ಕೊರೋನಾ ಸಂಕಷ್ಟದಲ್ಲಿ ದಾಖಲೆ ಬರೆದ ಮಾರುತಿ ವ್ಯಾಗನಆರ್ CNG ಕಾರು!

By Suvarna News  |  First Published Sep 25, 2020, 2:27 PM IST

ಕೊರೋನಾ ಸಂಕಷ್ಟದ ನಡುವೆಯೂ ಮಾರುತಿ ವ್ಯಾಗನ್ಆರ್ CNG ಕಾರು ದಾಖಲೆ ಬರೆದಿದೆ. ಅತೀ ಹೆಚ್ಚು ಜನ ಇದೀಗ CNG ಹಾಗೂ ಎಲೆಕ್ಟ್ರಿಕ್ ಕಾರಿನತ್ತ ಒಲವು ತೋರುತ್ತಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಅತ್ಯುತ್ತಮ ಸ್ಥಳಾವಕಾಶವಿರುವ ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಮಾರಾಟದಲ್ಲಿ ದಾಖಲೆ ಬರೆದಿದೆ.


ನವದೆಹಲಿ(ಸೆ.25): ಮಾರುತಿ ಸುಜುಕಿ ವ್ಯಾಗನ್ಆರ್ ಕಾರು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕಾರಣ ಇದು ಎಲ್ಲರಿಗೂ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಮಧ್ಯಮ ವರ್ಗದ ಕುಟುಂಬಕ್ಕೆ ಹೇಳಿ ಮಾಡಿಸಿದಂತಿದೆ. ಕಾರಣ ಬೆಲೆ, ಕಾರಿನ ಮೈಲೇಜ್, ನಿರ್ವಹಣೆ ಸೇರಿದಂತೆ ಎಲ್ಲವೂ ಕೈಗೆಟುಕುವ ದರದಲ್ಲಿ ಸಿಗಲಿದೆ. ಹೀಗಾಗಿ ಭಾರತದಲ್ಲಿ ವ್ಯಾಗನ್ಆರ್ ಕಾರಿಗೆ ಬೇಡಿಕೆ ಹೆಚ್ಚು. ಇದೀಗ ವ್ಯಾಗನ್ಆರ್ CNG ಕಾರಿಗೂ ಅದೇ ರೀತಿಯ ಬೇಡಿಕೆ ಬಂದಿದೆ. 

Photo: BS6 ಮಾರುತಿ ವ್ಯಾಗನರ್ CNG ಕಾರು ಬಿಡುಗಡೆ!..

Latest Videos

undefined

2010ರಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ CNG ಕಾರು ಬಿಡುಗಡೆಯಾಗಿದೆ. ಕೊರೋನಾ ವೈರಸ್ ಮಹಾಮಾರಿ ಸಮಯದಲ್ಲೂ ವ್ಯಾಗನ್ಆರ್ CNG ಕಾರು ಅದೇ ಬೇಡಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೀಗ ವ್ಯಾಗನ್ಆರ್ CNG 3 ಲಕ್ಷ ಮಾರಾಟ ಗಡಿ ದಾಟೋ ಮೂಲಕ ದಾಖಲೆ ಬರೆದಿದೆ. 

ಮಾರಾಟ ಕುಸಿತದಲ್ಲೂ ಮಾರುತಿ ಕೈ ಹಿಡಿದ ವ್ಯಾನಗ್ಆರ್ ಕಾರು!

ವ್ಯಾಗನ್ಆರ್ CNG ಕಾರು 1.0 ಲೀಟರ್ ಪೆಟ್ರೋಲ್ ಮೋಟಾರ್ ಹೊಂದಿದ್ದು, 58 bhp ಪವರ್ ಹಾಗೂ 78 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು CNG ಕಾರು ಕೇವಲ 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಇನ್ನು ABS, EBD, ಸ್ಪೀಡ್ ಅಲರ್ಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಹೊಂದಿದೆ.

ಭಾರತದಲ್ಲಿ ವ್ಯಾಗನ್ಆರ್ ಕಾು 1999ರಲ್ಲಿ ಬಿಡುಗಡೆಯಾಗಿದೆ. ಇದುವರೆಗೆ ಬರೋಬ್ಬರಿ 24 ಲಕ್ಷ ವ್ಯಾಗನ್ಆರ್ ಕಾರು ಭಾರತದಲ್ಲಿ ಮಾರಾಟವಾಗಿದೆ. 2000ನೇ ಇಸವಿಯಿಂದ ಸತತವಾಗಿ ಟಾಪ್ 5 ಬೆಸ್ಟ್ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ವ್ಯಾಗನ್ಆರ್ ಕಾರು ಸ್ಥಾನ ಪಡೆದುಕೊಳ್ಳುತ್ತಲೇ ಬಂದಿದೆ.

click me!