ಮಾರುತಿ ಸುಜುಕಿ ಕೈ ಹಿಡಿದ ಆಗಸ್ಟ್; ಮಾರಾಟದಲ್ಲಿ ದಾಖಲೆ !

By Suvarna News  |  First Published Sep 1, 2020, 3:43 PM IST

ಕೊರೋನಾ ವೈರಸ್ ಕಾರಣ ಕಳೆದ ಮಾರ್ಚ್‌ನಿಂದ ಭಾರತೀಯ ಆಟೋಮೊಬೈಲ್ ಮಾರಾಟ ಸಂಪೂರ್ಣ ನೆಲಕಚ್ಚಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ವಾಹನ ಮಾರಾಟ ಚೇತರಿಕೆ ಕಂಡರೂ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ಇದೀಗ ಆಗಸ್ಟ್ ತಿಂಗಳ ಮಾರಾಟದ ವಿವರ ಬಹಿರಂಗವಾಗಿದೆ. ಮಾರುತಿ ಸುಜುುಕಿ ದಾಖಲೆ ಬರೆದಿದೆ.


ನವದೆಹಲಿ(ಸೆ.01): ಅನ್‌ಲಾಕ್ ಆರಂಭಗೊಂಡ ಬಳಿಕ ದೇಶದಲ್ಲಿ ವಾಹನ ಮಾರಾಟ ಚೇತರಿಕೊಂಡಿದೆ. ಆದರೆ ನಿರೀಕ್ಷಿತ ಮಟ್ಟ ತಲುಪಿಲ್ಲ. ಇದೀಗ ಸಾಲು ಸಾಲು ಹಬ್ಬಗಳಿಂದ ಮಾರಾಟ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಅನ್ನೋದು ಆಟೋಮೊಬೈಲ್ ದಿಗ್ಗಜರ ಮಾತು. ಕಳೆದ ಜೂನ್ ತಿಂಗಳಿನಿಂದ ಚೇತರಿಕೆ ಕಾಣುತ್ತಿದ್ದ ವಾಹನ ಮಾರಾಟ, ಆಗಸ್ಟ್ ತಿಂಗಳಲ್ಲಿ ಕೊಂಚ ಸಮಾಧಾನಕರವಾಗಿದೆ. ಮಾರುತಿ ಸುಜುಕಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆಗ್ಟ್ ತಿಂಗಳು ದಾಖಲೆಯಾಗಿದೆ. 

ಡೌನ್‌ ಪೇಮೆಂಟ್ ಇಲ್ಲ, 17ಸಾವಿರ ಪಾವತಿಸಿ ಲೀಸ್ ಮೂಲಕ ಪಡೆಯಿರಿ ಮಾರುತಿ ಸಿಫ್ಟ್!

ಭಾರತದಲ್ಲಿ ಮಾರುತಿ ಸುಜುಕಿ ಆಗಸ್ಟ್ ತಿಂಗಳಲ್ಲಿ ಒಟ್ಟು 1,16,704 ವಾಹನ ಮಾರಾಟ ಮಾಡಿದೆ. 2019ರ ಆಗಸ್ಟ್ ತಿಂಗಳಲ್ಲಿ ಮಾರುತಿ ಸುಜುಕಿ ಭಾರತದಲ್ಲಿ 94,728 ವಾಹನ ಮಾರಾಟ ಮಾಡಿತ್ತು. ಕಳೆದ ವರ್ಷ ವಾಹನ ಮಾರಾಟದಲ್ಲಿ ಭಾರಿ ಕುಸಿತ ಕಂಡಿತ್ತು. ಇದೀಗ ಚೇತರಿಕೆ ಕಂಡಿದೆ.  ಮಾರುತಿ ಸಜುಕಿ ವಾಹನ ಮಾರಾಟದಲ್ಲಿ ಕಳೆದ ವರ್ಷಕ್ಕೆ ಹೊಲಿಸಿದರೆ ಆಗಸ್ಟ್ ತಿಂಗಳಲ್ಲಿ 26.8% ಏರಿಕೆ ಕಂಡಿದೆ.

Tap to resize

Latest Videos

undefined

ಎಲೆಕ್ಟ್ರಿಕ್ ವಾಹನಗಳಿಗೆ ಭಾರಿ ಬೇಡಿಕೆ; ವ್ಯಾಗನರ್ EV ಕಾರು ಬಿಡುಗಡೆಗೆ ಮಾರುತಿ ತಯಾರಿ!.

2020ರ ವಿಟಾರ ಬ್ರಿಜಾ, ಹೊಚ್ಚ ಹೊಸ ಎಸ್ ಕ್ರಾಸ್, ಎರ್ಟಿಗಾ ಹಾಾಗೂ XL6 ಕಾರು ಮಾರಾಟ ಉತ್ತಮವಾಗಿದೆ. ಸಬ್ ಸೆಗ್ಮೆಂಟ್ ವಾಹನ ಮಾರಾಟ ಶೇಕಡಾ 13.5 ರಷ್ಟು ಏರಿಕೆ ಕಂಡಿದೆ.  ಆದರೆ ಸೆಡಾನ್ ಸೆಗ್ಮೆಂಟ್‌ನಲ್ಲಿ ಮಾರುತಿ ಸುಜುಕಿ ಸಿಯಾಝ್ ಕಾರು ನಿರೀಕ್ಷಿತ ಮಾರಾಟ ಕಂಡಿಲ್ಲ. ಆಗಸ್ಟ್ ತಿಂಗಳಲ್ಲಿ ಕೇವಲ 1,223 ಕಾರು ಮಾತ್ರ ಮಾರಾಟವಾಗಿದೆ.

ಮಾರುತಿ ಸುಜುಕಿ ಕಾರುಗಳ ರಫ್ತಿನಲ್ಲಿ ಗಣನೀಯ ಕುಸಿತ ಕಂಡಿದೆ. ಕಳೆದ ತಿಂಗಳು(ಆಗಸ್ಟ್) 15.3% ರಫ್ತು ವಹಿವಾಟಿನಲ್ಲಿ ಕುಸಿತ ಕಂಡಿದೆ. ಕೇವಲ 7,920 ವಾಹನ ರಫ್ತಾಗಿದೆ.  ಕೊರೋನಾ ವೈರಸ್ ಹೊಡೆತಕ್ಕೆ ಮಾರುತಿ ಸುಜುಕಿ ಸೇರಿದಂತ ಎಲ್ಲಾ ಕಾರು ಕಂಪನಿಗಳು ನಲುಗಿ ಹೋಗಿದೆ.

click me!