20 ದೇಶ, 25,000km, ಲಂಡನ್‌ನಿಂದ ಆರಂಭಿಸಿದ ಅತೀ ದೊಡ್ಡ ಟ್ರಿಪ್ ಬೆಂಗಳೂರಿನಲ್ಲಿ ಅಂತ್ಯ!

Published : Sep 27, 2020, 06:31 PM IST
20 ದೇಶ, 25,000km, ಲಂಡನ್‌ನಿಂದ ಆರಂಭಿಸಿದ ಅತೀ ದೊಡ್ಡ ಟ್ರಿಪ್ ಬೆಂಗಳೂರಿನಲ್ಲಿ ಅಂತ್ಯ!

ಸಾರಾಂಶ

ಟ್ರಿಪ್ ಎಂದರೆ ಸಾಕು ಎಲ್ಲರ ಕಣ್ಣು ಅರಳುತ್ತದೆ. ಪ್ರತಿ ದಿನ ಅದೆಷ್ಟೋ ಟ್ರಿಪ್‌ ಪ್ಲಾನ್ ರೂಪುಗೊಳ್ಳುತ್ತದೆ. ಅದರಲ್ಲಿ ಟ್ರಿಪ್ ಹೋಗುವವರ ಸಂಖ್ಯೆ ತೀರಾ ವಿರಳ. ಇಲ್ಲೊಂದು ವಿಶೇಷ ಹಾಗೂ ಅತೀ ದೊಡ್ಡ ಟ್ರಿಪ್ ಕುರಿತು ಮಾಹಿತಿ ಇದೆ. ಪ್ಲಾನ್ ಕೇಳಿದರೆ ಒಂದು ಕ್ಷಣ ಇದು ಸಾಧ್ಯವೇ? ಅನ್ನೋ ಪ್ರಶ್ನೆ ಮೂಡುವುದು ಸಹಜ. ಅಸಾಧ್ಯವಾದದ್ದನ್ನು ಸಾಧಿಸಿ ತೋರಿಸಿದ್ದಾರೆ. ಟೂರಿಸಂ ದಿನವಾದ ಇಂದು ಈ ವಿಶೇಷ ಟ್ರಿಪ್ ಕುರಿತ ಮಾಹಿತಿ ಇಲ್ಲಿದೆ

ಬೆಂಗಳೂರು(ಸೆ.27):  ಇದು ಅತೀ ದೊಡ್ಡ ಟ್ರಿಪ್. ಬರೋಬ್ಬರಿ 25,000 ಕಿಲೋಮೀಟರ್ ರಸ್ತೆ ಪ್ರಯಾಣ, 20 ದೇಶ ಹಾಗೂ ಗಡಿ ದಾಟಿದ ಪಯಣ, ಲಂಡನ್‌ನಿಂದ ಆರಂಭಿಸಿ ಬೆಂಗಳೂರಿನಲ್ಲಿ ಅಂತ್ಯಗೊಂಡ ಸಾಹಸಮಯ ಹಾಗೂ ಅತ್ಯಂತ ರೋಚಕ ಪಯಣ ಹಲವರ ಟ್ರಿಪ್ ಪ್ಲಾನ್‌ಗೆ ಸ್ಪೂರ್ತಿಯಾಗಲಿದೆ. ಬ್ರಹ್ಮೇಶ್ ಪುಟ್ಟಣ್ಣಯ್ಯ (42)  ಭರತ್ ದೇವನಾಥನ್ (42), ರೋಹಿತ್ ಶರ್ಮಾ (42), ಹಾಗೂ ಹರೀಶ್ ಗರ್ಗ್ (44) ಎಂಬ ನಾಲ್ವರು ಗೆಳೆಯರು ಈ ಟ್ರಿಪ್ ಪೂರ್ತಿಗೊಳಿಸಲು 78 ದಿನ ತೆಗೆದುಕೊಂಡಿದ್ದಾರೆ.

ರೋಡ್ ಟ್ರಿಪ್‌ನಲ್ಲಿ ಎದುರಾಗೋ 5 ಸಮಸ್ಯೆಗಳು ಮತ್ತು ಪರಿಹಾರ!..

ಕೆಲಸದ ನಿಮಿತ್ತ ಲಂಡನ್‌ನಲ್ಲಿ ಬ್ರಹ್ಮೇಶ್ ಬೆಂಗಳೂರಿಗೆ ವಾಪಸ್ಸಾಗಲು ನಿರ್ಧರಿಸಿದ್ದರು. ಈ ವೇಳೆ ರೋಡ್ ಟ್ರಿಪ್ ಕುರಿತು ಇತರ ಗೆಳೆಯರಿಗೆ ಬಳಿ ಮೆಸೇಜ್ ಮಾಡಿದ್ದಾರೆ. ತಕ್ಷಣವೇ ಇತರ ಮೂವರು ಒಕೆ ಎಂದಿದ್ದಾರೆ.  ಇದಕ್ಕೂ ಮೊದಲು ಹಲವು ಬಾರಿ ಇದೇ ಗೆಳೆಯರ ಗುಂಪು ಹಲವು ದೇಶಗಳ ಸುತ್ತುವ ಪ್ಲಾನ್ ಕುರಿತು ಚರ್ಚಿಸಿದ್ದರು. ಪುಟ್ಟ ಮಗಳ ಕಾರಣ ಬ್ರಹ್ಮೇಶ್ ಪತ್ನಿ ಹಾಗೂ ಮಗಳು ವಿಮಾನ ಏರಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಪೋಸ್ಟ್ ಕೋವಿಡ್‌ನಲ್ಲಿ ಕರಾವಳಿ ಸುತ್ತೋಣ: ಇಂದು ಟೂರಿಸಂ ದಿನ

20 ದೇಶಗಳ ಗಡಿ ದಾಟುವ ಕಾರಣ ದಾಖಲೆ ಪತ್ರ, ಪರವಾನಗಿ ಸೇರಿದಂತೆ ಇತರ ಪತ್ರಗಳಿಗಾಗಿ ಕುರಿತು ಒಂದೆರೆಡು ತಿಂಗಳು ಕೆಲಸ ಮಾಡಿದ್ದಾರೆ. ಲಂಡನ್‌ನಲ್ಲಿ ಬ್ರಹ್ಮೇಶ್ ಬಳಸುತ್ತಿದ್ದ SUV ಕಾರನ್ನು ಪ್ರಯಾಣಕ್ಕೆ ಬೇಕಾದ ರೀತಿಯಲ್ಲಿ ರೆಡಿ ಮಾಡಿದ್ದಾರೆ. ಟೈಯರ್, ಟೂಲ್ಸ್, ಆಹಾರ, ಅಡುಗೆ ಸೇರಿದಂತೆ ಪ್ರಯಾಣದಲ್ಲಿ ಅಗತ್ಯಬೀಳುವ ವಸ್ತುಗಳಿಗಾಗಿ ಕಾರು ರೆಡಿ ಮಾಡಲಾಯಿತು.

ಜೂನ್ ತಿಂಗಳಲ್ಲಿ ಇವರ ಟ್ರಿಪ್ ಆರಂಭಗೊಂಡಿತು. ಲಂಡನ್‌ನಿಂದ ಹೊರಟ ನಾಲ್ವರು ಪ್ರವಾಸಿ ತಾಣಗಳಲ್ಲದ ಪ್ರದೇಶಗಳ ಮೂಲಕ ಪಯಣ ಆರಂಭಿಸಿದ್ದಾರೆ. ಯುರೊಪ್ ಗಡಿ ಹಾದು ಮುಂದೆ ಸಾಗುತ್ತಿದ್ದ ಇವರನ್ನು ಪ್ರತಿ ರಾಷ್ಟ್ರದ ಗಡಿಗಳಲ್ಲಿ ಅಲ್ಲಿನ ನಾಗರೀಕರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ರಷ್ಯಾ ತಲುಪಿದ ವೇಳೆ ಕುಟುಂಬವೊಂದು ಇವರನ್ನು ಆತ್ಮೀಯವಾಗಿ ಸ್ವಾಗತಿಸಿ ಆಹಾರ ನೀಡಿ ಸತ್ಕರಿಸಿತ್ತು.

ಸಿರಿಯಾದಲ್ಲಿ ದಾಳಿ, ಆಕ್ರಮಗಳು ಹೆಚ್ಚಾಗಿತ್ತು. ಈ ವೇಳೆ ಹಲವು ಕುಟುಂಬಗಳು ಪ್ರಾಣ ರಕ್ಷಿಸಿಕೊಳ್ಳಲು ಗಡಿ ದಾಟುತ್ತಿದ್ದ ದೃಶ್ಯಗಳು ಮನಕಲುಕುವಂತಿತ್ತು. ಈ ವೇಳೆ ಮಕ್ಕಳಿಗೆ ನೆರವಾಗಲು ಫಂಡ್ ರೈಸ್ ಮೂಲಕ ಹಣ ಸಂಗ್ರಹಿಸಿದ್ದೆವು. ನಮ್ಮ ಕಾರಿನಲ್ಲಿ ಈ ಕುರಿತು ಸ್ಟಿಕ್ಕರ್ ಅಂಟಿಸಿ ಪ್ರಯಾಣ ಮುಂದುವರಿಸಿದೆವು. ಇನ್ನು ರಷ್ಯಾ-ಕಜಕಿಸ್ತಾನ ಗಡಿಯಲ್ಲಿ ಇವರ ವಾಹನ ಕೆಟ್ಟು ನಿಂತಿತು. ನಾಲ್ವರು ಪ್ರಯತ್ನಿಸಿದರೂ ವಾಹನದ ಸಮಸ್ಯೆ ತಿಳಿಯಲಿಲ್ಲ. ಈ ವೇಳೆ ಸ್ಥಳೀಯರು ಫೋನ್ ಮೂಲಕ ಮೆಕಾನಿಕ್ ಕರೆಸಿ ಸಹಾಯ ಮಾಡಿದರು.

ಚೀನಾದಲ್ಲಿ ಕುಟುಂಬವೊಂದು ನಮಗೆ ಐಸ್‌ಕ್ರೀಮ್ ಆಹಾರ ನೀಡಿ ಮಾತುಕತೆ ನಡೆಸಿತ್ತು. ಪ್ರಯಾಣದಲ್ಲಿ ಪ್ರತಿ ದೇಶದ ನಾಗರೀಕರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ನೆರವು ನೀಡಿದ್ದಾರೆ. ಮಯನ್ಮಾನರ್ ಮೂಲಕ ಭಾರತ ಗಡಿ ಪ್ರವೇಶಿಸಿದೆವು. ಬಳಿಕ ನೇರವಾಗಿ ಬೆಂಗಳೂರಿಗೆ ಆಗಮಿಸಿದೆವು ಎಂದು ಭರತ್ ಹೇಳಿದ್ದಾರೆ.

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
Virat Kohli to KL Rahul: ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು