ಕವಾಸಕಿ KLX 110 ಮಿನಿ ರೇಸ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಸುಜುಕಿ ಇದೀಗ ನೂತನ ಬೈಕ್ ಬಿಡುಗಡೆ ಮಾಡಿದೆ. DR-Z50 ಅನ್ನೋ ಆಫ್ ರೋಡ್ ಬೈಕ್‌ನ ವಿಶೇಷತೆ ಏನು? ಇಲ್ಲಿದೆ ಮಾಹಿತಿ.
ನವದೆಹಲಿ(ಮಾ.12): ಆಫ್ ರೋಡ್ ಬೈಕ್ ಇದೀಗ ಟ್ರೆಂಡ್ ಆಗಿ ಬದಲಾಗಿದೆ. ಡರ್ಟ್ ರೇಸ್ ಸ್ಪರ್ಧಿಗಳು ಹೆಚ್ಚಾಗಿ ಬಳಸುತ್ತಿದ್ದ ಈ ಆಫ್ ರೋಡ್ ಬೈಕ್ ಇದೀಗ ಯುವಕರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದೆ. ಇದೀಗ ಸುಜುಕಿ ಮೋಟಾರ್ಸ್ DR-Z50 ಆಫ್ ರೋಡ್ ಬೈಕ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: 5 ಸಾವಿರಕ್ಕೆ ಬುಕ್ ಮಾಡಿ ಯಮಹಾ MT-15 ಬೈಕ್!
ಡರ್ಟ್ ರೇಸ್ ಆರಂಭಿಕರಿಗೆ ಈ ಬೈಕ್ ಹೆಚ್ಚು ಸೂಕ್ತ. 49cc, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಏರ್ ಕೂಲ್‌ಡ್ ಎಂಜಿನ್ ಹೊಂದಿದ್ದು, 3 ಸ್ಪೀಡ್ ಗೇರ್ ಬಾಕ್ಸ್ ಹಾಗೂ ಆಟೋಮ್ಯಾಟಿಕ್ ಕ್ಲಚ್ ಹೊಂದಿದೆ. DR-Z50 ಬೈಕ್ ಇಂಧನ ಸಾಮರ್ಥ್ಯ 3 ಲೀಟರ್. 54 ಕೆ.ಜಿ ತೂಕ ಹೊಂದಿದೆ.
ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
ಕವಾಸಕಿ KLX 110 ಮಿನಿ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಸುಜುಕಿ DR-Z50 ಆಫ್ ರೋಡ್ ಬೈಕ್ ಬಿಡುಗಡೆ ಮಾಡಿದೆ. ಕವಾಸಕಿ ಬೈಕ್ ಬೆಲೆ 2.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ನೂತನ ಸುಜುಕಿ DR-Z50 ಬೈಕ್ ಬೆಲೆ 2.55 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).