ಹ್ಯುಂಡೈ ಕ್ರೆಟಾಗೆ ಮಾರು ಹೋದ ಜನ; ಮಾರಾಟದಲ್ಲಿ ಶೇ.20ರಷ್ಟು ಏರಿಕೆ!

By Suvarna News  |  First Published Sep 1, 2020, 5:17 PM IST

ಆಕರ್ಷಕ ವಿನ್ಯಾಸ, ಹತ್ತು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿರುವ ಹ್ಯುಂಡೈ ಕ್ರೆಟಾ ಕಾರಿಗೆ ಜನರು ಮಾರುಹೋಗಿದ್ದಾರೆ. SUV ಕಾರು ಖರೀದಿಯಲ್ಲಿ ಕ್ರೆಟಾ ಕಾರು ಖರೀದಿಸಲು ಜನರು ಆಸಕ್ತಿ ತೋರುತ್ತಿದ್ದಾರೆ. ಕ್ರೆಟಾ ಕಾರಣ ಹ್ಯುಂಡೈ ಭಾರತದಲ್ಲಿ ಚೇತರಿಕೆ ಕಾಣುತ್ತಿದೆ.


ನವದೆಹಲಿ(ಸೆ.01): ಪ್ರಸಕ್ತ ವರ್ಷ ಹ್ಯುಂಡೈ ಭಾರತದಲ್ಲಿ ಹೆಚ್ಚು ಅಗ್ರೆಸ್ಸೀವ್ ರೂಪ ತಾಳಿತ್ತು. 2020ರ ಆರಂಭದಲ್ಲಿ ಔರಾ ಸೆಡಾನ್ ಕಾರು ಬಿಡುಗಡೆ ಮಾಡಿದ ಹ್ಯುಂಡೈ, ಬಳಿಕ ಸೆಕೆಂಡ್ ಜನರೇಶನ್ ಕ್ರೆಟಾ ಕಾರು ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ ವರ್ನಾ ಹಾಗೂ ಟಕ್ಸನ್ ಕಾರು ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿತ್ತು. ಆದರೆ ಕೊರೋನಾ ವೈರಸ್ ಹ್ಯುಂಡೈ ವೇಗಕ್ಕೆ ಬ್ರೇಕ್ ಹಾಕಿತು. ಇದೀಗ ಹ್ಯುಂಡೈ ಮತ್ತೆ ಚೇತರಿಕೆ ಕಾಣುತ್ತಿದೆ. 

ಹ್ಯುಂಡೈ ಶೋರೂಂ ಸೇಲ್ಸ್‌ಮೆನ್ ಆಗಿ ಬೀದಿ ನಾಯಿ ನೇಮಕ; ಸಂಚಲನ ಮೂಡಿಸಿದೆ ಹೃದಯ ಸ್ಪರ್ಶಿ ಘಟನೆ

Latest Videos

undefined

ಹ್ಯುಂಡೈ ಕ್ರೆಟಾ ಕಾರಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಹೊಚ್ಚ ಹೊಸ ಡಿಸೈನ್ಯ, ಬಲಿಷ್ಠ ಹಾಗೂ ದಕ್ಷ ಎಂಜಿನ್ ಹಾಗೂ ಹೆಚ್ಚುವರಿ ಫೀಚರ್ಸ್‌ನಿಂದ ಕ್ರೆಟಾ ಕಾರು ಜನಪ್ರಿಯವಾಗಿದೆ. ಜನರು ಕ್ರೆಟಾ ಕಾರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಆಗಸ್ಟ್ ತಿಂಗಳಲ್ಲಿ ಹ್ಯುಂಡೈ ಭಾರತದಲ್ಲಿ ಮಾರಾಟ ಏರಿಕೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಹ್ಯುಂಡೈ 45,806 ಕಾರುಗಳನ್ನು ಮಾರಾಟ ಮಾಡಿದೆ.

ಟಕ್ಸನ್ ಫೇಸ್‌ಲಿಫ್ಟ್ ಕಾರು ಬಿಡುಗಡೆ: ಇದು ಹ್ಯುಂಡೈನ ದುಬಾರಿ ಕಾರು!

2019ರ ಆಗಸ್ಟ್ ತಿಂಗಳಲ್ಲಿ 38,205 ಕಾರು ಮಾರಾಟ ಮಾಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 19.09ರಷ್ಟು ಮಾರಾಟದಲ್ಲಿ ಏರಿಕೆ ಕಂಡಿದೆ. ಆದರೆ ರಫ್ತು ವ್ಯವಹಾರದಲ್ಲಿ ಕುಸಿತ ತಂಡಿದೆ. 2019ರಲ್ಲಿ ಹ್ಯುಂಡೈ ಇಂಡಿಯಾ 17,800 ಕಾರು ರಫ್ತು ಮಾಡಿತ್ತು. ಆದರೆ 2020ರ ಆಗಸ್ಟ್ ತಿಂಗಳಲ್ಲಿ 6,800 ಕಾರುಗಳನ್ನು ಮಾತ್ರ ರಫ್ತು ಮಾಡಿದೆ. 

ಜುಲೈ ತಿಂಗಳಲ್ಲಿ ಕ್ರೆಟಾ ಕಾರಿಗೆ ಬರೋಬ್ಬರಿ 55,000 ಬುಕಿಂಗ್ಸ್ ಸ್ವೀಕರಿಸಲಾಗಿದೆ. ಬಿಡುಗಡೆಯಾದ ನಾಲ್ಕು ತಿಂಗಳಲ್ಲಿ ಹ್ಯುಂಡೈ ಕ್ರೆಟಾ 20,000 ಕಾರುಗಳನ್ನು ಡೆಲಿವರಿ ಮಾಡಲಾಗಿದೆ.

click me!