ಭಾರತೀಯ ರೈಲ್ವೇ ಇಲಾಖೆ ವಿಶ್ವದಲ್ಲೇ ಅತೀ ದೊಡ್ಡ ರೈಲು ಜಾಲ ಹೊಂದಿದೆ. ಭಾರತದಾದ್ಯಂತ 1.23 ಲಕ್ಷ ಕಿ.ಮೀಟರ್ ವ್ಯಾಪಿಸಿದೆ. ಇಷ್ಟು ದೊಡ್ಡ ರೈಲ್ವೇ ಹಳಿಗಳ ನಿರ್ವಹಣೆ ಸವಾಲಿನ ಕೆಲಸ. ಇದೀಗ ಅಜ್ಮೀರ್ ರೈಲ್ವೇ ಅಧಿಕಾರಿ ವಿನೂತನ ಸೈಕಲ್ ನಿರ್ಮಿಸಿದ್ದಾರೆ. ತಮ್ಮ ವ್ಯಾಪ್ತಿಗೆ ಬರುವ ರೈಲ್ವೇ ಹಳಿ ಪರಿಶೀಲನಗೆ ಈ ಸೈಕಲ್ ಉಪಯುಕ್ತವಾಗಿದೆ.
ರಾಜಸ್ಥಾನ(ಜು.28): ಭಾರತೀಯ ರೈಲ್ವೇ ಇಲಾಖೆಯ ಪ್ರತಿ ವಲಯದಲ್ಲೂ ಹಳಿಗಳ ಪರಿಶೀಲನೆ, ನಿರ್ವಹಣೆ ಮಾಡಲಾಗುತ್ತದೆ. ಹಳಿಗಳ ಪರಿಶೀಲನೆ ಅತೀ ಅಗತ್ಯ. ರೈಲು ಸಂಚಾರ ಆರಂಭಗೊಳ್ಳುವ ಮೊದಲು ಹಳಿಗಳ ಪರಿಶೀಲನೆ ಮಾಡಲಾಗುತ್ತದೆ. ಇದು ಸವಾಲಿನ ಕೆಲಸ. ಇದಕ್ಕಾಗಿ ರಾಜಸ್ಥಾನದ ಅಜ್ಮೀರನ ರೈಲು ಅಧಿಕಾರಿ ಪಂಕಜ್ ಸೋನಿ ವಿಶೇಷ ಸೈಕಲ್ ನಿರ್ಮಾಣ ಮಾಡಿದ್ದಾರೆ. ಈ ಸೈಕಲ್ ಮೂಲಕ ಸುಲಭವಾಗಿ ರೈಲು ಹಳಿ ಪರಿಶೀಲನೆ ಸಾಧ್ಯ.
ಚೀನಾಗೆ ಸದ್ದಿಲ್ಲದೆ ಹೊಡೆತ ನೀಡಿದ ಹೀರೋ ಸೈಕಲ್; ಕಂಗಾಲಾದ ಡ್ರ್ಯಾಗನ್ ರಾಷ್ಟ್ರ!.
ಹಳೇ ಬೈಸಿಕಲ್‌ನ್ನು ರೈಲು ಹಳಿ ಪರಿಶೀಲನೆ ಹಾಗೂ ನಿರ್ವಹಣೆಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಲಾಗಿದೆ. ಸೈಕಲ್‌ಗೆ ಹೆಚ್ಚುವರಿಗೆ ಕಬ್ಬಿಣಡ ರಾಡ್ ಸೇರಿಸಲಾಗಿದೆ. ಇದರ ಸಹಾಯದಿಂದ ಸೈಕಲ್ ರೈಲು ಹಳಿಯ ಮೇಲೆ ಸಂಚರಿಸಲಿದೆ. ಈ ಸೈಕಲ್‌ನಿಂದ ಹಳಿ ರಿಪೇರಿ ಇದ್ದ ಸ್ಥಳಕ್ಕೆ ಸುಲಭವಾಗಿ ತೆರಳಿ ರಿಪೇರಿ ಮಾಡಬಹುದು.
ಹಲವು ಭಾಗಗಳಲ್ಲಿ ರೈಲು ಹಳಿ ರಿಪೇರಿ ಮಾಡಲು ಇತರ ಯಾವುದೇ ದಾರಿಗಳಿರುವುದಿಲ್ಲ. ಇಷ್ಟೇ ಅಲ್ಲ ಇತರ ವಾಹನ ಮೂಲಕ ಸ್ಥಳಕ್ಕೆ ತೆರಳಿ ರಿಪೇರಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ಸೈಕಲ್ ಮೂಲಕ ಹಳಿಯಲ್ಲೇ ಸಂಚರಿಸಬುಹುದು. ಹಳಿಯ ಪರಿಶೀಲನೆ ಕೂಡ ಸಾಧ್ಯ. ಇದರಿಂದ ಬಹಳಷ್ಟು ಸಮಯ ಉಳಿತಾಯವಾಗಲಿದೆ ಎಂದು ಪಂಕಜ್ ಸೋನಿ ಹೇಳಿದ್ದಾರೆ.