ಕಾರ್ಪೊರೆಟ್‌ ತೆರಿಗೆ ಕಡಿತ, ಮಾರುತಿ ಕಾರು ಬೆಲೆಯಲ್ಲಿ ಇಳಿಕೆ!

By Web DeskFirst Published Sep 26, 2019, 1:44 PM IST
Highlights

ಕಾರ್ಪೊರೆಟ್‌ ತೆರಿಗೆ ಕಡಿತ ಬೆನ್ನಲ್ಲೇ, ವಿವಿಧ ಮಾದರಿ ಕಾರು ಬೆಲೆ ಇಳಿಸಿದ ಮಾರುತಿ|  ಸೆ.25ರಂದು ಅಂದರೆ, ಬುಧವಾರದಿಂದಲೇ ಜಾರಿಗೆ

ನವದೆಹಲಿ[ಸೆ.26]: ದೇಶದ ಉದ್ಯಮ ವಲಯದ ಚೈತನ್ಯ ಹಾಗೂ ಆರ್ಥಿಕ ಅಭಿವೃದ್ಧಿ ದರ ಸುಧಾರಣೆಗಾಗಿ ಕೇಂದ್ರ ಸರ್ಕಾರ ಕಾರ್ಪೊರೇಟ್‌ ವಲಯದ ಮೇಲಿನ ತೆರಿಗೆ ಕಡಿತದ ಬೆನ್ನಲ್ಲೇ, ಆಲ್ಟೋ 800, ಆಲ್ಟೋ ಕೆ10, ಸ್ವಿಫ್ಟ್‌ ಡೀಸೆಲ್‌, ಸೆಲೆರಿಯೋ, ಬಲೆನೊ ಸೇರಿದಂತೆ ಇನ್ನಿತರ ಕೆಲ ಕಾರುಗಳ ದರದಲ್ಲಿ ಮಾರುತಿ ಸುಜುಕಿ ಕಡಿತಗೊಳಿಸಿದೆ.

ಮಾರುತಿ ಸುಜುಕಿ S ಪ್ರೆಸ್ಸೋ ಕಾರು ಬಿಡುಗಡೆ ದಿನಾಂಕ ಬಹಿರಂಗ!

ಸೆ.25ರಂದು ಅಂದರೆ, ಬುಧವಾರದಿಂದಲೇ ಜಾರಿಗೆ ಬರುವಂತೆ ವಿಟಾರಾ ಬ್ರೆಜ್ಜಾ, ಎಸ್‌-ಕ್ರಾಸ್‌, ಟೂರ್‌ ಎಸ್‌ ಡೀಸೆಲ್‌, ಡಿಜೈರ್‌ ಡೀಸೆಲ್‌, ಇಗ್ನಿಸ್‌, ಬಲೆನೊ ಡೀಸೆಲ್‌, ಸೆಲಿರಿಯೊ, ಸ್ವಿಫ್ಟ್‌ ಡೀಸೆಲ್‌, ಆಲ್ಟೊಕೆ10, ಆಲ್ಟೋ 800 ಮಾದರಿಯ ಕಾರುಗಳ ಬೆಲೆಯಲ್ಲಿ 5000 ರು.ನಷ್ಟುಇಳಿಕೆ ಮಾಡಲಾಗಿದೆ.

ಆಟೋ ಮಾರಟ ಕುಸಿತಕ್ಕೆ ಕಾರಣ ಬಿಚ್ಚಿಟ್ಟ ಬಜಾಜ್; ನಿಟ್ಟುಸಿರು ಬಿಟ್ಟ ಕೇಂದ್ರ!

ಕಳೆದ ವಾರವಷ್ಟೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶೀಯ ಉತ್ಪಾದನಾ ಕಂಪನಿಗಳ ಕಾರ್ಪೊರೇಟ್‌ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಕಡಿತಗೊಳಿಸಿದ್ದರು. ಹಾಗೆಯೇ, ನೂತನ ಉತ್ಪಾದನಾ ಕಂಪನಿಗಳ ತೆರಿಗೆಯನ್ನು ಶೇ. 25ರಿಂದ 15ಕ್ಕೆ ಇಳಿಸಿದ್ದರು.

click me!