ಗುಡ್ ಬೈ ಹೇಳಿದ ಮಹೀಂದ್ರ e2o ಎಲೆಕ್ಟ್ರಿಕ್ ಕಾರು !

By Web DeskFirst Published May 1, 2019, 4:30 PM IST
Highlights

ಭಾರತದ ಮೊಟ್ಟ ಮೊದಲ ಎಲೆಕ್ಟ್ರಿಕ್ ಕಾರು ವಿದಾಯ ಹೇಳುತ್ತಿದೆ. ಮಹೀಂದ್ರ  e2o ಪ್ಲಸ್ ಕಾರು ದಿಢೀರ್ ಆಗಿ ಸ್ಧಗಿತಗೊಳ್ಳಲು ಕಾರಣವೇನು? ಇಲ್ಲಿದೆ ವಿವರ

ಬೆಂಗಳೂರು(ಮೇ.01): ಭಾರತದ ಮೊಟ್ಟಮೊದಲ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಮಹೀಂದ್ರ e2o ಕಾರು ಪಾತ್ರವಾಗಿದೆ. 2013ರಲ್ಲಿ ಮಹೀಂದ್ರ e2o ಎಲೆಕ್ಟ್ರಿಕ್ ಕಾರು ಬಿಡುಗಡೆಯಾದರೆ, 2016ರಲ್ಲಿ  e2o ಕಾರಿನ ಬದಲು 4 ಡೋರ್  e2o ಪ್ಲಸ್ ಕಾರು ಬಿಡುಗಡೆ ಮಾಡಿತು. ಇದೀಗ ಬೇಡಿಕೆ ಕಡಿಮೆಯಾದ ಕಾರಣ  e2o ಪ್ಲಸ್ ಕಾರು ನಿರ್ಮಾಣ ಸ್ಥಗಿತಗೊಳ್ಳುತ್ತಿದೆ.

ಇದನ್ನೂ ಓದಿ: ದಾಖಲೆ ಬರೆದ ಮಾರುತಿ ಸುಜುಕಿ ಇಗ್ನಿಸ್ ಕಾರು!

ಮಾರ್ಚ್ 31 ರಂದು ಅಂತಿಮ  e2o ಪ್ಲಸ್ ಕಾರು ಬೆಂಗಳೂರಿನ ಮಹೀಂದ್ರ ಎಲೆಕ್ಟ್ರಿಕ್ ಘಟಕದಲ್ಲಿ ಉತ್ಪಾದನೆಯಾಗಿತ್ತು. ಬಳಿಕ  e2o ಪ್ಲಸ್ ಕಾರಿಗೆ ಇದುವರೆಗೂ ಯಾವುದೇ ಬೇಡಿಕೆ ಬಂದಿಲ್ಲ. ಇಲ್ಲೀವರಗೆ ಒಂದು ಕಾರು ಕೂಡ ಬುಕ್ ಆಗಿಲ್ಲ. ಹೀಗಾಗಿ ಮಹೀಂದ್ರ  e2o ಪ್ಲಸ್ ಕಾರಿನ ಉತ್ಪಾದನೆ ಸ್ದಗಿತಗೊಳ್ಳುತ್ತಿದೆ.

ಇದನ್ನೂ ಓದಿ: ಮಾರುತಿ ಬಲೆನೊ ಕಾರಿನ ಬೆಲೆ ಹೆಚ್ಚಳ- ಇಲ್ಲಿದೆ ನೂತರ ದರ!

ಮಹೀಂದ್ರ  e2o ಪ್ಲಸ್ ಕಾರಿನಲ್ಲಿ p2,p4,p6, p8 ವೇರಿಯೆಂಟ್ ಲಭ್ಯವಿದೆ. P8 ವೇರಿಯೆಂಟ್ ಗರಿಷ್ಟ ಮೇಲೇಜ್ ರೇಂಜ್ ನೀಡಲಿದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 140 ಕಿ.ಮೀ ಪ್ರಯಾಣ ನೀಡಲಿದೆ.  e2o ಪ್ಲಸ್ ಕಾರಿನ ಬೆಲೆ 7.5 ಲಕ್ಷ ರೂಪಾಯಿಂದ 8.2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಇದನ್ನೂ ಓದಿ: ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರು- ಬೆಲೆ ಬಹಿರಂಗ ಪಡಿಸಿದ ಮಾರುತಿ!

ಮಹೀಂದ್ರ 2020ರಲ್ಲಿ KUV100 ಹಾಗೂ XUV300 ಎಲೆಕ್ಟ್ರಿಕ್ ವೇರಿಯೆಂಟ್ ಬಿಡುಗಡೆ ಮಾಡುತ್ತಿದೆ. ಈಗಾಗಲೇ ವೆರಿಟೋ ಕಾರು ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಿದೆ. ಎಲೆಕ್ಟ್ರಿಕ್ ಕಾರಿನಲ್ಲಿ ಭಾರತದಲ್ಲಿ ಕ್ರಾಂತಿ ಮಾಡಲು ಹೊರಟಿರುವ ಮಹೀಂದ್ರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಈ ಮೂಲಕ ಇತರ ಎಲೆಕ್ಟ್ರಿಕ್ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

click me!