ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು ಅನಾವರಣ; ಡೀಸೆಲ್‌ಗಿಂತ ಕಡಿಮೆ ಬೆಲೆ!

Suvarna News   | Asianet News
Published : Feb 07, 2020, 08:29 PM ISTUpdated : Feb 07, 2020, 08:38 PM IST
ಮಾರುತಿ ಸುಜುಕಿ S ಕ್ರಾಸ್ ಪೆಟ್ರೋಲ್ ಕಾರು ಅನಾವರಣ; ಡೀಸೆಲ್‌ಗಿಂತ ಕಡಿಮೆ ಬೆಲೆ!

ಸಾರಾಂಶ

ಮಾರುತಿ ಸುಜುಕಿ S ಕ್ರಾಸ್ ಡೀಸೆಲ್ ಕಾರು ಭಾರತದಲ್ಲಿ ಜನಪ್ರಿಯವಾಗಿದೆ. ಇದೀಗ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆಯಾಗಿದೆ. ನೂತನ ಕಾರು ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ ಹೊಂದಿದ್ದು, ಹೆಚ್ಚುವರಿ ಫೀಚರ್ಸ್ ಹಾಗೂ ಆಧುನಿಕ ತಂತ್ರಜ್ಞಾನ ಹೊಂದಿದೆ. 

ಗ್ರೇಟರ್ ನೋಯ್ಡಾ(ಫೆ.07): ಭಾರತದ ಅತೀ ದೊಡ್ಡ ಆಟೋ ಎಕ್ಸ್ಪೋ 2020ಯಲ್ಲಿ ಮಾರುತಿ ಸುಜುಕಿ  S ಕ್ರಾಸ್ ಪೆಟ್ರೋಲ್ ಕಾರು ಅನಾವರಣ ಮಾಡಿದೆ.  S ಕ್ರಾಸ್‌ನಲ್ಲಿ 2 ವೇರಿಯೆಂಟ್ ಲಭ್ಯವಿದೆ. ಪೆಟ್ರೋಲ್ ಹಾಗೂ ಮೈಲ್ಡ್ ಹೈಬ್ರಿಡ್ ಕಾರು ಅನಾವರಣ ಮಾಡಲಾಗಿದೆ. ನೂತನ ಕಾರು BS6 ಎಮಿಶನ್ ಎಂಜಿನ್ ಹೊಂದಿದೆ.

ಇದನ್ನೂ ಓದಿ: ಅತ್ಯುತ್ತಮ ವಿನ್ಯಾಸದ ಮಾರುತಿ ಸುಜುಕಿ ಫ್ಯೂಚರೋ ಇ ಕಾರು ಅನಾವರಣ!

ನೂತನ  S ಕ್ರಾಸ್‌ ಕಾರು 1.5-ಲೀಟರ್, 4 ಸಿಲಿಂಡರ್,  SHVS ಪೆಟ್ರೋಲ್ ಮೋಟಾರ್ ಹೊಂದಿದ್ದು, 104 Bhp ಪವರ್ ಹಾಗೂ 138 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಸದ್ಯ ಮಾರುಕಟ್ಟೆಯಲ್ಲಿ S ಕ್ರಾಸ್‌ ಡೀಸೆಲ್ ಕಾರಿನ ಬೆಲೆ 8.8 ಲಕ್ಷ ರೂಪಾಯಿಂದ ಆರಂಭವಾಗುತ್ತಿದೆ. 

ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರು ಅನಾವರಣ; 32 ಕಿ.ಮೀ ಮೈಲೇಜ್ ದಾಖಲೆ!

ನೂತನ S ಕ್ರಾಸ್‌ ಪೆಟ್ರೋಲ್ ಕಾರಿನ ಬೆಲೆ ಡೀಸೆಲ್ ಕಾರಿಗಿಂತ 50,000 ರೂಪಾಯಿಂದ 1 ಲಕ್ಷ ರೂಪಾಯಿ ವರೆಗೆ ಕಡಿಮೆಯಾಗಲಿದೆ. ಅಟೋ ಎಕ್ಸ್ಪೋದಲ್ಲಿ ಅನಾವರಣಗೊಂಡಿರುವ S ಕ್ರಾಸ್‌ ಪೆಟ್ರೋಲ್ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 
 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ