ಸಿಎಂ ಜಗನ್ ಮೋಹನ್ ರೆಡ್ಡಿಗೆ ಬುಲೆಟ್ ಪ್ರೂಫ್ ಕಾರು- ಬೆಲೆ ಎಷ್ಟು?

Published : Jun 20, 2019, 08:56 PM ISTUpdated : Jun 20, 2019, 09:07 PM IST
ಸಿಎಂ ಜಗನ್ ಮೋಹನ್ ರೆಡ್ಡಿಗೆ ಬುಲೆಟ್ ಪ್ರೂಫ್ ಕಾರು- ಬೆಲೆ ಎಷ್ಟು?

ಸಾರಾಂಶ

ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಗೆ Z+ ಭದ್ರತೆ ನೀಡಲಾಗಿದೆ. ಇಷ್ಟೇ ಅಲ್ಲ ಟೊಯೊಟಾ ಫಾರ್ಚುನರ್ ಬುಲೆಟ್ ಪ್ರೂಫ್ ಕಾರು ಕೂಡ ನೀಡಲಾಗಿದೆ. ಈ ಕಾರಿನ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ.

ಆಂಧ್ರಪ್ರದೇಶ(ಜೂ.20): ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಭಾರಿ ಸದ್ದು ಮಾಡುತ್ತಿದ್ದಾರೆ. ಜಗನ್‌ಗೆ ಇದೀಗ Z+ ಭದ್ರತೆ ನೀಡಲಾಗಿದೆ. ಇಷ್ಟೇ ಅಲ್ಲ ಬುಲೆಟ್ ಪ್ರೂಫ್ ಟೊಯೊಟಾ ಫಾರ್ಚುನರ್ ಕಾರು ಕೂಡ ನೀಡಲಾಗಿದೆ. ಇದೀಗ ಜಗನ್ ಎಲ್ಲೆ ತೆರಳುತ್ತಿದ್ದರೂ Z+ ಭದ್ರತೆ ಇರಲಿದೆ. ಜಗನ್ ಟೊಯೊಟಾ ಫಾರ್ಚುನರ್ ಬುಲೆಟ್ ಪ್ರೂಫ್ ಕಾರಿನ ಜೊತೆಗೆ ಭದ್ರತೆ ನೀಡೋ ಪೊಲೀಸರಿಗೆ 5 ಬುಲೆಟ್ ಪ್ರೂಫ್ ಕಾರು ನೀಡಲಾಗಿದೆ.

ಇದನ್ನೂ ಓದಿ: ಕಿಯಾ ಸೆಲ್ಟೊಸ್ SUV ಅನಾವರಣ-ಇಲ್ಲಿದೆ ಕಾರಿನ ಬೆಲೆ, ವಿಶೇಷತೆ !

ಜಗನ್ ಮೋಹನ್ ರೆಡ್ಡಿಯ Z+ ಭದ್ರತೆಗೆ ಒಟ್ಟು 6 ಬುಲೆಟ್ ಪ್ರೂಫ್ ಕಾರು ನೀಡಲಾಗಿದೆ. ಪ್ರತಿ ಕಾರಿನ ಬೆಲೆ 50 ಲಕ್ಷ ರೂಪಾಯಿ. ಹೀಗಾಗಿ ಜಗನ್ ಭದ್ರತೆಗೆ ಒಟ್ಟು 3 ಕೋಟಿಯ ಕಾರು ನೀಡಲಾಗಿದೆ. ಜಗನ್‌ ಬಳಸೋ ಟೊಯೊಟಾ ಲ್ಯಾಂಡ್ ಕ್ರೂಸರ್ ಬುಲೆಟ್ ಪ್ರೂಪ್ ಕಾರಿನ ಬೆಲೆ  1 ಕೋಟಿ, ಇನ್ನು ಬುಲೆಟ್ ಪ್ರೂಫ್ ಮಾಡಿಫಿಕೇಶನ್‌ಗೆ 50 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ. ಹೀಗಾಗಿ ಜಗನ್ ಬಳಸೋ ಟೊಯೊಟಾ ಲ್ಯಾಂಡ್ ಕ್ರೂಸರ್ ಬುಲೆಟ್ ಪ್ರೂಪ್ ಕಾರಿನ ಒಟ್ಟು ಬೆಲೆ 1.50 ಕೋಟಿ ರೂಪಾಯಿ.

 

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನ ಬಳಕೆಗೆ ಮೋದಿ ಸರ್ಕಾರ ಹೊಸ ಯೋಜನೆ- ರಿಜಿಸ್ಟ್ರೇಶನ್ ಉಚಿತ!

ಭಾರತೀಯ ರಾಜಕಾರಣಿಗಳ ಬೆಂಗಾವಲು ಪಡೆ ಹೆಚ್ಚಾಗಿ ಟೊಯೊಟಾ ಫಾರ್ಚುನರ್ ಬುಲೆಟ್ ಪ್ರೂಪ್ ವಾಹನವನ್ನೇ ಬಳಸಲಾಗುತ್ತಿದೆ. ಪ್ರದಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ಕೂಜ ಕಪ್ಪು ಬಣ್ಣದ ಟೊಯೊಟಾ ಫಾರ್ಚುನರ್ ಬುಲೆಟ್ ಪ್ರೂಫ್ ವಾಹನ ಬಳಕೆ ಮಾಡುತ್ತಿದೆ. ಇನ್ನು ಭಾರತದ ಉದ್ಯಮಿ ಮುಕೇಶ್ ಅಂಬಾನಿ ಬೆಂಗಾವಲು ಪಡೆ ಕೂಡ ರೇಂಜ್ ರೋವರ್ ಜೊತೆಗೆ ಟೊಯೊಟಾ ಫಾರ್ಚುನರ್ ಬುಲೆಟ್ ಪ್ರೂಫ್ ವಾಹನ ಬಳಸುತ್ತಿದೆ.

PREV
click me!

Recommended Stories

ಹೊಸ ವರ್ಷಕ್ಕೆ ಹೊಸ ಫಾಸ್ಟಾಗ್ ನೀತಿ, ಟೋಲ್ ಪ್ಲಾಜಾದಲ್ಲಿ ಗೇಟ್ ಇರಲ್ಲ,ಸ್ಲೋ ಮಾಡಬೇಕಿಲ್ಲ
ಬರ್ಲಿನ್‌ನಲ್ಲಿ ಟಿವಿಎಸ್‌ ಬೈಕ್ : ರಾಹುಲ್‌ ಗಾಂಧಿ ಭಾರಿ ಮೆಚ್ಚುಗೆ