ಮಾರುತಿ ಸುಜುಕಿ ಇಕೋ BS6 ಕಾರು ಲಾಂಚ್; ಬೆಲೆ ಕೇವಲ 3.81 ಲಕ್ಷ ರೂ!

By Suvarna NewsFirst Published Jan 18, 2020, 4:05 PM IST
Highlights

ಮಾರುತಿ ಸುಜುಕಿ ಕಾರುಗಳು ಅಪ್‌ಗ್ರೇಡ್ ಆಗುತ್ತಿದೆ. ಇದೀಗ ಎಲ್ಲಾ ಕಾರುಗಳು BS6 ಎಂಜಿನ್ ಕಾರುಗಳಾಗಿ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ನೇ ಇಕೋ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ನೂತನ ಕಾರಿನ ವಿಶೇಷತೆ, ಬೆಲೆ ವಿವರ ಇಲ್ಲಿದೆ. 

ನವದೆಹಲಿ(ಜ.18): ಕನಿಷ್ಠ ಸುರಕ್ಷತೆ ಹಾಗೂ BS6 ಎಮಿಶನ್ ನಿಯಮ ಜಾರಿಯಾಗುತ್ತಿದ್ದಂತೆ ಮಾರುತಿ ಇಕೋ ಕಾರು ಸ್ಥಗಿತಗೊಳ್ಳಲಿದೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಮಾರುತಿ ಊಹಾಪೋಹಗಳಿಗೆ ಮಾರುತಿ ತಕ್ಕ ಉತ್ತರ ನೀಡಿದೆ.  ಮಾರುತಿ ಸುಜುಕಿ ಇಕೋ ಕಾರು BS6 ಎಂಜಿನ್ ಅಪ್‌ಗ್ರೇಡ್ ಮೂಲಕ ಬಿಡುಗಡೆಯಾಗಿದೆ. ನೂತನ ಕಾರು ಎಲ್ಲಾ ನಿಯಮಗಳನ್ನು ಪಾಲಿಸಿದೆ.

ಇದನ್ನೂ ಓದಿ: ಇನೋವಾ ಪ್ರತಿಸ್ಪರ್ಧಿ; ಕಿಯಾ ಕಾರ್ನಿವಲ್ ಟೀಸರ್ ರಿಲೀಸ್!

ಮಾರುತಿ ಸುಜುಕಿ ಇಕೋ BS6 ಎಂಜಿನ್ ಕಾರಿನ ಬೆಲೆ 3.81 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭವಾಗಲಿದೆ. BS6 ಎಂಜಿನ್ ಹೊರತು ಪಡಿಸಿದರೆ ಇತರ ಯಾವುದೇ ಬದಲಾವಣೆಗಳಿಲ್ಲ. ನೂತನ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್,  4 ಸಿಲಿಂಡರ್ ಹೊಂದಿದ್ದು 73 bhp ಪವರ್ 101 nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 

ಇದನ್ನೂ ಓದಿ: ಟಾಟಾ ನೆಕ್ಸಾನ್ ಬಳಿಕ ಅಲ್ಟ್ರೋಝ್ ದೇಶದ ಅತ್ಯಂತ ಸುರಕ್ಷತೆ ಕಾರು; ಸೇಫ್ಟಿ ರಿಸಲ್ಟ್ ಬಹಿರಂಗ!

ನೂತನ ಮಾರುತಿ ಸುಜುಕಿ ಇಕೋ ಕಾರಿನ ಮೈಲೇಜ್ 21.8kmpl. 2010ರಲ್ಲಿ ಮಾರುತಿ ಸುಜುಕಿ ಇಕೋ ಕಾರು ಬಿಡುಗಡೆಯಾಯಿತು. 2 ವರ್ಷದಲ್ಲಿ 1 ಲಕ್ಷ ಕಾರು ಮಾರಾಟವಾಗೋ ಮೂಲಕ ದಾಖಲೆ ಬರೆದಿತ್ತು. ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಿರುವ 7 ಸೀಟರ್ ಕಾರು ಅನ್ನೋ ಹೆಗ್ಗಳಿಕೆಗೆ ಇಕೋ ಕಾರು ಪಾತ್ರವಾಗಿದೆ. 

click me!