11 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು!

Published : Jul 18, 2020, 08:25 PM IST
11 ಸಾವಿರಕ್ಕೆ ಬುಕ್ ಮಾಡಿ ನೂತನ ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು!

ಸಾರಾಂಶ

ಡೀಸೆಲ್ ಕಾರಿಗೆ ಗುಡ್ ಬೈ ಹೇಳಿರುವ ಮಾರುತಿ ಸುಜುಕಿ ಇದೀಗ ನೂತನ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.  ಕೇವಲ 11,000 ರೂಪಾಯಿ ನೀಡಿ ಈ ಕಾರು ಬುಕ್ ಮಾಡಿಕೊಳ್ಳಬಹುದು. ಇದರ ಜೊತೆಗೆ ಬಿಡುಗಡೆ ದಿನಾಂಕವನ್ನೂ ಮಾರುತಿ ಬಹಿರಂಗ ಪಡಿಸಿದೆ.

ನವದೆಹಲಿ(ಜು.18): ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ ಗೊಂಡಿದೆ. ಆಗಸ್ಟ್ 5ರಂದು ನೂತನ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. 2020ರ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಿದ್ದ S ಕ್ರಾಸ್ ಪೆಟ್ರೋಲ್ ಕಾರು ಇದೀಗ ಬಿಡುಗಡೆಗೆ ಸಜ್ಜಾಗಿದೆ. 

 ಹೊಸ ಆಫರ್ ಘೋಷಿಸಿದ ಮಾರುತಿ ಸುಜುಕಿ, ಸುಲಭ ಸಾಲ, ಕಡಿಮೆ ಕಂತು!

ಕೊರೋನಾ ವೈರಸ್ ಕಾರಣ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ವಿಳಂಬವಾಗಿದೆ. ಇದೀಗ ಆಗಸ್ಟ್ 5 ರಂದು ಹೆಚ್ಚುವರಿ ಫೀಚರ್ಸ್, ಆಕರ್ಷಕ ವಿನ್ಯಾಸದ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರು ಬಿಡುಗಡೆಯಾಗಲಿದೆ. ಸಿಗ್ಮಾ, ಡೆಲ್ಟಾ, ಜೆಟಾ ಹಾಗೂ ಆಲ್ಫಾ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯವಿದೆ.

ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿ ಬಿಡುಗಡೆ; ಸತತ 16ನೇ ವರ್ಷ ಪ್ರಶಸ್ತಿ ಗೆದ್ದ ಮಾರುತಿ!.

ಜೊತೆಗೆ ಮೈಲ್ಡ್ ಹೈಬ್ರಿಡ್ ವೇರಿಯೆಂಟ್ ಕೂಡ ಲಭ್ಯವಿದೆ. ಆದರೆ BS6 S ಕ್ರಾಸ್ ಪೆಟ್ರೋಲ್ ವೇರಿಯೆಂಟ್ AMT ಕಾರಿನಲ್ಲಿ ಮಾತ್ರ ಹೈಬ್ರಿಡ್ ಆಯ್ಕೆ ನೀಡಲಾಗಿದೆ.  ಸಿಯಾಝ್ ಕಾರಿನಲ್ಲಿ ಬಳಸಲಾಗಿರುವ ಎಂಜಿನ್ ಇಲ್ಲೂ ಕೂಡ ಬಳಸಲಾಗಿದೆ. 1.5-ಲೀಟರ್ K15B ಮೈಲ್ಡ್ ಹೈಬ್ರಿಡ್ ಎಂಜಿನ್ ಲಭ್ಯವಿದೆ. 112 bhp ಪವರ್ ಹಾಗೂ 134 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ನೂತನ S ಕ್ರಾಸ್ ಪೆಟ್ರೋಲ್ ವೇರಿಯೆಂಟ್ ಕಾರಿನ ಬೆಲೆ 8.5 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು,ಟಾಪ್ ಮಾಡೆಲ್ ಬೆಲೆ 11.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

PREV
click me!

Recommended Stories

50 ಸಾವಿರ ರೂ.ಗೆ ಎಲೆಕ್ಟ್ರಿಕ್ ಸ್ಕೂಟರ್.. ದಿನಾ ಚಿಂತೆಯಿಲ್ಲದೆ ಕಾಲೇಜು, ಆಫೀಸ್‌ಗೆ ಹೋಗ್ಬೋದು!
Mahindra XUV 7XO: ಡಾಲ್ಬಿ ವಿಷನ್, ಅಟ್ಮಾಸ್ ಸೌಂಡ್! ಭಾರತದಲ್ಲೇ ಮೊದಲ ಬಾರಿಗೆ ಬಂದ ಕಾರಿದು!