ವರ್ನಾ, ಹೊಂಡಾ ಸಿಟಿ ಹಿಂದಿಕ್ಕಿ ದಾಖಲೆ ಬರೆದ ಮಾರುತಿ ಸಿಯಾಝ್!

By Web DeskFirst Published Oct 9, 2019, 7:56 PM IST
Highlights

ಮಾರುತಿ ಸುಜುಕಿ ಸಿಯಾಝ್ ಕಾರು ಹೊಸ ದಾಖಲೆ ಬರೆದಿದೆ. ಬಿಡುಗಡೆಯಾಗಿ ಇದೀಗ 5 ವರ್ಷ ಪೂರೈಸಿರುವ ಸಿಯಾಝ್ ಪ್ರತಿಸ್ಫರ್ಧಿಗಳಾದ ಹ್ಯುಂಡೈ ವರ್ನಾ, ಹೊಂಡಾ ಸಿಟಿ ಕಾರುಗಳನ್ನು ಹಿಂದಿಕ್ಕಿದೆ.

ನವದೆಹಲಿ(ಅ.09): ಭಾರತದ ಜನಪ್ರಿಯ ಸಿ ಸೆಗ್ಮೆಂಟ್ ಸೆಡಾನ್ ಕಾರು ಮಾರುತಿ ಸಿಜಾಝ್ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 2014ರಲ್ಲಿ ಭಾರತದಲ್ಲಿ ಬಿಡುಗಡೆಯಾದ ಮಾರುತಿ ಸಿಯಾಝ್, ಹ್ಯುಂಡೈ ವರ್ನಾ ಹಾಗೂ ಹೊಂಡಾ ಸಿಟಿ ಕಾರಿ ಪ್ರತಿಸ್ಪರ್ಧಿಯಾಗಿದೆ. ಮಾರುಕಟ್ಟೆಯಲ್ಲಿ 5 ವರ್ಷ ಪೂರೈಸಿದ ಮಾರುತಿ ಸಿಯಾಝ್ ಬರೋಬ್ಬರಿ 2.7 ಲಕ್ಷ ಕಾರುಗಳು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ.

ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!

2016-17, 2017-18, ಹಾಗೂ 2018-19 ಸಾಲಿನಲ್ಲಿ ಮಾರುತಿ ಸುಜುಕಿ ಸಿಯಾಝ್ ಟಾಪ್ ವೇರಿಯೆಂಟ್‌ಗೆ ಹೆಚ್ಚಿನ ಬೇಡಿಕೆ ಬಂದಿದೆ. ಸಿಯಾಝ್ ಕಾರು ಮಾರಾಟದಲ್ಿ ಆಲ್ಫಾ ಟ್ರಿಮ್ ಟಾಪ್ ಮಾಡೆಲ್ 54  ಶೇಕಡಾ ಮಾರಾಟವಾಗಿದೆ.  ಅದರಲ್ಲೂ ಸಿಯಾಝ್ ಹೈಬ್ರಿಡ್ ಕಾರು ಭಾರತದಲ್ಲಿ ಹೊಸ ಕ್ರಾಂತಿ ಮಾಡಿದೆ ಎಂದು ಮಾರ್ಕೆಂಟಿ ಹಾಗೂ ಸೇಲ್ಸ್ ಕಾರ್ಯನಿರ್ವಾಹ ನಿರ್ದೇಶಕ ಶಶಾಂಕ್ ಶ್ರೀವತ್ಸ ಹೇಳಿದ್ದಾರೆ.

ಇದನ್ನೂ ಓದಿ: ಮಾರುತಿ ಬ್ರೆಜಾ ಪೆಟ್ರೋಲ್ ಕಾರು ಬಿಡುಗಡೆ ದಿನಾಂಕ ಬಹಿರಂಗ!

ಕಳೆದ ವರ್ಷ(2018) ಮಾರುತಿ ಸುಜುಕಿ ಸಿಯಾಝ್ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿದೆ. ಇದು 1.5 ಲೀಟರ್ K15 ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಹಾಗೂ ಲಿಥಿಯಂ ಐಯಾನ್ ಬ್ಯಾಟರಿ ಎಂಜಿನ್ ಹೊಂದಿದೆ.   1.4-ಲೀಟರ್ ಪೆಟ್ರೋಲ್ ಎಂಜಿನ್ ಕಾರಿನ ಬದಲಾಗಿ ಈ ಕಾರು ಬಿಡುಗಡೆಗೊಳಿಸಲಾಗಿದೆ. ಬಳಿಕ 1.3 ಲೀಟರ್ DD IS ಡೀಸೆಲ್ ಎಂಜಿನ್ ಬದಲು  1.5-ಲೀಟರ್ ಡೀಸೆಲ್ ಎಂಜಿನ್ ಕಾರು ಬಿಡುಗಡೆ ಮಾಡಿತ್ತು. ಆದರೆ ಸಿಯಾಝ್ ಕಾರು BS(VI) ಎಂಜಿನ್ ಅಪ್‌ಗ್ರೇಡ್ ಮಾಡಿಲ್ಲ. 

ವಾಹನ ಮಾರಾಟ ಕುಸಿತದಲ್ಲಿ ಮಾರುತಿ ಸಿಯಾಝ್‌ಗೂ ಹೊಡೆತ ಬಿದ್ದಿದೆ. ಸೆಡಾನ್ ಕಾರುಗಳಲ್ಲಿ ಗರಿಷ್ಠ ಕುಸಿತ ಕಂಡ ಕಾರು ಅನ್ನೋ ಕುಖ್ಯಾತಿಗೆ ಪಾತ್ರವಾಗಿದೆ. ಬರೋಬ್ಬರಿ 77 ಶೇಕಡಾ ಮಾರಾಟ ಕುಸಿತ ಕಂಡಿದೆ. ದಸರಾ ಹಬ್ಬಕ್ಕೆ ಅಲ್ಪ ಚೇತರಿಕೆ ಕಂಡಿರು ಸಿಯಾಝ್ ಇದೀಗ ದೀಪಾವಳಿಯಲ್ಲಿ ನಿರೀಕ್ಷಿತ ಮಾರಾಟ ಕಾಣುವ ವಿಶ್ವಾಸದಲ್ಲಿದೆ.
 

click me!