೆಲ್ ಕಾರು ಬ್ಲಾಕ್ ಹಾಗೂ ರೆಡ್ ಥೀಮ್ ಕಲರ್ ನೀಡಲಾಗಿದ್ದು, ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

XUV300 ಸ್ಪೋರ್ಟ್ ಕಾರು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈಗಾಲೇ ಟೆಸ್ಟಿಂಗ್ ಕಾರ್ಯಗಳು ಮುಗಿದಿದೆ. ಇನ್ನು ಇದರ ಬೆಲೆ ಬಹಿರಂಗ ಪಡಿಸಿಲ್ಲ. ಸದ್ಯ ಮಾರುಕಟ್ಟೆಲ್ಲಿರುವ ಮಹೀಂದ್ರ XUV300 ಕಾರಿನ ಬೆಲೆ 8.43 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.

click me!