ನೀರವ್ ಮೋದಿಗೆ ಮತ್ತೊಂದು ಶಾಕ್ ನೀಡಿದ ಕೇಂದ್ರ!

By Web Desk  |  First Published Feb 28, 2019, 8:24 PM IST

ಬ್ಯಾಂಕ್‌ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿಗೆ ED ಮತ್ತೊಂದು ಶಾಕ್ ನೀಡಿದೆ.  5.25 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನ ED ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 


ಮುಂಬೈ(ಫೆ.28): ಬ್ಯಾಂಕ್‌ಗೆ  ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಭಾರತೀಯ ಉದ್ಯಮಿ ನೀರವ್ ಮೋದಿ ಆಸ್ತಿ ಮೇಲೆ ಇದೀಗ ED ಮತ್ತೊಂದು ದಾಳಿ ನಡೆಸಿದೆ. ಈಗಾಗಲೇ ನೀರವ್ ಮೋದಿ ಆಸ್ತಿ ಹಾಗೂ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿರುವ ಪೊಲೀಸರು ಇದೀಗ ಮತೊಂದು ಕಾರನ್ನೂ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಗೊತ್ತಿಲ್ದೇ ಇರೋ ಟ್ರಾಫಿಕ್ ನಿಯಮ -ಅಪರಿಚಿತರಿಗೆ ಲಿಫ್ಟ್, ಕಾರಿನಲ್ಲಿ ಟಿವಿ ನಿಷೇಧ!

Tap to resize

Latest Videos

undefined

ನೀರವ್ ಮೋದಿಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ED ಈಗಾಗಲೇ ರೋಲ್ಸ್ ರಾಯ್ಸ್, ಪೋರ್ಶೆ, ಮರ್ಸಡೀಸ್ ಬೆಂಝ್ ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಜಪ್ತಿ ಮಾಡಿದ್ದರು. ಇದೀಗ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನED ಪೊಲೀಸರು ಜಪ್ತಿ ಮಾಡಿದ್ದಾರೆ.

ನೀರವ್ ಮೋದಿ ಪರಾರಿಯಾದ ದಿನದಿಂದ 5.25 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಶೋಂ ರೂಂನಲ್ಲೇ ಉಳಿದಿತ್ತು. ಸರ್ವೀಸ್ ಮಾಡಲು ಶೋ ರೂಂಗೆ ಕೊಟ್ಟಿದ್ದ ನೀರವ್ ಮೋದಿ ಬಳಿಕ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 12,500 ಕೋಟಿ ರೂಪಾಯಿ ವಂಚನೆ ಪ್ರಕರಣದಿಂದ ದೇಶ ಬಿಟ್ಟು ಪರಾರಿಯಾದರು. ಹೀಗಾಗಿ ಕಾರು ಶೋ ರೊಂನಲ್ಲಿ ಉಳಿದ್ದ ಈ ಕಾರನ್ನು ED ಪೊಲೀಸರು ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಹ್ಯುಂಡೈ ಕ್ರೆಟಾ ಸದ್ದಡಗಿಸಲು ಬರುತ್ತಿದೆ ಟಾಟಾ ಬ್ಲಾಕ್‌ಬರ್ಡ್!

ನೀರವ್ ಮೋದಿಯ  ರೋಲ್ಸ್ ರಾಯ್ಸ್ ಸೆಡಾನ್, ಪೊರ್ಶೆ ಪನಾಮೆರಾ, ಮರ್ಸಡೀಸ್ ಬೆಂಝ್ GLS 350 CDI, ಮರ್ಸಡೀಸ್ ಬೆಂಝ್ CLS, ಹೊಂಡಾ CR-V, ಟೊಯೊಟಾ ಇನೋವಾ, ಟೊಯಾಟ ಫಾರ್ಚುನರ್ ಸೇರಿದಂತೆ ಹಲವು ಐಷಾರಾಮಿ ಕಾರುಗಳು ಕೂಡ ಜಪ್ತಿ ಮಾಡಲಾಗಿದೆ. 
 

click me!