
ನ್ಯೂಯಾರ್ಕ್(ನ.05): ಜಗತ್ತಿನ ಅತೀ ದೊಡ್ಡ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಒಟ್ಟು ಆದಾಯ 59 ಬಿಲಿಯನ್ ಅಮೇರಿಕ ಡಾಲರ್(435,78,01,50,000). ಪ್ರತಿ ಸೆಕೆಂಡ್‌ಗೆ ಬುಕರ್ಬರ್ಗ್ ಕೋಟಿ ಕೋಟಿ ಆದಾಯಗಳಿಸುತ್ತಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಮಾರ್ಕ್ ಜುಕರ್ಬರ್ಗ್, ಅತ್ಯಂತ ಸರಳ ವ್ಯಕ್ತಿ ಅನ್ನೋದು ವಿಶೇಷ.
ವಿಶ್ವದ ಬಹುತೇಕ ಶ್ರೀಮಂತರು ದುಬಾರಿ ಹಾಗೂ ಗರಿಷ್ಠ ಸುರಕ್ಷತೆಯ ಕಾರನ್ನ ಉಪಯೋಗಿಸುತ್ತಾರೆ. ಆದರೆ ಮಾರ್ಕ್ ಜುಗರ್ಬರ್ಗ್ ಬಳಸೋ ಕಾರು ಹೊಂಡಾ ಫಿಟ್. ಇದೇ ಕಾರು ಭಾರತದಲಲ್ಲಿ ಹೊಂಡಾ ಜಾಝ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿದೆ. ಇದರ ಬೆಲೆ 10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಜುಗರ್ಬರ್ಗ್ ಬಳಸೋ ಹೊಂಡಾ ಫಿಟ್ ಕಾರು 1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರು. ಇದರ ಪವರ್ 117 bhp. ಇದೇ ಕಾರಿನಲ್ಲಿ ಜುಕರ್ಬರ್ಗ್ ಪ್ರಯಾಣ ಮಾಡುತ್ತಾರೆ. ಇದರ ಜೊತೆಗೆ ಜುಕರ್ಬರ್ಗ್ ಬಳಿ ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ(ಭಾರತದಲ್ಲಿ ಪೋಲೋ ಜಿಟಿಐ) ಹಾಗೂ ಅಕ್ಯುರಾ ಸೆಡಾನ್ ಕಾರುಗಳಿವೆ. ಎರಡು ಕಾರುಗಳು ಹೊಂಡಾ ಫಿಟ್ ಕಾರಿಗಿಂತ ದುಬಾರಿ. ಆದರೆ ಲಕ್ಷ ರೂಪಾಯಿ ದಾಟಲ್ಲ.
ಕೋಟಿ ರೂಪಾಯಿ ಬೆಲೆ ಬಾಳುವ ಪಗಾನಿ ಹ್ಯುಯರಾ ಕಾರು ಕೂಡ ಜುಗರ್ಬರ್ಗ್ ಕಾರು ಸಂಗ್ರಹಾಲದಲ್ಲಿದೆ. ಇದು ಆರಂಭಿಕ ದಿನಗಳಲ್ಲಿ ಈ ಕಾರು ಉಪಯೋಗಿಸುತ್ತಿದ್ದ ಮಾರ್ಕ್, ಇದೀಗ ಹೊಂಡಾ ಫಿಟ್ ಕಾರು ಹೆಚ್ಚಾಗಿ ಬಳಸುತ್ತಾರೆ.