3 ವರ್ಷ ಪೂರೈಸಿದ ಮಾರುತಿ ಸುಜುಕಿ ಅರೆನಾ; ಕಾರು ಖರೀದಿಯಲ್ಲಿ ಹೊಸ ಕ್ರಾಂತಿ!

By Suvarna News  |  First Published Sep 1, 2020, 6:05 PM IST

ಮಾರುತಿ ಸುಜುಕಿಯ ಅಧೀಕೃತ ಡೀಲರ್ ಆಗಿರುವ ಮಾರುತಿ ಸುಜುಕಿ ಅರೆನಾ ಇದೀಗ 3 ವರ್ಷ ಪೂರೈಸಿದೆ. ಕಳೆದ 3 ವರ್ಷಗಳಲ್ಲಿ ಭಾರತದಲ್ಲಿ ಗ್ರಾಹಕರಿಗೆ ಅಪರಿಮಿತ ಸೇವೆ, ಕಾರು ಖರೀದಿಯಲ್ಲಿ ವೇಗ ಸೇರಿದಂತೆ ಹಲವು ಬದಲಾಣೆ ತಂದಿದೆ. 3 ವರ್ಷದಲ್ಲಿ ಭಾರತದಲ್ಲಿ ಅರೆನಾ ಮಾಡಿದ ಕ್ರಾಂತಿ ವಿವರ ಇಲ್ಲಿದೆ.


ನವದೆಹಲಿ(ಸೆ.01); ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿದೆ. ಹಲವು ಹೊಸ ಕಾರು ಕಂಪನಿಗಳು ಭಾರತದಲ್ಲಿ ವ್ಯವಹಾರ ಆರಂಭಿಸಿದೆ. ಇದರ ನಡುವೆ ಮಾರುತಿ ಸುಜುಕಿ ಕಾರು ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಮಾರಾಟದಲ್ಲೂ ಗಣನೀಯ ಏರಿಕೆ ಕಂಡಿದೆ. ಮಾರಾಟ ವಿಭಾಗದಲ್ಲಿ ಮಾರುತಿ ಸುಜುಕಿಯ ವಿಭಿನ್ನ ಪ್ರಯತ್ನವೇ ಮಾರುತಿ ಸುಜುಕಿ ಅರೆನಾ ರಿಟೇಲ್.

ಮಾರುತಿ ಸುಜುಕಿ ಕೈ ಹಿಡಿದ ಆಗಸ್ಟ್; ಮಾರಾಟದಲ್ಲಿ ದಾಖಲೆ !.

Tap to resize

Latest Videos

undefined

ಮಾರುತಿ ಸುಜುಕಿ ಅರೆನಾ ಮೂಲಕ ಮಾರುತಿ ಕಾರುಗಳು ಮಾರಾಟ ಮಾಡಲಾಗುತ್ತಿದೆ. 2017ರಲ್ಲಿ ಮಾರುತಿ ಸುಜುಕಿ ಅರೆನಾ ಡೀಲರ್‌ಶಿಪ್ ಆರಂಭಗೊಂಡಿತು. ಕೇವಲ 3 ವರ್ಷಗಳಲ್ಲಿ ಭಾರತದಲ್ಲಿ 745 ಮಾರುತಿ ಸುಜುಕಿ ಅರೆನಾ ಶೋ ರೂಂಗಳಿವೆ. ಸುಜುಕಿ ಅರೆನಾ ಭಾರತದಲ್ಲಿ ಮಾರುತಿ ಸುಜುಕಿ ಕಾರು ಖರೀದಿಯಲ್ಲಿ ಕ್ರಾಂತಿ ಮಾಡಿದೆ. ಗ್ರಾಹಕರಿಗೆ ಅಪರಿಮಿತ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ.

ಮಾರುತಿ ಸುಜುಕಿ ಕಾರುಗಳೊಂದಿಗೆ ಗ್ರಾಹಕರ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಕಾರು ಖರೀದಿ ವೇಳೆ ಗ್ರಾಹಕರ ನೀಡುವ ಮಾಹಿತಿ, ಅವರ ಅನಕೂಲಕ, ಅವರ ಬೇಡಿಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದೇವೆ. ಹೀಗಾಗಿ ಮರಾಟದಲ್ಲಿ ಗಣನೀಯ ಹೆಚ್ಚಳ ಕಂಡಿದ್ದೇವೆ ಎಂದು ಮಾರುತಿ ಸುಜುಕಿ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶಕ ಶಶಾಂಕ್ ಶ್ರೀವತ್ಸವ್ ಹೇಳಿದ್ದಾರೆ

click me!