ಆ.7 ರಿಂದ ಕಿಯಾ ಸೊನೆಟ್ ಕಾರಿನ ಬುಕಿಂಗ್ ಆರಂಭ!

By Suvarna News  |  First Published Jul 28, 2020, 6:32 PM IST

ಮಾರುತಿ ಬ್ರೆಜಾ ಸೇರಿದಂತೆ ಸಬ್‌ಕಾಂಪಾಕ್ಟ್ SUV ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಮೋಟಾರ್ಸ್ ಸೊನೆಟ್ ಕಾರು ಬಿಡುಗಡೆ ಮಾಡುತ್ತಿದೆ. ಆಗಸ್ಟ್ 7 ರಿಂದ ಕಾರು ಅನಾವರಣಗೊಳ್ಳಲಿದೆ. ಇದೇ ದಿನದಿಂದ ಬುಕಿಂಗ್ ಕೂಡ ಆರಂಭಗೊಳ್ಳಲಿದೆ. ನೂತನ ಕಾರಿನ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ.


ಅನಂತಪುರಂ(ಜು.28); ಕಿಯಾ ಮೋಟಾರ್ಸ್ ಭಾರತದಲ್ಲಿ ಸೆಲ್ಟೋಸ್ ಕಾರು ಬಿಡುಗಡೆ ಮಾಡಿ ಯಶಸ್ಸು ಸಾಧಿಸಿದೆ. ಇದರ ಬಳಿಕ ಕಾರ್ನಿವಲ್ MPV ಕಾರು ಬಿಡುಗಡೆ ಮಾಡಿದೆ. ಇದೀಗ ಕಿಯಾ ಮೋಟಾರ್ಸ್ ಸೊನೆಟ್ ಸಬ್‌ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡುತ್ತಿದೆ. ಆಗಸ್ಟ್ 7 ರಿಂದು ಕಾರು ವಿಶ್ವದಾದ್ಯಂತ ಅನಾವರಣಗೊಳ್ಳಲಿದೆ. ಇದೇ ದಿನ ಡೀಲರ್‌ಗಳು ಬುಕಿಂಗ್ ಆರಂಭಿಸುವುದಾಗಿ ಹೇಳಿದ್ದಾರೆ.

ಎಂಜಿ, ಹ್ಯುಂಡೈ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ಕಿಯಾ ಸೆಲ್ಟೋಸ್ ಎಲೆಕ್ಟ್ರಿಕ್ ಕಾರು!.

Tap to resize

Latest Videos

undefined

ಆಗಸ್ಟ್ 7 ರಂದು ಅನಾವರಣಗೊಳ್ಳಲಿರುವ ಕಿಯಾ ಸೊನೆಟ್ ಕಾರು ಸೆಪ್ಟೆಂಬರ್ ತಿಂಗಳಿನಿಂದ ಮಾರಾಟ ಆರಂಭಿಸಲಿದೆ. ಈಗಾಲೇ ಸೊನೆಟ್ ಕಾರಿನ ಟೀಸರ್ ಬಿಡುಗಡೆ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನೂತನ ಕಾರು 3 ವೇರಿಯೆಂಟ್ ಎಂಜಿನ್ ಆಯ್ಕೆ ಇರಲಿದೆ. 1.2 ಲೀಟರ್ ಪೆಟ್ರೋಲ್, 1.5 ಲೀಟರ್ ಡೀಸೆಲ್ ಹಾಗೂ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಇರಲಿದೆ.

ನೂನತ ಕಿಯಾ ಸೊನೆಟ್ ಕಾರಿನ ಬೆಲೆ 7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಗರಿಷ್ಠ 12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಮಾರುತಿ ಬ್ರೆಜಾ, ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಹೀಂದ್ರ XUV300, ಫೋರ್ಡ್ ಇಕೋಸ್ಪೋರ್ಟ್ ಸೇರಿದಂತೆ ಸಬ್ ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

click me!