ಮಾರುತಿ ಸುಜುಕಿ S ಪ್ರೆಸ್ಸೋ ಸಣ್ಣ SUV ಮಾಡೆಲ್ ಕಾರು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಅಲ್ಟೋ ಎಂಜಿನ್ ಹಾಗೂ ಸಾಮರ್ಥ್ಯದ S ಪ್ರೆಸ್ಸೋ ಕಾರು ಸಂಚಲನ ಮೂಡಿಸುತ್ತಿದ್ದಂತೆ, ಇದೀಗ ಹ್ಯುಂಡೈ ಸಣ್ಣ SUV ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರಿನ ವಿಶೇಷತೆ ಇಲ್ಲಿದೆ.
ನವದೆಹಲಿ(ಜ.26): ಭಾರತ ಕಾರು ಮಾರುಕಟ್ಟೆ ಆಕ್ರಮಿಸಿಕೊಂಡಿರು 2ನೇ ಅತೀ ದೊಡ್ಡ ಅಟೋಮೊಬೈಲ್ ಕಂಪನಿ ಹ್ಯುಂಡೈ ಇದೀಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಮೊದಲ ಸ್ಥಾನದಲ್ಲಿರುವ ಮಾರುತಿ ಸುಜುಕಿ ಕಂಪನಿಗೆ ಹೆಜ್ಜೆ ಹೆಜ್ಜೆಗೂ ಪೈಪೋಟಿ ನೀಡುತ್ತಿರುವ ಹ್ಯುಂಡೈ ಇದೀಗ ಮತ್ತೊಂದು ಹೊಡೆತ ನೀಡಲು ಸಜ್ಜಾಗಿದೆ. ಮಾರುತಿ S ಪ್ರೆಸ್ಸೋ ಕಾರಿಗೆ ಪ್ರತಿಸ್ಪರ್ಧಿಯಾಗಿ ಸ್ಯಾಂಟ್ರೋ SUV ಸಣ್ಣ ಕಾರು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!
undefined
2020 ಆಟೋ ಎಕ್ಸ್ಪೋ ಮೋಟಾರು ಶೋದಲ್ಲಿ ಹ್ಯುಂಡೈ AX ಕಾನ್ಸೆಪ್ಟ್ ಕಾರನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಮಾರುತಿ ಎಸ್ ಪ್ರೆಸ್ಸೋ, ಮಹೀಂದ್ರ KUV100, ಬಿಡುಗಡೆಯಾಗಲಿರುವ ಟಾಟಾ ಹಾರ್ನಬಿಲ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಇದನ್ನೂ ಓದಿ: 10 ದಿನದಲ್ಲಿ 10 ಸಾವಿರ ಬುಕಿಂಗ್; ದಾಖಲೆ ಬರೆದ ಮಾರುತಿ S ಪ್ರೆಸ್ಸೋ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ AX ಕಾನ್ಸೆಪ್ಟ್ ಕಾರು 1.0 ಲೀಟರ್ ಪೆಟ್ರೋಲ್ ಟರ್ಬೋಚಾರ್ಜ್ಡ್ ಎಂಜಿನ್ ಬಳಕೆ ಮಾಡಲಿದೆ. ಸ್ಯಾಂಟ್ರೋ ಕಾರು 1.1 ಲೀಟರ್ NA ಪೆಟ್ರೋಲ್ ಎಂಜಿನ್, 67bhp ಪವರ್ 100Nm ಟಾರ್ಕ್ ಉತ್ಪಾದಿಸಲಿದೆ. 5 ಮಾನ್ಯುಯೆಲ್ ಟ್ಸಾನ್ಸ್‌ಮಿಶನ್ ಹಾಗೂ AMT ಟ್ರಾನ್ಸ್‌ಮಿಶನ್ ಹೊಂದಿದೆ. ನೂತನ ಹ್ಯುಂಡೈಕಾರಿಗೆ 4 ರಿಂದ 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.