BS6 ಮಾರುತಿ ಅಲ್ಟೋ S ಬಿಡುಗಡೆ; ಕಡಿಮೆ ಬೆಲೆಯ CNG ಕಾರು!

By Suvarna News  |  First Published Jan 27, 2020, 3:28 PM IST

ಮಾರುತಿ ಅಲ್ಟೋ CNG ಕಾರು ಹೊಸ ಎಂಜಿನ್ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ನೂತನ ಅಲ್ಟೋ ಎಸ್ CNG ಕಾರು, BS6 ಎಂಜಿನ್ ಹೊಂದಿದೆ. ಎರಡು ವೇರಿಯೆಂಟ್ ಹೊಂದಿರುವ ನೂತನ ಕಾರಿನ ವಿವರ, ಬೆಲೆ ಇಲ್ಲಿದೆ.


ನವದೆಹಲಿ(ಜ.27): ಮಾರುತಿ ಸುಜುಕಿ ಎಸ್ CNG ಟೆಕ್ನಾಲಜಿ BS6 ಎಂಜಿನ್ ಕಾರು ಬಿಡುಗಡೆಯಾಗಿದೆ.  LXI S-CNG ಹಾಗೂ LXI (O) S-CNG ಎಂಬ ಎರಡು ವೇರಿಯೆಂಟ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರು ಡ್ಯುಯೆಲ್ ಇಂಟರ್ ECUs (Electronic Control Units) ಹೊಂದಿದೆ. ಹೀಗಾಗಿ ಪ್ರತಿ ಕೆಜಿಗೆ ಬರೋಬ್ಬರಿ 31.59 km ಮೈಲೇಜ್ ನೀಡಲಿದೆ.

ಇದನ್ನೂ ಓದಿ: 

Latest Videos

undefined

ನೂತನ ಕಾರು LXI S-CNG ವೇರಿಯೆಂಟ್ ಬೆಲೆ 4.32 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ LXI (O) S-CNG ವೇರಿಯೆಂಟ್ ಬೆಲೆ 4.36 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಭಾರತದ ಗ್ರಾಹಕರಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಪರಿಸರ ಸ್ನೇಹಿ ವಾಹಳನ್ನು ನೀಡುತ್ತೇವೆ ಎಂದು ಮಾರ್ಕೆಂಟ್ & ಸೇಲ್ಸ್ ನಿರ್ದೇಶಕ ಶಶಾಂಕ್ ಶ್ರೀವಾತ್ಸವ್ ಹೇಳಿದ್ದಾರೆ.

ಇದನ್ನೂ ಓದಿ: ಸೆಲ್ಟೋಸ್, ಕ್ರೆಟಾಗೆ ಪ್ರತಿಸ್ಪರ್ಧಿ; ಬರುತ್ತಿದೆ ಮಾರುತಿ ಸುಜುಕಿ ಫ್ಯೂಚರೋ ಇ ಕಾರು!

ನೂತನ ಮಾರುತಿ ಅಲ್ಟೋ CNG ಕಾರು ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಸಾಮರ್ಥ್ಯದಲ್ಲಿ ಕೊಂಚ ಬದಲಾವಣೆ ಇದೆ. 796 cc ಎಂಜಿನ್, 40.36 bhp ಹಾಗೂ 60 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ಪೆಟ್ರೋಲ್ ಎಂಜಿನ್ ಕಾರು 47.33 bhp ಪವರ್ ಹಾಗೂ 69 Nm ಪೀಕ್ ಉತ್ಪಾದಿಸಲಿದೆ. ಇನ್ನು CNG ಕಾರು 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. 

ಇದನ್ನೂ ಓದಿ:ಮಾರುತಿ ಸುಜುಕಿ ಇಕೋ BS6 ಕಾರು ಲಾಂಚ್; ಬೆಲೆ ಕೇವಲ 3.81 ಲಕ್ಷ ರೂ!

ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), EBD(ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್), ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂ, ಹೈ ಸ್ಪೀಡ್ ಅಲರ್ಟ್, ಡ್ಯುಯೆಲ್ ಏರ್‌ಬ್ಯಾಗ್ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.
 

ಜನವರಿ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!