ಬಲೆನೊ, ಐ20 ಕಾರಿನ ಪ್ರತಿಸ್ಪರ್ಧಿ; ಟಾಟಾ ಅಲ್ಟ್ರೋಜ್ ಕಾರಿನ ವಿಡಿಯೋ ಬಹಿರಂಗ!

Published : Dec 03, 2019, 04:32 PM IST
ಬಲೆನೊ, ಐ20 ಕಾರಿನ ಪ್ರತಿಸ್ಪರ್ಧಿ; ಟಾಟಾ ಅಲ್ಟ್ರೋಜ್ ಕಾರಿನ ವಿಡಿಯೋ ಬಹಿರಂಗ!

ಸಾರಾಂಶ

ಟಾಟಾ ಅಲ್ಟ್ರೋಝ್ ಕಾರಿನ ವಿಡಿಯೋ ಬಿಡುಗಡೆ ಮಾಡಲಾಗಿದೆ. ಆಕರ್ಷ ಲುಕ್ ಹೊಂದಿರುವ ಕಾರು ಈಗಾಗಲೇ ಮಾರುತಿ ಹಾಗೂ ಹ್ಯುಂಡೈ ಕಂಪನಿಗಳಿಗೆ ನಡುಕ ಹುಟ್ಟಿಸಿದೆ. ನೂತನ ಕಾರಿನ ವಿವರ ಇಲ್ಲಿದೆ.

ನವದೆಹಲಿ(ಡಿ.03): ಮಾರುತಿ ಬಲೆನೋ, ಹ್ಯುಂಡೈ ಐ20 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಪ್ರಿ ಬುಕಿಂಗ್ ಕೂಡ ಆರಂಭಗೊಂಡಿದೆ. ಇದೀಗ ಟಾಟಾ ಮೋಟಾರ್ಸ್ ಅಲ್ಟ್ರೋಝ್  ಕಾರಿನ ವಿಡಿಯೋ ಬಹಿರಂಗ ಮಾಡಿದೆ. ಶೀಘ್ರದಲ್ಲೇ ಅಲ್ಟ್ರೋಝ್ ಕಾರು ಅನಾವರಣಗೊಳ್ಳಲಿದೆ. 

 

ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ಅಲ್ಟ್ರೋಜ್ ಕಾರು!

ಕಾರಿನ ಮುಂಭಾಗ  ಹಾಗೂ ಸೈಡ್ ವಿವ್ಯೂ ವಿಡಿಯೋವನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಕೆಂಪು ಬಣ್ಣದ ಕಾರಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ. ಆಕರ್ಷಕ ಲುಕ್ ಹೊಂದಿರುವ ಅಲ್ಟ್ರೋಝ್, ಮುಂಬೈ ಹಾಗೂ ದೆಹಲಿಯಲ್ಲಿ ಈಗಾಗಲೆ ಪ್ರೀ ಬುಕಿಂಗ್ ಆರಂಭಗೊಂಡಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಇತರ ನಗರಗಳಲ್ಲಿ ಡಿಸೆಂಬರ್ 4 ರಿಂದ ಬುಕಿಂಗ್ ಆರಂಭಗೊಳ್ಳಲಿದೆ. 

 

ಇದನ್ನೂ ಓದಿ: TATA ಅಲ್ಟ್ರೋಜ್ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗ- i20,ಬಲೆನೋಗಿಂತ ಕಡಿಮೆ!.

2020ರ ಜನವರಿಯಲ್ಲಿ ನೂತನ ಅಲ್ಟ್ರೋಜ್ ಕಾರು ಬಿಡುಗಡೆಯಾಗಲಿದೆ. ಬಹುನಿರೀಕ್ಷಿತ ಕಾರು ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ. 16 ಇಂಚಿನ ಟೈಯರ್, ಡ್ಯುಯೆಲ್ ಟೋನ್, ಕಟ್ ಅಲೋಯ್ ವೀಲ್ಹ್ , LED ಹೆಡ್‌ಲ್ಯಾಂಪ್ಸ್,  ಫ್ರಂಟ್ ಗ್ರಿಲ್, ಬ್ಯಾಕ್ ಬಂಪರ್ ಹಾಗೂ ಕ್ರೋಮ್ ಡಿಸೈನ್ ಅಲ್ಟ್ರೋಝ್ ಕಾರಿನ ಲುಕ್ ಹೆಚ್ಚಿಸಿದೆ. 

ನೂತನ ಅಲ್ಟ್ರೋಝ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಲಭ್ಯವಿದೆ. ಟಾಟಾ ಟಿಯಾಗೋ ಕಾರಿನಲ್ಲಿ ಬಳಸಿರುವ 1.2 ಲೀಟರ್ ಎಂಜಿನ್ ಹಾಗೂ ಟಾಟಾ ನೆಕ್ಸಾನ್ ಕಾರಿನಲ್ಲಿ ಬಳಸಿರುವ 1.5 ಲೀಟರ್ ಡೀಸೆಲ್ ಎಂಜಿನ್‌ಗಳನ್ನೇ ನೂತನ ಅಲ್ಟ್ರೋಝ್ ಕಾರಿನಲ್ಲಿ ಪರಿಚಯಿಸಲಾಗುತ್ತಿದೆ. ಅಲ್ಟ್ರೋಝ್ ಕಾರಿನಲ್ಲಿ ಅಟೋಮ್ಯಾಟಿಕ್ ಆಯ್ಕೆ ಕೂಡ ಲಭ್ಯವಿದೆ.

 

1.2 ಲೀಟರ್ ಪೆಟ್ರೋಲ್ ಎಂಜಿನ್  86 PS  ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  1.5 ಲೀಟರ್ ಡೀಸೆಲ್ ಎಂಜಿನ್  90 PS ಪವರ್ ಹಾಗೂ 200 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ನೂತನ ಕಾರಿನ ಬೆಲೆ 7.5 ರಿಂದ 8.2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ