ಭಾರತದಲ್ಲಿ ವಾಹನ ಸಬ್‌ಸ್ಕ್ರಿಪ್ಶನ್ ಆರಂಭಿಸಿದ ಮಾರುತಿ ; ಸುಲಭವಾಗಿ ಪಡೆಯಿರಿ ಕಾರು!

By Suvarna News  |  First Published Sep 24, 2020, 3:20 PM IST

ಭಾರತದಲ್ಲೀಗ ಕಾರು ಸಬ್‌ಸ್ಕ್ರಿಪ್ಶನ್(ಚಂದಾದಾರಿಕೆ) ಪ್ಲಾನ್‌ಗಳು ಹೆಚ್ಚಾಗುತ್ತಿದೆ. ಬಹುತೇಕ ಕಂಪನಿಗಳು ಇದೀಗ ಸಬ್‌ಸ್ಕ್ರಿಪ್ಶನ್ ಮೂಲಕ ಗ್ರಾಹಕರಿಗೆ ಕಾರು ನೀಡುತ್ತಿದೆ. ಕಾರು ಖರೀದಿ ಮಾಡಬೇಕಿಲ್ಲ, ಡೌನ್‌ಪೇಮೆಂಟ್ ಸಮಸ್ಯೆ, ವಿಮೆ , ನಿರ್ವಹಣೆ ಕಿರಿಕಿರಿ ಇಲ್ಲದೆ ಕಾರು ಪಡೆಯಬಹುದು. ಇದೀಗ ಮಾರುತಿ ಸುಜುಕಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಾರು ಸಬ್‌ಸ್ಕ್ರಪ್ಶನ್ ಆರಂಭಿಸಿದೆ.


ಬೆಂಗಳೂರು(ಸೆ.24): ಭಾರತದಲ್ಲಿ ಮಾರುತಿ ಸುಜುಕಿ ವಾಹನ ಸಬ್‌ಸ್ಕ್ರಿಪ್ಶನ್) ಆರಂಭಿಸಿದೆ. ಬೆಂಗಳೂರು, ದೆಹಲಿ ಹಾಗೂ NCR(ನೋಯ್ಡಾ, ಫರಿದಾಬಾದ್, ಗುರುಗಾಂವ್) ನಗರಗಳಲ್ಲಿ ವಾಹನ ಸಬ್‌ಸ್ಕ್ರಿಪ್ಶನ್ ಪ್ಲಾನ್ ಆರಂಭಿಸಿದೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆ ರೀತಿಯಲ್ಲೇ ಇದೀಗ ಮಾರುತಿ ಕೂಡ ತನ್ನ ಕಾರುಗಳನ್ನು ಗ್ರಾಹಕರಿಗೆ ಸಬ್‌ಸ್ಕ್ರಿಪ್ಶನ್ ಮೂಲಕ ಪಡೆಯುವ ಅವಕಾಶ ಕಲ್ಪಿಸಿದೆ.

ಭಾರತದಲ್ಲಿ ಚೇತರಿಸಿಕೊಂಡ ಆಟೋ ಸೇಲ್ಸ್, ಮಾರುತಿಗೆ ಮೊದಲ ಸ್ಥಾನ!

Tap to resize

Latest Videos

undefined

ಸಬ್‌ಸ್ಕ್ರಿಪ್ಶನ್ ಯೋಜನೆಯಿಂದ ಗ್ರಾಹಕರು  ಡೌನ್‌ಪೇಮೆಂಟ್ ನೀಡುವ ಅಗತ್ಯವಿಲ್ಲ,  ಕಾರಿನ  ನಿರ್ವಹಣೆ ಮಾಡುವ ಅಗತ್ಯವಿಲ್ಲ, ವರ್ಷ ವರ್ಷ ವಿಮೆ ಮಾಡುವ ಚಿಂತೆ ಇಲ್ಲ. ಕಾರು ಖರೀದಿಸದೆ ಕಾರು ಪಡೆಯಬಹುದು. ತಿಂಗಳ ಚಂದಾದಾರಿಗೆ ಮೂಲಕ ಕಾರು ಪಡೆಯಲು ಮಾರುತಿ ವಿಶೇಷ ಸಬ್‌ಸ್ಕ್ರಿಪ್ಶನ್ ಯೋಜನೆ ಆರಂಭಿಸಿದೆ.

ಡೌನ್‌ ಪೇಮೆಂಟ್ ಇಲ್ಲ, 17ಸಾವಿರ ಪಾವತಿಸಿ ಲೀಸ್ ಮೂಲಕ ಪಡೆಯಿರಿ ಮಾರುತಿ ಸಿಫ್ಟ್!

ಭಾರತದಲ್ಲಿ ಸಬ್‌ಸ್ಕ್ರಿಪ್ಶನ್ ಪ್ಲಾನ್ ಜಾರಿ ಮಾಡಲು ಮಾರುತಿ ಸುಜುಕಿ ಒರಿಕ್ಸ್ ಆಟೋ ಇನ್‌ಫ್ರಾಸ್ಟ್ರಕ್ಚರ್ ಇಂಡಿಯಾ ಜೊತೆ ಸಹಭಾಗಿತ್ವ ಮಾಡಿಕೊಂಡಿದೆ. ಮಾರುತಿ ಸುಜುಕಿ ಅರೆನಾ ಡೀಲರ್ ಮೂಲಕ ಹೊಸ ಮಾರುತಿ ಸ್ಫಿಪ್ಟ್, ಡಿಸೈರ್, ವಿಟರಾ ಬ್ರಿಜಾ, ಎರ್ಟಿಗಾ ಕಾರನ್ನು ಸಬ್‌ಸ್ಕ್ರಿಪ್ಶನ್ ಮಾಡಿಕೊಳ್ಳಬಹುದು. ಇನ್ನು ನೆಕ್ಸಾ ಅಧೀಕೃತ ಡೀಲರ್ ಮೂಲಕ ಬಲೆನೋ, ಸಿಯಾಜ್ ಹಾಗೂ XL6 ಕಾರು ಪಡೆಯಬಹುದು.

ಸಬ್‌ಸ್ಕ್ರಿಪ್ಶನ್ ಪ್ಲಾನ್ 12 ತಿಂಗಳಿಂದ ಆರಂಭಗೊಳ್ಳುತ್ತಿದ್ದು ಗರಿಷ್ಠ 48 ತಿಂಗಳ ವರೆಗೆ ಲಭ್ಯವಿದೆ. ಈ ಮೂಲಕ ಅತೀ ಕಡಿಮೆ ಸಬ್‌ಸ್ಕ್ರಿಪ್ಶನ್ ಪ್ಲಾನ್ ಪ್ರತಿ ತಿಂಗಳಿಗೆ 14,463 ರೂಪಾಯಿ ಪ್ಲಾನ್ ಲಭ್ಯವಿದೆ.  ಈ ಮೊತ್ತ ಎಲ್ಲಾ ತೆರಿಗಳನ್ನು ಒಳಗೊಂಡಿದೆ. 

click me!