ಟಾಟಾ ಮೋಟಾರ್ಸ್ ಭಾರತದಲ್ಲಿ ವಾಹನ ಸುರಕ್ಷತೆಯಲ್ಲಿ ಕ್ರಾಂತಿ ಮಾಡಿದೆ. ಟಾಟಾ ನೆಕ್ಸಾನ್, ಟಾಟಾ ಅಲ್ಟ್ರೋಜ್ ಕಾರುಗಳು 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯೋ ಮೂಲಕ ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ನೆಕ್ಸಾನ್, ಅಲ್ಟ್ರೋಜ್ ಬಳಿಕ ಮಹೀಂದ್ರ ಕೂಡ 5 ಸ್ಟಾರ್ ರೇಟಿಂಗ್ ಪಡೆದಿದೆ.
ಮುಂಬೈ(ಜ.23); ಮಹೀಂದ್ರ ಕಂಪನಿಯ XUV300 SUV ಕಾರು 5 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ದಾಖಲೆ ಬರೆದಿದೆ. XUV300 ಕಾರು ಟಾಟಾ ನೆಕ್ಸಾನ್‌ಗಿಂತ ಹೆಚ್ಚಿನ ಅಂಕ ಸಂಪಾದಿಸಿದೆ. ಹೀಗಾಗಿ ಸದ್ಯ ಸುರಕ್ಷತೆ ಕಾರಿನಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.
undefined
ಇದನ್ನೂ ಓದಿ: ಟಾಟಾ ನೆಕ್ಸಾನ್ ಬಳಿಕ ಅಲ್ಟ್ರೋಝ್ ದೇಶದ ಅತ್ಯಂತ ಸುರಕ್ಷತೆ ಕಾರು; ಸೇಫ್ಟಿ ರಿಸಲ್ಟ್ ಬಹಿರಂಗ!...
ಗ್ಲೋಬಲ್ NCAP ನಡೆಸಿದ ಕ್ರಾಶ್ ಟೆಸ್ಟ್‌ನ ವಯಸ್ಕರ ವಿಭಾಗದಲ್ಲಿ ಮಹೀಂದ್ರ XUV300 ಕಾರು ಒಟ್ಟು 17 ಅಂಕಗಳ ಪೈಕಿ 16.42 ಅಂಕಗಳಿಸಿದೆ. ಮಕ್ಕಳ ಸುರಕ್ಷತೆಯಲ್ಲಿ ಒಟ್ಟು 49 ಅಂಕಗಳ ಪೈಕಿ 37,44 ಅಂಕಗಳಿಸಿದೆ. ಟಾಟಾ ನೆಕ್ಸಾನ್ ವಯಸ್ಕರ ಸುರಕ್ಷತೆಯಲ್ಲಿ 16.06 ಹಾಗೂ ಮಕ್ಕಳ ಸುರಕ್ಷತೆಯಲ್ಲಿ 25 ಅಂಕಗಳಿಸಿದೆ. ಇನ್ನು ಅಲ್ಟ್ರೋಜ್ ವಯಸ್ಕರ ಸುರಕ್ಷತೆಯಲ್ಲಿ 16.13 ಹಾಗು ಮಕ್ಕಳ ಸುರಕ್ಷತೆಯಲ್ಲಿ 29 ಅಂಕ ಸಂಪಾದಿಸಿದೆ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ
ನೆಕ್ಸಾನ್ ಹಾಗೂ ಅಲ್ಟ್ರೋಜ್ ಕಾರಿಗೆ ಹೊಲಿಸಿದರೆ ಮಹೀಂದ್ರ XUV300 ಕಾರು ಹೆಚ್ಚು ಸುರಕ್ಷತೆ ಹೊಂದಿದೆ. ಸಬ್ ಕಾಂಪಾಕ್ಟ್ SUV ಕಾರು ವಿಭಾಗದಲ್ಲಿ ಟಾಪ್ ಮಾಡೆಲ್ ಕಾರಿನಲ್ಲಿ ಡ್ರೈವರ್ ಮೊಣಕಾಲಿಗೂ ಏರ್‌ಬ್ಯಾಗ್ ಸೇರಿದಂತೆ 7 ಏರ್‌ಬ್ಯಾಗ್ ನೀಡುತ್ತಿರುವ ಏಕೈಕ ಕಾರು ಮಹೀಂದ್ರ XUV300.
ಮಹೀಂದ್ರ XUV300 ಕಾರು 1.2 ಲೀಟರ್ ಪೆಟ್ರೋಲ್, 3 ಸಿಲಿಂಡರ್ ಟರ್ಬೋಚಾರ್ಜಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 115bh ಪವರ್ 200nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಮಾರ್ಥ್ಯ ಹೊಂದಿದೆ. ಇನ್ನು 1.5 ಲೀಟರ್, 4 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್, 115 Bhp ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ.
ಜನವರಿ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ