ಕಳೆದ 5 ವರ್ಷಗಳಲ್ಲಿ ಮಾರುತಿ ಸೆಲೆರಿಯೋ ಜನರ ಮನಸ್ಸು ಗೆದ್ದಿದೆ. ನಗರ ಪ್ರದೇಶದಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲೂ ಸೆಲೆರಿಯೋ ಕಾರು ಜನಮನ್ನಣೆ ಗಳಿಸಿದೆ. ಕಡಿಮೆ ಬೆಲೆ, ಮೈಲೇಜ್ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಮಾರುತಿ ಸೆಲೆರಿಯೋ ಹೇಳಿ ಮಾಡಿಸಿದಂತಿದೆ. ಇದೀಗ ಸೆಲೆರಿಯೋ BS6 ಎಂಜಿನ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.
ನವದೆಹಲಿ(ಜ.20): ಮಾರುತಿ ಸುಜುಕಿ ಸೆಲೆರಿಯೋ ಕಾರು BS6 ಎಂಜಿನ್ ಅಪ್‌ಗ್ರೇಡ್ ಆಗಿದೆ. ಎಪ್ರಿಲ್ ತಿಂಗಳಿಂದ ಮಾರಾಟವಾಗುವ ಎಲ್ಲಾ ಹೊಸ ವಾಹನಗಳು BS6 ಎಂಜಿನ್ ಹೊಂದಿರಲೇಬೇಕು. ಹೀಗಾಗಿ ಬಹುತೇಕ ಎಲ್ಲಾ ಕಂಪನಿಗಳು ಈಗಾಗಲೇ BS6 ಎಂಜಿನ್ ಉತ್ಪಾದನೆ ಮಾಡುತ್ತಿದೆ. ಸಣ್ಣ ಕಾರಿನಲ್ಲಿ ಯಶಸ್ವಿಯಾಗಿರುವ ಸೆಲೆರಿಯೋ ಕಾರು ಕೂಡ BS6 ಎಂಜಿನ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಇಕೋ BS6 ಕಾರು ಲಾಂಚ್; ಬೆಲೆ ಕೇವಲ 3.81 ಲಕ್ಷ ರೂ!
undefined
ನೂತನ ಕಾರಿನ ಬೆಲೆ 4,41,200 ರೂಪಾಯಿ (ಏಕ್ಸ್ ಶೋ ರೂಂ, ದೆಹಲಿ)ಯಿಂದ ಟಾಪ್ ಮಾಡೆಲ್ ಬೆಲೆ 5,67,300 ರೂಪಾಯಿ (ಎಕ್ಸ್ ಶೋ ರೂಂ, ದೆಹಲಿ). ಸೆಲೆರಿಯೋ ಪೆಟ್ರೋಲ್ ವೇರಿಯೆಂಟ್ ಕಾರು ಮಾತ್ರ ಲಭ್ಯವಿದೆ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಬಳಿಕ ಅಲ್ಟ್ರೋಝ್ ದೇಶದ ಅತ್ಯಂತ ಸುರಕ್ಷತೆ ಕಾರು; ಸೇಫ್ಟಿ ರಿಸಲ್ಟ್ ಬಹಿರಂಗ!.
ಇತ್ತೀಚೆಗಷ್ಟೇ ಮಾರುತಿ ಇಕೋ BS6 ಎಂಜಿನ್ ಕಾರು ಬಿಡುಗಡೆಯಾಗಿದೆ. ಇದೀಗ ಸೆಲೆರಿಯೋ ಕೂಡ BS6 ಎಂಜಿನ್ ಅಪ್‌ಗ್ರೇಡ್ ಆಗಿದೆ. ಸೆಲೆರಿಯೋ ಕಾರು 1.0 ಲೀಟರ್, K1 ಪೆಟ್ರೋಲ್ ಎಂಜಿನ್ ಹೊಂದಿದ್ದು, 67ps ಪವರ್ ಹಾಗೂ 90 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಪ್ರತಿ ಲೀಟರ್‌ಗೆ 23.10 ಮೈಲೇಜ್ ನೀಡಲಿದೆ(ಪ್ರತಿ ಲೀಟರ್ ಪೆಟ್ರೋಲ್‌ಗೆ).