ಈ ಹೆಲ್ಮೆಟ್ ಹೊಂಡಾ ಆಕ್ಟೀವಾ ಸ್ಕೂಟರ್‌ಗಿಂತ ದುಬಾರಿ!

By Web Desk  |  First Published Oct 9, 2018, 3:57 PM IST

ಹೆಚ್ಚಾಗಿ ನಾವೆಲ್ಲಾ ಹೆಲ್ಮೆಟ್ ಖರೀದಿಸುವುದು ಪೊಲೀಸ್ ಫೈನ್‌ನಿಂದ ತಪ್ಪಿಸಿಕೊಳ್ಳಲು. ಇನ್ನು ಸುರಕ್ಷತೆ ಬೇಕು ಎಂದು ಹೆಲ್ಮೆಟ್ ಖರೀದಿಸುವವರು ತೀರಾ ಕಡಿಮೆ. ಗರಿಷ್ಠ ಸುರಕ್ಷತೆ ನೀಡೋ ಹೆಲ್ಮೆಟ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರ ಬೆಲೆ ಹೊಂಡಾ ಆಕ್ಟೀವಾ ಸ್ಕೂಟರ್‌ಗಿಂತ  ಹೆಚ್ಚು. ಹಾಗಾದರೆ ಆ ದುಬಾರಿ ಹೆಲ್ಮೆಟ್ ಹೇಗಿದೆ? ಇಲ್ಲಿದೆ ವಿವರ.


ಬೆಂಗಳೂರು(ಅ.09): ಭಾರತೀಯರಿಗೆ ಹೆಲ್ಮೆಟ್ ಅಂದರೆ ಮಾರುದ್ದ ದೂರ ಹೋಗ್ತಾರೆ. ಪೊಲೀಸರು ಹಿಡಿದು ಫೈನ್ ಹಾಕ್ತಾರೆ ಅನ್ನೋ ಕಾರಣಕ್ಕೆ ಹೆಲ್ಮೆಟ್ ಖರೀದಿಸಿದವರೆ ಹೆಚ್ಚು. ತಮ್ಮ ಸುರಕ್ಷತೆಗೆಂದು ಹೆಲ್ಮೆಟ್ ಖರೀದಿಸಿದವರ ಸಂಖ್ಯೆ ತೀರಾ ವಿರಳ.

ಹೆಚ್ಚಾಗಿ ಕಡಿಮೆ ಬೆಲೆಯ ಹೆಲ್ಮೆಟ್ ಬಳಸಿ ಪೊಲೀಸರ ಫೈನ್‌ನಿಂದ ತಪ್ಪಿಸಿಕೊಂಡರೆ ಸಾಕು ಅನ್ನುವವರೇ ಹೆಚ್ಚು. ಆದರೆ   ಹೆಚ್ಚಿನ ಸುರಕ್ಷತೆ ನೀಡೋ ಹಲವು ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿದೆ. ಭಾರತದಲ್ಲಿ ಮಾರಾಟವಾಗೋ ಹೆಲ್ಮೆಟ್ ಸರಾಸರಿ ದರ 1500, 2000 ಹಾಗೂ 3000 ರೂಪಾಯಿ. ನಾವೀಗ ಹೇಳುತ್ತಿರುವ ಹೆಲ್ಮೆಟ್ ಬೆಲೆ, ಹೊಂಡಾ ಆಕ್ಟೀವಾ ಸ್ಕೂಟರ್‌ಗಿಂತ ದುಬಾರಿ.

Latest Videos

undefined

ಜರ್ಮನ್ ಮೂಲದ ಶುಬರ್ತ್ ಹೆಲ್ಮೆಟ್ ಭಾರತದಲ್ಲೂ ಲಭ್ಯವಿದೆ. ಗರಿಷ್ಠ ಸುರಕ್ಷತೆ ಒದಗಿಸೋ ಈ ಹೆಲ್ಮೆಟ್ ಬೆಲೆ 70,000 ರೂಪಾಯಿ. ಆಮದು ತೆರಿಗೆ ಹಾಗೂ ಇತರ ಸುಂಕ ಸೇರಿ ಭಾರತದಲ್ಲಿ ಈ ಹೆಲ್ಮೆಟ್ ಬೆಲೆ ಬರೋಬ್ಬರಿ 90,000 ರೂಪಾಯಿ.

ಭಾರತದಲ್ಲಿ ಹೊಂಡಾ ಆಕ್ಟೀವಾ ಶೋ ರೂಂ ಬೆಲೆ 53,000 ರೂಪಾಯಿ. ಆದರೆ ಇದಕ್ಕಿಂತ ದುಬಾರಿಯಾಗಿದೆಶುಬರ್ತ್ ಸಿ4 ಮಾಡೆಲ್ ಹೆಲ್ಮೆಟ್ ಬೆಲೆ. ಬ್ರಿಟೀಷ್ ಫಾರ್ಮುಲಾ ಒನ್ ರೇಸರ್ ಲಿವಿಸ್ ಹ್ಯಾಮಿಲ್ಟನ್ ಇದೇ ಶುಬರ್ತ್ ಹೆಲ್ಮೆಟ್ ಉಪಯೋಗಿಸುತ್ತಾರೆ. ಈ ಹೆಲ್ಮೆಟ್ ತೂಕ 1.81 ಕೆಜಿ. 

ಎಮರ್ಜೆನ್ಸಿ ಕಾಲ್, ಇಂಟರ್ ಕಮ್ಯೂನಿಕೇಶನ್, ಆಧುನಿಕ ತಂತ್ರಜ್ಞಾನ ಎಲ್ಲಕ್ಕಿಂತ ಹೆಚ್ಚಾಗಿ ಗರಿಷ್ಠ ಸುರಕ್ಷತೆ ನೀಡಲಿದೆ. ಈ ಹೆಲ್ಮೆಟ್ ಕುರಿತು ವಿವರ ನಿಮ್ಮ ಕುತೂಹಲ ತಣಿಸುವುದು ಕಷ್ಟ. ಹೀಗಾಗಿ ಖರೀದಿಸಿ ಧರಿಸಿ ನೋಡಿದರೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಕ್ಕೀತು. 

click me!