ಭಾರತದಲ್ಲಿ ದಾಖಲೆ ಬರೆದ ಮಾರುತಿ ಸುಜುಕಿ ಸ್ವಿಫ್ಟ್!

By Web DeskFirst Published Nov 27, 2018, 3:17 PM IST
Highlights

ಮಾರುತಿ ಸುಜುಕಿ ಸಂಸ್ಥೆಯ  ಹಾಟ್ ಫೇವರಿಟ್ ಸ್ವಿಫ್ಟ್ ಕಾರು ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. 2005ರಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿದ ಸ್ವಿಫ್ಟ್ ಇದೀಗ ನೂತನ ದಾಖಲೆ ಬರೆದಿದೆ. 
 

ಬೆಂಗಳೂರು(ನ.27): ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಮಾಡಿದ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಇದೀಗ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ. 2005ರಲ್ಲಿ ಭಾರತದ ರಸ್ತೆಗಿಳಿದ ಸ್ವಿಫ್ಟ್ ಕಾರು ಬರೋಬ್ಬರಿ 13 ವರ್ಷಗಳ ಬಳಿಕವೂ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ. ಇಷ್ಟೇ ಅಲ್ಲ ಈಗಲೂ ಮಾರಾಟದಲ್ಲಿ ಯಾವುದೇ ಇಳಿಕೆ ಕಂಡಿಲ್ಲ.

ಇದನ್ನೂ ಓದಿ: ಹೊಸ ನೀತಿಯಿಂದ ಕಾರು ಖರೀದಿ ಇನ್ನು ಕಷ್ಟ!

2005 ರಿಂದ ಇದುವರೆಗೆ ಮಾರುತಿ ಸ್ವಿಫ್ಟ್ ಬರೋಬ್ಬರಿ 20 ಲಕ್ಷ ಕಾರುಗಳ ಮಾರಾಟವಾಗಿದೆ. ಈ ಮೂಲಕ ಗರಿಷ್ಠ ಮಾರಾಟವಾದ ಹ್ಯಾಚ್‌ಬ್ಯಾಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಈ ವರ್ಷದ ಆರಂಭದಲ್ಲಿ ಮಾರುತಿ ಸುಜುಕಿ ಒಟ್ಟು 2 ಕೋಟಿ ಕಾರುಗಳನ್ನ ಮಾರಾಟ ಮಾಡಿದ ದಾಖಲೆ ಬರೆದಿತ್ತು.

ಇದನ್ನೂ ಓದಿ: 5 ಲಕ್ಷ ರೂಪಾಯಿ ಒಳಗಿನ 10 ಕಾರು ಇಲ್ಲಿದೆ-ಕಡಿಮೆ ಬೆಲೆ ಗರಿಷ್ಠ ಮೈಲೇಜ್!

ಮಾರುತಿ ಸುಜುಕಿ ಸಂಸ್ಥೆಯ ಆಲ್ಟೋ ಕಾರು ಬರೋಬ್ಬರಿ 35 ಲಕ್ಷ ಕಾರುಗಳು ಮಾರಾಟವಾಗಿದೆ. ಈ ಮೂಲಕ ಭಾರತದಲ್ಲಿ ಗರಿಷ್ಠ ಮಾರಾಟವಾದ ಕಾರು ಅನ್ನೋ ಹೆಗ್ಗಳಿಕೆಗೆ ಪಡೆದುಕೊಂಡಿದೆ.  

click me!