ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೋಟಾ ಇನೋವಾ ಕ್ರೈಸ್ಟಾ CNG ಕಾರು!

By Suvarna News  |  First Published Jul 12, 2020, 3:04 PM IST

ಭಾರತದಲ್ಲಿ MPV ವಾಹನಗಲ್ಲಿ ಟೊಯೋಟಾ ಇನೋವಾ ಮಾಡಿದ ಮೋಡಿ, ಬೇರೆ ಯಾವ ಕಾರು ಮಾಡಿಲ್ಲ. ಸಾಮಾನ್ಯರಿಂದ ಹಿಡಿದು ರಾಜಕಾರಣಿಗಳ, ಸೆಲೆಬ್ರೆಟಿಗಳು ಟೊಯೋಟಾ ಇನೋವಾ ಕಾರು ಬಳಸುತ್ತಾರೆ. ಅದರಲ್ಲೂ ನೂತನ ಇನೋವಾ ಕ್ರೈಸ್ಟಾ ಕಾರು ಮತ್ತಷ್ಟು ಆಕರ್ಷಕವಾಗಿದೆ. ಇದೀಗ ಇನೋವಾ ಕ್ರ್ಟೈಸ್ಟಾ CNG ವೇರಿಯೆಂಟ್ ಕಾರು ಬಿಡುಗಡೆಗೆ ಸಜ್ಜಾಗುತ್ತಿದೆ.


ಬೆಂಗಳೂರು(ಜು.12): ಟೊಯೋಟಾ ಇನೋವಾ ಕ್ರೈಸ್ಟಾ ಕಾರು ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ MPV ಕಾರು. ಇಷ್ಟೇ ಅಲ್ಲ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಇನೋವಾ ಕ್ರೈಸ್ಟಾ  CNG ವೇರಿಯೆಂಟ್ ಕಾರು ಬಿಡುಗಡೆಗೆ ರೆಡಿಯಾಗಿದೆ.  ಇದರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕಿಟ್ CNG ವೇರಿಯೆಂಟ್ ಲಭ್ಯವಿದೆ.

ಟೊಯೋಟಾ ಇನ್ನೋವಾ ಕ್ರಿಸ್ಟಾ ಲೀಡರ್‌ಶಿಪ್ ಆವೃತ್ತಿ; ಈ ಕಾರಿಗೆ ಸರಿಸಾಟಿ ಇಲ್ಲ!..

Tap to resize

Latest Videos

undefined

ಡೀಸೆಲ್ ಎಂಜಿನ್ ಇನೋವಾ ಕ್ರೈಸ್ಟಾ ಕಾರಿಗೆ ಹೋಲಿಸಿದೆರ ಕಾರಿನ ಹಾರ್ಸ್ ಪವರ್, ಟಾರ್ಕ್ ಕಡಿಮೆ ಇರಲಿದೆ. CNG ವೇರಿಯೆಂಟ್ ಕ್ರೈಸ್ಟಾ ಕಾರು 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. 2.7 ಲೀಟರ್ ಪೆಟ್ರೋಲ್ ಎಂಜಿನ್ , 4 ಸಿಲಿಂಡರ್ ಹೊಂದಿದ್ದು, 164 bhp ಪವರ್ ಹಾಗೂ 245 Nm  ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ.  CNG ವೇರಿಯೆಂಟ್ ಕಾರಿನಲ್ಲಿ 6 ಸ್ಪೀಡ್ AMT ಆಯ್ಕೆ ಕೂಡ ಲಭ್ಯವಿದೆ. 

ಡೀಸೆಲ್ ಕಿಟ್ CNG ವೇರಿಯೆಂಟ್ ಕಾರು  2.4-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 148bhp ಪವರ್ ಹಾಗೂ 343Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸದ್ಯ ರೋಡ್ ಟೆಸ್ಟ್ ಯಶಸ್ವಿಯಾಗಿ ನಡೆಸಿರುವ ಇನೋವಾ ಕ್ರೈಸ್ಟಾ  CNG ವೇರಿಯೆಂಟ್ ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗಲಿದೆ

click me!