ಮಹೀಂದ್ರ ಅಲ್ಟುರಾಸ್ G4 ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!

By Web DeskFirst Published Nov 27, 2018, 6:19 PM IST
Highlights

ಮಹೀಂದ್ರ ಸಂಸ್ಥೆಯ ನೂತನ ಅಲ್ಟುರಾಸ್ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಈ  SUV ಕಾರಿನ ಸುರಕ್ಷತೆ ಹೇಗಿದೆ? ಸುರಕ್ಷತಾ ಪರೀಕ್ಷೆಯಲ್ಲಿ ಪಡೆದ ಅಂಕವೆಷ್ಟು? ಇಲ್ಲಿದೆ ವಿವರ.

ನವದೆಹಲಿ(ನ.27): ಟೊಯೊಟಾ ಫಾರ್ಚುನರ್‌ಗೆ ಪ್ರತಿಸ್ಪರ್ಧಿಯಾಗಿ ಮಹೀಂದ್ರ  ಸಂಸ್ಥೆ ಅಲ್ಟುರಾಸ್ G4 SUV ಕಾರು ಈಗಾಗಲೇ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ನೂತನ ಕಾರಿನ ಸುರಕ್ಷತಾ ಫಲಿತಾಂಶ ಕೂಡ ಪ್ರಕಟಗೊಂಡಿದೆ.

ಮಹೀಂದ್ರ ಅಲ್ಟುರಾಸ್ G4 2WD ಹಾಗೂ  ಅಲ್ಟುರಾಸ್ G4 4WD ಎಂಬು ಎರಡು ಕಾರು ಬಿಡುಗಡೆ ಮಾಡಿದೆ. ಇದೀಗ ಈ ಎರಡು ಕಾರುಗಳು 5 ಸ್ಟಾರ್ ಪಡೆಯೋ ಮೂಲಕ ಗರಿಷ್ಠ ಸುರಕ್ಷತಾ ಅಂಕ ಪಡೆದಿದೆ. ಟೊಯೊಟಾ ಫಾರ್ಚುನರ್ ಕೂಡ 5 ಸ್ಟಾರ್ ಪಡೆದಿದೆ. 

ಮಹೀಂದ್ರ ಅಲ್ಟುರಾಸ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 9 ಏರ್‌ಬ್ಯಾಗ್ ಅಳವಡಿಸಲಾಗಿದೆ. ಇನ್ನು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್(ESP), ಆಕ್ಟೀವ್ ರೋಲ್ಓವರ್ ಪ್ರೊಟೆಕ್ಷನ್(ARP), ಬ್ರೇಕ್ ಅಸಿಸ್ಟ್ ಸಿಸ್ಟಮ್(BAS), ಹಿಲ್ ಸ್ಟಾರ್ಟ್ ಅಸಿಸ್ಟ್(HSA) ಹಾಗೂ ಎಬಿಎಸ್, ಹಾಗೂ ಇಬಿಡಿ ಸೇರಿದಂತೆ ಸುರಕ್ಷತೆಯ ಎಲ್ಲಾ ತಂತ್ರಜ್ಞಾನ ಈ ಕಾರಿನಲ್ಲಿದೆ.

ನೂತನ ಅಲ್ಟುರಾಸ್ ಬೆಲೆ 26.95 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ. 2018ರ ಆಟೋ ಎಕ್ಸ್ಪೋದಲ್ಲಿ ಈ ಕಾರನ್ನ ಮಹೀಂದ್ರ ಪರಿಚಯಿಸಿತ್ತು. ಇದೀಗ ಎಕ್ಸೋಪದಲ್ಲಿ ಪರಿಚಯಿಸಲಾದ ಅಲ್ಟುರಾಸ್  ಹೆಚ್ಚಿನ ಬದಲಾವಣೆಗಳಿಲ್ಲದೇ  ಬಿಡುಗಡೆಯಾಗಿದೆ. 

ಟೊಯೊಟಾ ಫಾರ್ಚುನರ್, ಫೋರ್ಡ್ ಎಂಡೆವರ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ   2.2 ಲೀಟರ್ ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್, 187 bhp ಹಾಗೂ 420nm ಟಾರ್ಕ್ ಉತ್ಪಾದಿಸಲಿದೆ. 18 ಇಂಚಿನ್ ಅಲೋಯ್ ವೀಲ್ಹ್ಸ್ ಹೊಂದಿದೆ. 

click me!