ಕೊರೋನಾ ವೈರಸ್ ಕಾರಣ ಎಲ್ಲಾ ಉದ್ದಿಮೆಗಳಿಗೂ ಹೊಡೆತ ಬಿದ್ದಿದೆ. ಇದೀಗ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ವಾಹನ ಮಾರಾಟ ಹೆಚ್ಚಳಕ್ಕೆ ಮುಂದಾಗಿದೆ. ಸರ್ಕಾರ ಹೊಸ ನಿಯಮದ ಪ್ರಕಾರ ಗ್ರಾಹಕರ ಮೇಲಿದ್ದ ಹೊರೆ ಮಾತ್ರವಲ್ಲ, ನೂತನ ವಾಹನಗಳ ಬೆಲೆಯೂ ಕಡಿಮೆಯಾಗಲಿದೆ.
ನವದೆಹಲಿ(ಜೂ.10): ಕೊರೋನಾ ವೈರಸ್ ಕಾರಣ ಜನರು ಖರ್ಚು ವೆಚ್ಚಗಳ ಮೇಲೆ ನಿಗಾ ಇರಿಸಿದ್ದಾರೆ. ಇದರ ನಡುವೆ ವ್ಯಾಪಾರ-ವಹಿವಾಟು ಮತ್ತೆ ತಹಬದಿಗೆ ತರಲು ಸರ್ಕಾರ ಹಾಗೂ ಕೈಗಾರಿಕಾ ವಲಯಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಇದೀಗ ವಾಹನ ಮಾರಟ ಹೆಚ್ಚಿಸಲು ಸರ್ಕಾರ ಪ್ಲಾನ್ ಮಾಡಿದೆ. 2018ರಲ್ಲಿ ಜಾರಿಗೆ ಬಂದ ದೀರ್ಘ ಅವದಿಯ ವಿಮೆ ಪಾಲಿಸಿಯನ್ನು ರದ್ದು ಮಾಡಲಾಗಿದೆ. ಇದರಿಂದ ಹೊಸ ವಾಹನಗಳ ಬೆಲೆ ಕಡಿಮೆಯಾಗಲಿದೆ.
ಕಾರು ಕಡಿಮೆ ಓಡಿಸುತ್ತೀರಾ? ಕಡಿಮೆ ಪಾವತಿಸಿ; ಬಂದಿದೆ ಕಿ.ಮೀ ಇನ್ಶುರೆನ್ಸ್!
ವಿಮಾ ನಿಯಂತ್ರಣ ಹಾಗೂ ಅಭಿವೃದ್ದಿ ಪ್ರಾದಿಕಾರ(IRDAI) ವಾಹನಗಳ ಸುದೀರ್ಘ ಇನ್ಶೂರೆನ್ಸ್ ಪಾಲಿಸಿಯನ್ನು ರದ್ದು ಮಾಡಿದೆ. 2020ರ ಆಗಸ್ಟ್‌ನಿಂದ ನೂತನ ನಿಯಮ ಜಾರಿಯಾಗಲಿದೆ. 2018ರಲ್ಲಿ ಸುಪ್ರೀಂ ಕೋರ್ಟ್ ವಾಹನ ವಿಮಾ ಪಾಲಿಸಿಯಲ್ಲಿ ಬದಲಾವಣೆ ತಂದಿತ್ತು. ಈ ಪ್ರಕಾರ, ಕಾರು ಸೇರಿದಂತೆ ನಾಲ್ಕು ಚಕ್ರದ ವಾಹನಗಳ ವಿಮೆಯನ್ನು 1 ವರ್ಷದಿಂದ 3 ವರ್ಷಕ್ಕೆ ಏರಿಸಲಾಯಿತು. ಇನ್ನು ದ್ವಿಚಕ್ರ ವಾಹನಗಳ ಇನ್ಶೂರೆನ್ಸ್ 1 ವರ್ಷದಿಂದ 5 ವರ್ಷಕ್ಕೆ ಏರಿಸಲಾಯಿತು.
BS6 ಎಮಿಶನ್ ಜೊತೆ ಮತ್ತೊಂದು ನಿಯಮ ಕಡ್ಡಾಯ ಮಾಡಿದ ಕೇಂದ್ರ ಸರ್ಕಾರ!.
ಸುದೀರ್ಘ ಇನ್ಶೂರೆನ್ಸ್‌ನಿಂದ ವಾಹನ ಆನ್ ರೋಡ್ ಬೆಲೆ ಹೆಚ್ಚಾಯಿತು. ಇದೀಗ ಕೊರೋನಾ ವೈರಸ್ ಕಾರಣ ಮಾರಾಟ ಹೆಚ್ಚಿಸಲು IRDAI ರದ್ದು ಮಾಡಿದೆ. ಈ ಮೂಲಕ ಹೊಸ ವಾಹನಕ್ಕೆ ಹಿಂದಿನಂತೆ 1 ವರ್ಷದ ಇನ್ಶೂರೆನ್ಸ್ ಇರಲಿದೆ. ಸಾಲ ಸೌಲಭ್ಯ ಪಡೆದು ಕಾರು ಖರೀದಿಸುವಾಗ ದೀರ್ಘವಾದಿ ಇನ್ಶೂರೆನ್ಸ್‌ನಿಂದ ಗ್ರಾಹಕರು ಕಾರಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇದೀಗ ಈ ಸಮಸ್ಯೆಗೆ ಮುಕ್ತಿ ಹಾಡಲಾಗಿದೆ.