ಮಾರುತಿ ಬ್ರಿಜಾ ಪ್ರತಿಸ್ಪರ್ಧಿ ಮಹೀಂದ್ರ S201 ಶೀಘ್ರದಲ್ಲೇ ಬಿಡುಗಡೆ!

Published : Nov 27, 2018, 09:17 PM IST
ಮಾರುತಿ ಬ್ರಿಜಾ ಪ್ರತಿಸ್ಪರ್ಧಿ ಮಹೀಂದ್ರ S201 ಶೀಘ್ರದಲ್ಲೇ ಬಿಡುಗಡೆ!

ಸಾರಾಂಶ

ಮಾರುತಿ ಬ್ರಿಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಹೀಂದ್ರ ಸಂಸ್ಥೆ ಹೊಸ ಕಾರನ್ನ ಬಿಡುಗಡೆ ಮಾಡುತ್ತಿದೆ. ಬ್ರಿಜಾ ಸೇರಿದಂತೆ ಇತರ SUV ಕಾರುಗಳಿಗಿಂತ ಕಡಿಮೆ ಬೆಲೆ, ಹೆಚ್ಚುವರಿ ಫೀಚರ್ಸ್‌ನೊಂದಿಗೆ ಈ ಕಾರು ಬಿಡುಗಡೆಯಾಗುತ್ತಿದೆ.  

ಬೆಂಗಳೂರು(ನ.27):  ಭಾರತದ SUV ಕಾರು ಮಾರುಕಟ್ಟೆಯಲ್ಲಿ ಮೋಡಿ ಮಾಡಿದ ಮಾರುತಿ ವಿಟಾರ ಬ್ರಿಜಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಹೀಂದ್ರ ಸಂಸ್ಥೆ ನೂತನ ಮಹೀಂದ್ರ S201 ಕಾರನ್ನ ಬಿಡುಗಡೆ ಮಾಡುತ್ತಿದೆ.  ಇದೀಗ ಡಿಸೆಂಬರ್ 1 ರಂದು ಮಹೀಂದ್ರ ತನ್ನ ನೂತನ  S201ಕಾರಿನ ಹೆಸರು ಅನಾವರಣ ಮಾಡಲಿದೆ.

ಸಬ್ 4 ಮೀಟರ್  SUV ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಇದರ ಬೆಲೆ 6 ರಿಂದ 12 ಲಕ್ಷ ರೂಪಾಯಿ ಒಳಗಿರಲಿದೆ. 2016ರ ಆಟೋ ಎಕ್ಸ್ಪೋದಲ್ಲಿ ಈ ಕಾರನ್ನ ಪ್ರದರ್ಶಿಸಲಾಗಿತ್ತು. 1.5 ಲೀಟರ್ ಡೀಸೆಲ್, 122ps, 300nm ಟಾರ್ಕ್ ಉತ್ಪಾದಿಸಬಲ್ಲ ಎಂಜಿನ್ ಹೊಂದಿದೆ.

ಡೀಸೆಲ್ ಮಾತ್ರವಲ್ಲ ಪೆಟ್ರೋಲ್ ಎಂಜಿನ್ ಕಾರು ಕೂಡ ಲಭ್ಯವಿದೆ. 1.2 ಲೀಟರ್, 3 ಸಿಲಿಂಡರ್ ಎಂಜಿನ್ ಪವರ್ ಹೊಂದಿರಲಿದೆ. ರೇರ್ ಡಿಸ್ಕ್ ಕೂಡ ಇದರ ವಿಶೇಷತೆ. ಡ್ಯುಯೆಲ್ ಜೋನ್ ಕ್ಲೇಮೇಟ್ ಕಂಟ್ರೋಲ್, ಸನ್ ರೂಫ್ ಸೇರಿದಂತೆ ಹೆಚ್ಚುವರಿ ಫೀಚರ್ಸ್‌ಗಳು ಇರಲಿವೆ.

ಮಾರುತಿ ಬ್ರಿಜಾ, ಫೋರ್ಟ್ ಇಕೋ ಸ್ಪೋರ್ಟ್ ಹಾಗೂ ಟಾಟಾ ನೆಕ್ಸಾನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ ನೂತನ ಕಾರನ್ನ ಬಿಡುಗಡೆ ಮಾಡುತ್ತಿದೆ. 2019ರ ಆರಂಭದಲ್ಲೇ ನೂತನ ಮಹೀಂದ್ರ s201 ಕಾರು ಬಿಡುಗಡೆಯಾಗಲಿದೆ.
 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ