ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆ: ಮಾರುತಿ Sಪ್ರೆಸ್ಸೋ ಕಾರಿನ ಸೇಫ್ಟಿ ಬಹಿರಂಗ!

By Suvarna News  |  First Published Nov 12, 2020, 6:20 PM IST

ಗ್ಲೋಬಲ್  NCAP ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಪರೀಕ್ಷೆ ನಡೆಸಿದೆ. ಸಣ್ಣ ಹಾಗೂ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿರುವ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಹೇಗಿದೆ? ಇಲ್ಲಿದೆ ವಿವರ


ನವದೆಹಲಿ(ನ.12): ಭಾರತದಲ್ಲಿ ಮಾರಾಟ ಮಾಡುವ ಕಾರುಗಳಿಗೆ ಕನಿಷ್ಠ ಸುರಕ್ಷತೆ ಇರಲೇಬೇಕು ಎಂದು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ನೀಡಿದೆ. ಯುರೋಪಿಯನ್ ಸ್ಟಾಂಡರ್ಡ್  ನೀತಿಯನ್ನು ಭಾರತ ಅನುಸರಿಸುತ್ತಿದೆ. ಭಾರತೀಯ ಕಾರುಗಳಾದ ಟಾಟಾ, ಮಹೀಂದ್ರ ಗರಿಷ್ಠ ಸೇಫ್ಟಿ ಹೊಂದಿದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ನೂತನ ಮಾರುತಿ ಎಸ್ ಪ್ರೆಸ್ಸೋ ಕಾರಿನ ಸುರಕ್ಷತಾ ಫಲಿತಾಂಶ ಹೊರಬಿದ್ದಿದೆ

Latest Videos

undefined

ಸುರಕ್ಷತೆಯಲ್ಲಿ ಭಾರತದ ಕಾರುಗಳಿಗೆ ಅಗ್ರಸ್ಥಾನ, ವಿದೇಶಿ ಕಾರುಗಳಿಗಿಲ್ಲ ಸ್ಥಾನ!.

ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರು ಶೂನ್ಯ ಸುರಕ್ಷತೆ ಹೊಂದಿದ ಕಾರು ಎಂದು ಫಲಿತಾಂಶ ಹೇಳಿದೆ. ಪರೀಕ್ಷೆಯಲ್ಲಿ ಶೂನ್ಯ ಸ್ಟಾರ್ ಪಡೆದಿದೆ. ವಯಸ್ಕರ ಪ್ರಯಾಣ ಹಾಗೂ ಮಕ್ಕಳ ಪ್ರಯಾಣದಲ್ಲಿ ಇದು ಸುರಕ್ಷತೆ ಇಲ್ಲದ ಕಾರು ಎಂದು ಗ್ಲೋಬಲ್ NCAP ಹೇಳಿದೆ.

ಸೇತುವೆಯಿಂದ 15 ಅಡಿ ಕೆಳಕ್ಕೆ ಬಿದ್ದ ಟಾಟಾ ನೆಕ್ಸಾನ್, ಪ್ರಯಾಣಿಕರು ಸೇಫ್!.

ವಯಸ್ಕರ ಪ್ರಯಾಣ ಸುರಕ್ಷತೆಯಲ್ಲಿ ಶೂನ್ಯ ಸ್ಟಾರ್ ಸಂಪಾದಿಸಿರುವ ಮಾರುತಿ ಎಸ್ ಪ್ರೆಸ್ಸೋ, ಮಕ್ಕಳ ಪ್ರಯಾಣ ಸುರಕ್ಷತೆಯಲ್ಲಿ 2 ಸ್ಟಾರ್ ಪಡೆದಿದೆ. ಒಟ್ಟಾರೆಯಾಗಿ ಮಾರುತಿ ಎಸ್ ಪ್ರೆಸ್ಸೋ ಕಾರಿನ ಸುರಕ್ಷತಾ ಫಲಿತಾಂಶ ಶೂನ್ಯ.

ವಯಸ್ಕರ ಪ್ರಯಾಣ ಸುರಕ್ಷತಾ ಪರೀಕ್ಷೆಯಲ್ಲಿ 17 ಅಂಕಗಳ ಪೈಕಿ ಎಸ್ ಪ್ರೆಸ್ಸೋ ಶೂನ್ಯ ಅಂಕ ಪಡೆದಿದೆ. ಇನ್ನ ಮಕ್ಕಳ ಸುರಕ್ಷತೆಯ 49 ಅಂಕಗಳ ಪೈಕಿ 13.84 ಅಂಕ ಪಡೆದಿದೆ.

click me!