ಮಾರುತಿ ಡಿಸೈರ್ BS-VI ಕಾರು ಬಿಡುಗಡೆ- ಬೆಲೆ ಬದಲಾವಣೆ!

By Web Desk  |  First Published Jun 21, 2019, 4:57 PM IST

ಮಾರುತಿ ಸುಜುಕಿ ಡಿಸೈರ್ ಕಾರು ಅಪ್‌ಗ್ರೇಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಿದೆ. ಇದರ ಜೊತೆ ಕೆಲ ಫೀಚರ್ಸ್‌ಗಳನ್ನು ಸೇರಿಸಲಾಗಿದೆ. ಅಪ್‌ಗ್ರೇಡ್ ಡಿಸೈರ್ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.


ನವದಹೆಲಿ(ಜೂ.21): ಮಾರುತಿ ಸುಜುಕಿ ತನ್ನ ಕಾರುಗಳನ್ನು ಅಪ್‌ಗ್ರೇಡ್ ಮಾಡುತ್ತಿದೆ. 2020ರ ಎಪ್ರಿಲ್‌ನಿಂದ ಭಾರತದಲ್ಲಿ BS-VI ಎಮಿಶನ್ ಎಂಜಿನ್ ಕಾರುಗಳಿಗೆ ಮಾತ್ರ ಮಾರಾಟಕ್ಕೆ ಅವಕಾಶ. ಹೀಗಾಗಿ ಮಾರುತಿ ಸೇರಿದಂತೆ ಎಲ್ಲಾ ಕಾರು ಕಂಪನಿಗಳು ಎಂಜಿನ್ ಅಪ್‌ಗ್ರೇಡ್ ಮಾಡಿ ಕಾರು ಬಿಡುಗಡೆ ಮಾಡುತ್ತಿದೆ.  ಇದೀಗ ಮಾರುತಿ ಸುಜುಕಿ ಡಿಸೈರ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ಸಿಎಂ ಜಗನ್ ಮೋಹನ್ ರೆಡ್ಡಿಗೆ ಬುಲೆಟ್ ಪ್ರೂಫ್ ಕಾರು- ಬೆಲೆ ಎಷ್ಟು?

Tap to resize

Latest Videos

undefined

ಮಾರುತಿ ಸುಜುಕಿ ಈಗಾಗಲೇ ಬಲೆನೊ ಕಾರನ್ನು BS-VI ಎಂಜಿನ್ ಅಪ್‌ಗ್ರೇಡ್ ಮಾಡಿ ಬಿಡುಗಡೆ ಮಾಡಿದೆ. ಇದೀಗ ಡಿಸೈರ್ ಕೂಡ  ಅಪ್‌ಗ್ರೇಡ್ ಆಗಿದೆ. 2017ರಲ್ಲಿ ನೂತನ ಡಿಸೈರ್ ಕಾರು ಬಿಡುಗಡೆಯಾಗಿತ್ತು. ಇದೀಗ ಅಪ್‌ಗ್ರೇಡೆಡ್ ವರ್ಶನ್ ಬಿಡುಗಡೆಯಾಗಿದೆ.  BS-VI ಎಂಜಿನ್ ಅಪ್‌ಗ್ರೇಡ್‌ನಿಂದ ಡಿಸೈರ್ ಕಾರಿನ ಬೆಲೆ ಗರಿಷ್ಠ 12,690 ರೂಪಾಯಿ ಹೆಚ್ಚಾಗಿದೆ. ಬೇಸ್ ಮಾಡೆಲೆ ಬೆಲೆ 3,000 ರೂಪಾಯಿ ಹೆಚ್ಚಾಗಿದೆ.

ಇದನ್ನೂ ಓದಿ: ಹೆಲ್ಮೆಟ್ ಇಲ್ಲದ ಸವಾರರನ್ನು ಅಡ್ಡಹಾಕಬೇಡಿ, ದಂಡ ಹಾಕಿ-ಮುಖ್ಯಮಂತ್ರಿ!

 BS-VI ಎಂಜಿನ್ ಅಪ್‌ಗ್ರೇಡ್ ಜೊತೆಗೆ ಸೀಟ್ ಬೆಲ್ಟ್ ರಿಮೈಂಡರ್, ಹೈ ಸ್ಪೀಡ್ ವಾರ್ನಿಂಗ್,ರೇರ್ ಪಾರ್ಕಿಂಗ್ ಸೆನ್ಸಾರ್ ಫೀಚರ್ಸ್ ಮ್ಯಾಂಡೇಟರಿ ಮಾಡಲಾಗಿದೆ. ಜುಲೈ 2019ರಿಂದ ಈ ಫೀಚರ್ಸ್ ಎಲ್ಲಾ ವೇರಿಯೆಂಟ್ ಕಾರಿಗೆ ಕಡ್ಡಾಯವಾಗಿದೆ, ಹೀಗಾಗಿ ಮಾರುತಿ ಡಿಸೈರ್ ಕಾರಿನ ಎಲ್ಲಾ ವೇರಿಯೆಂಟ್‌ಗಳಲ್ಲಿ ABS ಜೊತೆಗೆ ನೂತನ ಫೀಚರ್ಸ್ ಲಭ್ಯವಿದೆ. 

click me!