ಭಾರತದ ಅತೀ ದೊಡ್ಡ ಅಟೋ ಎಕ್ಸ್ಪೋ 2020 ಆರಂಭಗೊಂಡಿದೆ. ಪ್ರತಿ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ ಕಾರುಗಳನ್ನು ಪರಚಯಿಸಿದೆ. ಭಾರತದ ಅತೀ ದೊಡ್ಡ ಅಟೋಮೊಬೈಲ್ ಕಂಪನಿ ಮಾರುತಿ ಸುಜುಕಿ ನೂತನ ಫ್ಯೂಚರೋ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ.
ಗ್ರೇಟರ್ ನೋಯ್ಡಾ(ಫೆ.05): ಮಾರುತಿ ಸುಜುಕಿ ನೂತನ ಫ್ಯುಚರೋ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ಅನಾವರಣ ಮಾಡಿದೆ. ಮೊದಲ ನೋಟಕ್ಕೆ ಆಕರ್ಷಕ ವಿನ್ಯಾಸ ಎಲ್ಲರನ್ನು ಆಕರ್ಷಿಸುತ್ತಿದೆ. ಮಾರುತಿ ಸುಜುಕಿ ವ್ಯಾಗನರ್ ಎಲೆಕ್ಟ್ರಿಕ್ ಕಾರು 2020ರ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಇದೀಗ ಮತ್ತೊಂದು ಹೊಸ ಎಲೆಕ್ಟ್ರಿಕ್ ಕಾರನ್ನು ಮಾರುತಿ ಪರಿಚಯಿಸಿದೆ.
. begins the by the unveiling the concept Futuro - E. pic.twitter.com/asRjK551C8
— Chetan Bhutani (@BhutaniChetan)undefined
ಇದನ್ನೂ ಓದಿ: ಮಾರುತಿ ಸ್ವಿಫ್ಟ್ ಹೈಬ್ರಿಡ್ ಕಾರು ಅನಾವರಣ; 32 ಕಿ.ಮೀ ಮೈಲೇಜ್ ದಾಖಲೆ!
ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಮಾರುತಿ ಫ್ಯುಚರೋ ಕಾರು ಎಲೆಕ್ಟ್ರಿಕ್ ಹಾಗೂ ಪೆಟ್ರೋಲ್ ವೇರಿಯೆಂಟ್‌ಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಇದೀಗ ಕಾನ್ಸೆಪ್ಟ್ ಕಾರನ್ನು ಅಟೋ ಎಕ್ಸೋಪದಲ್ಲಿ ಅನಾವರಣ ಮಾಡಲಾಗಿದ್ದು, ಸಂಚಲನ ಮೂಡಿಸಿದೆ.
Here we go, the first unveil of : electric coupe-SUV. headlines Maruti’s charge towards, well, a green future
No word on powertrain or when it’ll be launched. It’s a concept. pic.twitter.com/GZlEvNc8NX
ಇದನ್ನೂ ಓದಿ: ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು; ಮಹೀಂದ್ರ eKUV100 ಲಾಂಚ್!
ಮಾರುತಿ ಸುಜಕಿ ನೂತನ ಫ್ಯುಚರೋ ಎಲೆಕ್ಟ್ರಿಕ್ ಕಾರು 2021ರಲ್ಲಿ ಬಿಡುಗಡೆಯಾಗಲಿದೆ. ಮುಂಭಾಗದಲ್ಲಿ ಸಿಂಗಲ್ ಲಾರ್ಜ್ ಹೆಡ್‌ಲ್ಯಾಂಪ್ಸ್, ಮುಂಭಾಗದ ಗ್ರಿಲ್, ಬಂಪರ್ ಸೇರಿದಂತೆ ಎಲ್ಲವೂ ಇತರ ಕಾರಿಗಿಂತ ಭಿನ್ನವಾಗಿದೆ.
ಸ್ಪೋರ್ಟೀವ್ ಹಾಗೂ ಅಗ್ರಸ್ಸೀವ್ ಲುಕ್ ಹೊಂದಿರುವ ನೂತನ ಕಾರು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡರಲಿದೆ. ಕಾರಿನ ಡಿಸೈನ್ ಕುರಿತು ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಕೆನಿಚಿ ಅಯಕವ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ನೂತನ ಫ್ಯುಚರೋ ಇ ಕಾರಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ ಎಂದು ಕೆನಿಚಿ ಹೇಳಿದ್ದಾರೆ.