ಪೊಲೀಸರ ಎಡವಟ್ಟು-ಹೆಲ್ಮೆಟ್ ಹಾಕದ ಕಾರು ಚಾಲಕನಿಗೆ ದಂಡ!

By Web Desk  |  First Published Apr 30, 2019, 5:51 PM IST

ಪೊಲೀಸರ ಎಡವಟ್ಟಿನಿಂದ ಟಾಟಾ ನೆಕ್ಸಾನಾ ಕಾರು ಮಾಲೀಕನಿಗೆ ದಂಡ ಹಾಕಿದ್ದಲ್ಲದೇ, ದಂಡ ಕಟ್ಟಿಸಿ ಕಾರು ಬಿಡುಡಗೆ ಮಾಡಿದ ಘಟನೆ ನಡೆದಿದೆ. ಈ ಎಡವಟ್ಟಿನ ಹೆಚ್ಚಿನ ವಿವರ ಇಲ್ಲಿದೆ.


ಕೊಲ್ಲಂ(ಏ.30): ಟಾಟಾ ನೆಕ್ಸಾನ್ ಕಾರಿನ ಪ್ರಯಾಣ ಮಾಡುತ್ತಿದ್ದ ಮಾಲೀಕನ್ನನ್ನು ನಿಲ್ಲಿಸಿದ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದ ಘಟನೆ ನಡೆದಿದೆ. ಅದೆಷ್ಟೇ ತಿಳಿ ಹೇಳಿದರೂ ಪೊಲೀಸರು ಯಾವುದನ್ನೂ ಕೇಳಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ದಂಡ ಕಟ್ಟಿ ಮುಂದೆ ಸಾಗಿದ್ದಾರೆ.

ಇದನ್ನೂ ಓದಿ: 18 ತುಂಬಿಲ್ಲ, ಬೈಕ್ ಮೇಲೆ ಸವಾರಿ- 172 ಹುಡುಗರಿಗೆ ಪೊಲೀಸ್ ಕ್ಲಾಸ್!

Latest Videos

undefined

ಈ ಘಟನೆ ನಡೆದಿದ್ದು ಕೇರಳದಲ್ಲಿ ಗೋಪ ಕುಮಾರ್ ತಮ್ಮ ಟಾಟಾ ನೆಕ್ಸಾನ್ ಕಾರಿನಲ್ಲಿ ಶಸ್ತಾನ್‌ಕೋಟಾ ಚಾವರ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಕುಟುಂಬದ ಜೊತೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಪೊಲೀಸರು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಹಾಕಿದ್ದಾರೆ. ತಾನು ಕಾರು ಡ್ರೈವ್ ಮಾಡುತ್ತಿದ್ದೇನೆ, ನಿಮ್ಮ ದಾಖಲೆ ಮತ್ತೊಮ್ಮೆ ಪರಿಶೀಲಿಸಿ ಎಂದರೆ ಕೇಳಿದರೂ ಪೊಲೀಸರು ನನ್ನ ಮನವಿ ಕೇಳಲಿಲ್ಲ. 100 ರೂಪಾಯಿ ದಂಡ ಕಟ್ಟಬೇಕಾಯ್ತು ಎಂದು ಗೋಪ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತೀಯ ಕಾರ್ಪೆಂಟರ್‌ಗೆ ಜಾಕ್‌ಪಾಕ್- ಲಕ್ಕಿ ಡ್ರಾನಲ್ಲಿ ಬಂತು 2 ಕೋಟಿ ಕಾರು!

ಹೆಚ್ಚಿನ ಸಂದರ್ಬದಲ್ಲಿ ಚಲನ್ ಅದಲು ಬದಲಾಗುವ ಸಾಧ್ಯತೆಗಳು ಹೆಚ್ಚು. ಆದರೆ ಇಲ್ಲಿ ಟಾಟಾ ನೆಕ್ಸಾನ್ ಕಾರಿನ ರಿಜಿಸ್ಟ್ರೇಶನ್ ನಂಬರ್ ಮೇಲೆ ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಹಾಕಲಾಗಿದೆ. ಬೇರೆ ಬೈಕ್ ಸವಾರಿಗೆ ಹಾಕಬೇಕಿದ್ದ ದಂಡವನ್ನು ಟಾಟಾ ನೆಕ್ಸಾನ್ ಕಾರಿನ ಮೇಲೆ ಹಾಕಲಾಗಿದೆ.  ರಸ್ತೆ ಬದಿಯಲ್ಲಿ ವಾಹನಗಳನ್ನು ಅಡ್ಡಗಟ್ಟುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗುತ್ತೆ. ಹೀಗಾಗಿ ಪೊಲೀಸರು ತರಾತುರಿಯಲ್ಲಿ ಚಲನ್ ನೀಡುವದರಿಂದಲೂ ಈ ಸಮಸ್ಯೆ ಆಗಿರಬಹುದು. ಆದರೆ ತಪ್ಪಾದ ತಕ್ಷಣವೇ ತಿದ್ದಿಕೊಂಡಿದ್ದರೆ ಉತ್ತಮ.

click me!