ಟಾಟಾಗೆ ಪ್ರತಿಸ್ಪರ್ಧಿ ಮಾರುತಿ ಸೂಪರ್ ಕ್ಯಾರಿ ಸಣ್ಣ CNG ಟ್ರಕ್ ಬಿಡುಗಡೆ!

By Suvarna News  |  First Published May 22, 2020, 3:52 PM IST

ಟ್ರಕ್, ಮಿನಿ ಟ್ರಕ್, ಪಿಕ್ ಅಪ್ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿದೆ. ಇದೀಗ ಟಾಟಾ, ಮಹೀಂದ್ರ ಸೇರಿದಂತೆ ಇತರ ಕಂಪನಿಗಳು ಪೈಪೋಟಿ ನೀಡಲು ಮಾರುತಿ ಸುಜುಕಿ ಸೂಪರ್ ಕ್ಯಾರಿ ಮಿನಿ ಟ್ರಕ್ ಬಿಡುಗಡೆ ಮಾಡಿದೆ. ಇದರ ಬೆಲೆ ಹಾಗೂ ಪವರ್ ಕುರಿತ ಮಾಹಿತಿ ಇಲ್ಲಿದೆ.


ನವದೆಹಲಿ(ಮೇ.22): ಮಿನಿ ಟ್ರಕ್, ಪಿಕ್ ಅಪ್ ವಿಭಾಗದಲ್ಲಿ  CNG(ಗ್ಯಾಸ್ ಚಾಲಿತ) ವಾಹನ ಯಾವ ಆಟೋಮೊಬೈಲ್ ಕಂಪನಿಗಳು ಬಿಡುಗಡೆ ಮಾಡಿಲ್ಲ. ಇದೀಗ ಮಾರುತಿ ಸುಜುಕಿ ಸೂಪರ್ ಕ್ಯಾರಿ ಅನ್ನೋ ಮಿನಿ ಟ್ರಕ್ ಬಿಡುಗಡೆ ಮಾಡಿದೆ. ಇದು CNG ವಾಹನವಾಗಿದ್ದು, ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಚಾಲನೆ ಮಾಡಬಹುದು ಅನ್ನೋದು ವಿಶೇಷ.

ಮಾರಾಟ ಹೆಚ್ಚಿಸಲು ಮಾರುತಿ ಸುಜುಕಿ ಸುಲಭ ಸಾಲ; ಗ್ರಾಹಕರಿಗೆ ಸ್ಪೆಷಲ್ ಆಫರ್!.

Tap to resize

Latest Videos

BS6 ಎಮಿಶನ್ ಎಂಜಿನ್ ಹೊಂದಿರು ಈ ಕಮರ್ಷಿಯಲ್ ವಾಹನ ಹೊಸ ಸಂಚಲನ ಮೂಡಿಸಲಿದೆ. CNG ಅನ್ನೋ ಕಾರಣಕ್ಕೆ ಪವರ್ ಕಡಿಮೆ ಎಂದುಕೊಂಡರೆ ತಪ್ಪು. ಕಾರಣ ನೂತನ ಸೂಪರ್ ಕ್ಯಾರಿ ಮಿನಿ ಟ್ರಕ್, 4 ಸಿಲಿಂಡರ್, S-CNG BS6 ಡ್ಯುಯೆಲ್ ಫ್ಯುಯೆಲ್ ಎಂಜಿನ್ ಹೊಂದಿದೆ. 48KW ಪವರ್ ಹಾಗೂ 85NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಡ್ಯುಯೆಲ್ ಫ್ಯುಯೆಲ್ ಸಮಾರ್ಥ್ಯ ಈ ವಾಹನದ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 30 ಲೀಟರ್. ಗರಿಷ್ಠ ವೇಗ 80 ಕಿ.ಮೀ ಪ್ರತಿ ಗಂಟೆಗೆ. ಹಿಂಭಾಗದಲ್ಲಿ ಹೆಚ್ಚಿನ ಲೋಡಿಂಗ್ ಸಾಮರ್ಥ್ಯ ಹೊಂದಿದೆ. ಜೊತೆಗೆ ಸುರಕ್ಷತಾ ಫೀಚರ್ಸ್‌ಗಳಾದ ಸೀಟ್ ಬೆಲ್ಟ್ ಅಲರಾಂ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಸೌಲಭ್ಯಗಳು ಈ ಮಿನಿ ಟ್ರಕ್‌ನಲ್ಲಿದೆ.

ಮಾರುತಿ ಸುಜುಕಿ ಮಿನಿ ಟ್ರಕ್ ಬೆಲೆ 5,07,000 ರೂಪಾಯಿ(ಎಕ್ಸ್ ಶೋ ರೂಂ).

click me!