ಈಗಾಗಲೇ ಬೈಕ್ ಹಿಂದೆ ನಾಯಿ ಕೂರಿಸಿಕೊಂಡು ತಿರುಗಾಡಿದ ಹಲವು ವಿಡಿಯೋಗಳು ವೈರಲ್ ಆಗಿದೆ. ನಾಯಿಗೆ ಹೆಲ್ಮೆಟ್ ಹಾಕಿ ಬೈಕ್ ಮೇಲೆ ತಿರುಗಾಡಿಸಿದ ವಿಡಿಯೋ ಕೂಡ ಸಂಚಲನ ಮೂಡಿಸಿತ್ತು. ಸಾರ್ವಜನಿಕ ರಸ್ತೆಯಲ್ಲಿ ನಾಯಿಯನ್ನು ಬೈಕ್ ಅಥವಾ ದ್ವಿಚಕ್ರ ವಾಹನದಲ್ಲಿ ಕೂರಿಸಿ ತಿರುಗಾಡಿಸುವವರಿಗೆ ಬಿಗ್ ಶಾಕ್ ಕಾದಿದೆ. ಇಲ್ಲಿದೆ ಹೆಚ್ಚಿನ ವಿವರ.
ಕೇರಳ(ಫೆ.01): ಕಳೆದ ವಾರ ಬೈಕ್ ಹಿಂದೆ ಸಾಕು ನಾಯಿ ಕೂರಿಸಿಕೊಂಡು ಸುತ್ತಾಡಿದ ವಿಡಿಯೋ ವೈರಲ್ ಆಗಿತ್ತು. ಸಾರ್ವಜನಿಕ ರಸ್ತೆಯಲ್ಲಿ ಬೈಕ್ ಹಿಂದೆ ನಾಯಿ ಬ್ಯಾಲೆನ್ಸ್ ಮಾಡುತ್ತಾ ಕುಳಿತಿತ್ತು. ಇತ್ತ ಮಾಲೀಕ ಸಲೀಸಾಗಿ ರಸ್ತೆಯುದ್ದಕ್ಕೂ ಚಲಿಸುತ್ತಿದ್ದ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಮಾಲೀಕನಿಗೆ ದುಬಾರಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!
undefined
ಕೇರಳದಲ್ಲಿ ಈ ಘಟನೆ ನಡೆದಿದೆ. ಸಾಕು ನಾಯಿಯನ್ನು ಬೈಕ್ ಹಿಂಬದಿಯಲ್ಲಿ ಕೂರಿಸಿ ಸಾರ್ವಜನಿಕ ರಸ್ತೆಯಲ್ಲಿ ಚಲಿಸಿದ್ದಾನೆ. ವಿಡಿಯೋ ಆಧರಿಸಿ ಕೇರಳ ಪೊಲೀಸರು ಬೈಕ್ ಮಾಲೀಕನಿಗೆ ದಂಡ ಹಾಕಿದ್ದಾರೆ. ಬೈಕ್ ಮಾಲೀಕ 2 ನಿಯಮ ಉಲ್ಲಂಘನೆ ಮಾಡಿದ್ದಾನೆ.
ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದವರಿಗೆ 15 ಸಾವಿರ ದಂಡ !
ಹೆಲ್ಮೆಟ್ ಇಲ್ಲದೆ ವಾಹನ ರೈಡ್ ಮಾಡಿದ ಹಾಗೂ ಯಾವುದೇ ಸುರಕ್ಷತೆ ಇಲ್ಲದೆ ನಾಯಿಯನ್ನು ಬೈಕ್ ಹಿಂಬದಿಯಲ್ಲಿ ಕೂರಿಸಿಕೊಂಡು ಹೋಗಿರುವುದಕ್ಕೆ 2,500 ರೂಪಾಯಿ ದಂಡ ಹಾಕಿದ್ದಾರೆ. ಸಾಕು ಪ್ರಾಣಿಗಳನ್ನು ದ್ವಿಚಕ್ರ ವಾಹನದ ಹಿಂಬದಿ ಅಥವಾ ಮುಂಭಾಗದಲ್ಲಿ ಕೂರಿಸಿಕೊಂಡು ಹೋಗುವವರಿಗೆ ಎಚ್ಚರಿಕೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಕಾಲೇಜು ಹುಡುಗಿಯರ ಗೋವಾ ಟ್ರಿಪ್; ಬಸ್ ಚಾಲಕನ ಲೈಸೆನ್ಸ್ ರದ್ದು
ಸಾಕು ಪ್ರಾಣಿಗಳನ್ನು ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡು ಹೋಗುವುದರಿಂದ ಅಪಾಯದ ಮಟ್ಟ ಹೆಚ್ಚು. ನಾಯಿ ಬ್ಯಾಲೆನ್ಸ್ ಮಾಡುತ್ತಾ ಕೂರಬೇಕು. ಯಾವುದೇ ಕ್ಷಣದಲ್ಲೂ ನಾಯಿ ವಾಹನದಿಂದ ಜಿಗಿಯುವ ಸಾಧ್ಯತೆ ಇದೆ. ಹೀಗಾದಲ್ಲಿ ಬೈಕ್ ಸವಾರ ಬ್ಯಾಲೆನ್ಸ್ ತಪ್ಪುವ ಸಾಧ್ಯತೆ ಇದೆ. ಇತ್ತ ನಾಯಿ ರಸ್ತೆಯಲ್ಲಿ ಚಲಿಸುತ್ತಿರುವ ಇತರ ವಾಹನಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳಿವೆ.
ಇತರ ವಾಹನ ಸವಾರರಿಗೂ ಅಪಾಯ ತಪ್ಪಿದಲ್ಲ. ಇನ್ನು ಸಾರ್ವಜನಿಕ ರಸ್ತೆಯಲ್ಲಿ ಈ ರೀತಿ ಸಾಹಸ ಮಾಡುವುದರಿಂದ ಇತರರ ಸವಾರರ ಗಮನ ನಾಯಿಯ ಮೇಲೆ ಬೀಳುತ್ತದೆ. ಇದರಿಂದಲೂ ಅಪಪಘಾತಗಳಾಗವು ಸಾಧ್ಯತೆ ಇದೆ. ಈ ರೀತಿ ಸಾಕು ಪ್ರಾಣಿಗಳನ್ನು ಸಾಗಿಸಲು ಯಾವುದೇ ನಿಯಮ ಅನುಮತಿ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಫೆಬ್ರವರಿ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ