
ಬೆಂಗಳೂರು(ಅ.09): ಹ್ಯುಂಡೈ ಕಾರು ಸಂಸ್ಥೆಯ ಬಹುನಿರೀಕ್ಷಿತ ಸ್ಯಾಂಟ್ರೋ ಕಾರು ಅಕ್ಟೋಬರ್ 23 ರಂದು ಬಿಡುಗಡೆಯಾಗಲಿದೆ. ಆದರೆ ಇಂದಿನಿಂದ ನೂತನ ಸ್ಯಾಂಟ್ರೋ ಕಾರು ಬುಕ್ಕಿಂಗ್ ಆರಂಭಗೊಂಡಿದೆ. ಹೊಸ ಕಾರು ಬುಕ್ ಮಾಡೋ ಗ್ರಾಹಕರು 11,100 ರೂಪಾಯಿ ಪಾವತಿಸಿ ಪ್ರೀ ಬುಕ್ಕಿಂಗ್ ಮಾಡಬುಹುದಾಗಿದೆ.
ನೂತನ ಹ್ಯುಂಡೈ ಸ್ಯಾಂಟ್ರೋ ಬೆಲೆ 3.50 ಲಕ್ಷದಿಂದ 5.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಗೇರ್‌ಬಾಕ್ಸ್(AMT) ವೇರಿಯೆಂಟ್ ಕೂಡ ಲಭ್ಯವಿದೆ.
ಭಾರತದಲ್ಲಿ ಹ್ಯುಂಡೈ ಸ್ಯಾಂಟ್ರೋ ಕಾರು ಬರೋಬ್ಬರಿ 2 ದಶಕಗಳ ಕಾಲ ಅಧಿಪತ್ಯ ಸಾಧಿಸಿತ್ತು. 1998ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಸ್ಯಾಂಟ್ರೋ ಕಾರು ಬಿಡುಗಡೆಯಾಗಿತ್ತು. ಇದೀಗ 20ನೇ ವರ್ಷದ ಸಂಭ್ರಮಾಚರಣೆಯಲ್ಲಿರು ಹ್ಯುಂಡೈ ಸಂಸ್ಥೆ ನೂತನ ಸ್ಯಾಂಟ್ರೋ ಕಾರನ್ನ ಬಿಡುಗಡೆಗೊಳಿಸಲು ರೆಡಿಯಾಗಿದೆ.
ಟಚ್ ಸ್ಕ್ರೀನ್, ರಿವರ್ಸ್ ಕ್ಯಾಮಾರ, ಕ್ಲೈಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್‌ಗಳು ನೂತನ ಸ್ಯಾಂಟ್ರೋಗೆ ನೀಡಲಾಗಿದೆ. 1.1 ಲೀಟರ್ ಪೆಟ್ರೋಲ್ ಎಂಜಿನ್ 64 ಬಿಹೆಚ್‌ಪಿ ಹಾಗೂ 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.
ನೂತನ ಸ್ಯಾಂಟ್ರೋ ಕಾರು, ಮಾರುತಿ ಸೆಲೆರಿಯೋ, ಮಾರುತಿ ವ್ಯಾಗ್ನರ್ ಹಾಗೂ ಟಾಟಾ ಟಿಯಾಗೋ ಸೇರಿದಂತೆ ಹಲವು ಹ್ಯಾಚ್‌ಬ್ಯಾಕ್ ಕಾರುಗಳಿಗೆ ಭಾರಿ ಪೈಪೋಟಿ ನೀಡಲಿದೆ.