ಸೆಲ್ಟೋಸ್, ಕ್ರೆಟಾಗೆ ಪ್ರತಿಸ್ಪರ್ಧಿ; ಬರುತ್ತಿದೆ ಮಾರುತಿ ಸುಜುಕಿ ಫ್ಯೂಚರೋ ಇ ಕಾರು!

By Suvarna News  |  First Published Jan 22, 2020, 3:17 PM IST

ಭಾರತದಲ್ಲಿ SUV ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಪ್ರತಿ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಸಬ್ ಕಾಂಪಾಕ್ಟ್ SUV ಕಾರಿನಲ್ಲಿ ಬ್ರೆಜ್ಜಾ ಮೂಲಕ ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿರುವ ಮಾರುತಿ ಸುಜುಕಿ ಇದೀಗ ಕಿಯಾ ಸೆಲ್ಟೋಸ್ ಹಾಗೂ ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ SUV ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರಿನ ವಿವರ ಇಲ್ಲಿದೆ. 


ನವದೆಹಲಿ(ಜ.22): ಫೆಬ್ರವರಿ ಮೊದಲ ವಾರದಲ್ಲಿ ಭಾರತದ ಅತ್ಯಂದ ದೊಡ್ಡ ಅಟೋ ಎಕ್ಸ್ಪೋ ಮೋಟಾರು ಶೋ ನಡೆಯಲಿದೆ. ಗ್ರೇಟರ್ ನೋಯ್ದಾದಲ್ಲಿ ನಡೆಯಲಿರುವ ಈ ಮೋಟಾರು ಶೋನಲ್ಲಿ ಮಾರುತಿ ಸುಜುಕಿ ಹೊಸ SUV ಕಾರು ಬಿಡುಗಡೆ ಮಾಡುತ್ತಿದೆ.  ಮಾರುತಿ ಸುಜುಕಿ ನೂತನ ಫ್ಯೂಚರೋ ಇ ಕಾರು ಅನಾವರಣಕ್ಕೆ ಸಜ್ಜಾಗಿದೆ.

ಇದನ್ನೂ ಓದಿ: 7ನೇ ಕ್ಲಾಸಿನಲ್ಲೇ ನಿಖಿಲ್ ಬಳಿ ಇತ್ತು ಕಾರು; ಇಲ್ಲಿದೆ ಕುಮಾರಸ್ವಾಮಿ ಪುತ್ರನ 'ಕಾರುಬಾರು'!

Tap to resize

Latest Videos

undefined

ಫೆಬ್ರವರಿ 7 ರಂದು ಮಾರುತಿ ಸುಜುಕಿ ಪ್ಯೂಚರೋ ಇ SUV ಕಾರು ಪರಿಚಯಿಸಲಿದೆ. ಇದಕ್ಕೂ ಮುನ್ನ ಕಾರಿನ ಟೀಸರ್ ಬಿಡುಗಡೆ ಮಾಡಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಮೊದಲ ನೋಟದಲ್ಲಿ ಫ್ಯುಚರೋ ಇ ಕಾರೂ ಗಮನ ಸೆಳೆಯುತ್ತಿದೆ. ಅತ್ಯಂತ ಆಕರ್ಷಕ ಲುಕ್ ಈ ಕಾರಿನ ವಿಶೇಷತೆಗಳಲ್ಲೊಂದು.

ಇದನ್ನೂ ಓದಿ: ಟಾಟಾ ಅಲ್ಟ್ರೋಜ್ ಬಿಡುಗಡೆ; ಕಡಿಮೆ ಬೆಲೆ, ಅತ್ಯಂತ ಸುರಕ್ಷತೆಯ ಕಾರು!

ಮಾರುತಿ ಸುಜುಕಿ ಫ್ಯೂಚರೋ ಇ ಕಾರು ಆಕರ್ಷಕ ಡೈಸನ್ ಹೊಂದಿದೆ. ಇದು ಮುಂದಿನ ಪೀಳಿಗೆಯ ಡಿಸೈನ್. ಭಾರತದ ಯುವ ಜನಾಂಗದ ಕಾರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕಾರಿನ ಪ್ರತಿಯೊಂದು ವಿಭಾದಗ ಹಂತವನ್ನು ಅಷ್ಟೇ ಕಾಳಜಿ ವಹಿಸಿ ನಿರ್ಮಾಣ ಮಾಡಲಾಗುತ್ತದೆ. ಹೀಗಾಗಿ ಭಾರತದಲ್ಲಿ ನೂತನ SUV ಕಾರು ಹೊಸ ಸಂಚನ ಸೃಷ್ಟಿಸಲಿದೆ ಎಂದು ಮಾರುತಿ ಸುಜುಕಿ ಕಾರ್ಯನಿರ್ವಹಣ ನಿರ್ದೇಶಕ ಸಿವಿ ರಾಮನ್ ಹೇಳಿದ್ದಾರೆ. 

ಇದನ್ನೂ ಓದಿ: ಮಾರುತಿ ಸೆಲೆರಿಯೋ BS6 ಕಾರು ಬಿಡುಗಡೆ; ಬೆಲೆ ಬದಲಾಗಿದೆ!

ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್ ಸೇರಿದಂತೆ ಕಾಂಪಾಕ್ಟ್ SUV ಕಾರುಗಳಿಗೆ ಪೈಪೋಟಿಯಾಗಿ ಮಾರುತಿ ಫ್ಯುಚರೋ ಇ ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರು 1.5 ಲೀಟರ್, DDiS, BS6 ಎಂಜಿನ್ ಹೊಂದಿದೆ. ಈ ಕಾರಿನ ಬೆಲೆ ಬಹಿರಂಗವಾಗಿಲ್ಲ. 

click me!