ಭಾರತದಲ್ಲಿ ದಾಖಲೆ ಬರೆದ ಮಾರುತಿ ಸುಜುಕಿ ಡಿಸೈರ್!

By Web DeskFirst Published Oct 9, 2018, 5:02 PM IST
Highlights

ಮಾರುತಿ ಸುಜುಕಿ ಡಿಸೈರ್ ಕಾರು ದಾಖಲೆ ಬರೆದಿದೆ. ಭಾರತದಲ್ಲಿ ಅತಿ ವೇಗದಲ್ಲಿ ಮಾರಾಟವಾಗುತ್ತಿರುವ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಡಿಸೈರ್ ಕಾರು ಭಾರತೀಯರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ.

ಬೆಂಗಳೂರು(ಅ.09): ಕಳೆದ ವರ್ಷ ಮಾರುತಿ ಸುಜುಕಿ ಸಂಸ್ಥೆ ಡಿಸೈರ್ ಸೆಡಾನ್ ಕಾರು ಬಿಡುಗಡೆ ಮಾಡಿತ್ತು. ಕಳೆದ 17 ತಿಂಗಳಲ್ಲಿ ಡಿಸೈರ್ ಕಾರು ಮಾರಾಟದಲ್ಲಿ ದಾಖಲೆ ಬರೆದಿದೆ. ಇಷ್ಟೇ ಅಲ್ಲ ಫಾಸ್ಟೆಸ್ಟ್ ಸೆಲ್ಲಿಂಗ್ ಕಾರ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

17 ತಿಂಗಳಲ್ಲಿ 3 ಲಕ್ಷ ಮಾರುತಿ ಡಿಸೈರ್ ಕಾರುಗಳು ಮಾರಾಟವಾಗಿದೆ. ಸರಾಸರಿ 17,000 ಕಾರುಗಳು ಪ್ರತಿ ತಿಂಗಳಲ್ಲಿ ಮಾರಾಟವಾಗಿದೆ. ಇತರ ಸೆಡಾನ್ ಕಾರುಗಳಿಗೆ ಹೋಲಿಸಿದರೆ ಮಾರುತಿ ಮಾರಾಟದಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

ಶೇಕಡಾ 25 ರಷ್ಟು ಗ್ರಾಹಕರು ಮಾರುತಿ ಸುಜುಕಿ ಡಿಸೈರ್ ಟಾಪ್ ಮಾಡೆಲ್ ಖರೀದಿಸಿದ್ದಾರೆ. ಇನ್ನು ಶೇಕಡಾ 20 ರಷ್ಟು ಗ್ರಾಹಕರು ಅಟೋಮ್ಯಾಟ್ ಟ್ರಾನ್ಸಿಮಿಶನ್ (AMT)ಕಾರು ಖರೀದಿಸಿದ್ದಾರೆ ಎಂದು ಮಾರುತಿ ಸುಜುಕಿ ಸಂಸ್ಥೆ ಹೇಳಿದೆ.

ಮಾರುತಿ ಸುಜುಕಿ ಡಿಸೈರ್ 1.2 ಲೀಟರ್, 4 ಸಿಲಿಂಡರ್ ಇಂಜಿನ್ ಹೊಂದಿದೆ. 82 ಬಿಹೆಚ್‌ಪಿ ಹಾಗೂ 113 ಎನ್ಎಂ ಉತ್ವಾದಿಸಲಿದೆ. ಡೀಸೆಲ್ ವೇರಿಯೆಂಟ್ 1.3 ಲೀಟರ್ ಇಂಜಿನ್ ಹಾಗೂ 74  ಬಿಹೆಚ್‌ಪಿ ಹಾಗೂ 190 ಎನ್ಎಂ ಉತ್ವಾದಿಸಲಿದೆ.

click me!