ಬೆಂಗಳೂರಿನಲ್ಲಿ 112 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಉದ್ಘಾಟಿಸಿದ ಸರ್ಕಾರ!

Published : Jul 21, 2020, 06:20 PM ISTUpdated : Jul 21, 2020, 06:28 PM IST
ಬೆಂಗಳೂರಿನಲ್ಲಿ 112 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಉದ್ಘಾಟಿಸಿದ ಸರ್ಕಾರ!

ಸಾರಾಂಶ

ಮಾಲಿನ್ಯ ನಿಯಂತ್ರಣ,  ವಿದೇಶದ ಇಂಧನ ಆಮದು ಕಡಿತಗೊಳಿಸಲು ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಕರ್ನಾಟಕದಲ್ಲೂ ಎಲೆಕ್ಟ್ರಿಕ್ ವಾಹನ ಖರೀದಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ 112 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಗೊಂಡಿದೆ.  

ಬೆಂಗಳೂರು(ಜು.21): ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಸಿದ ಗ್ರಾಹಕರಿಗೆ ಚಾರ್ಜಿಂಗ್ ಸ್ಟೇಶನ್ ಸಮಸ್ಯೆ ಆಗದಂತೆ ಇದೀಗ ಸರ್ಕಾರ 112 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಸಿದೆ. ಇದೀಗ ಸಾರ್ವಜನಿಕ ಬಳಕೆಗೂ ಸಿದ್ಧವಾಗಿದೆ. 

ಸಂಪೂರ್ಣ ಚಾರ್ಜ್‌ಗೆ 700 ಕಿ.ಮೀ ಮೈಲೇಜ್; ಇದು ಮರ್ಸಡೀಸ್ ಬೆಂಜ್ ಎಲೆಕ್ಟ್ರಿಕ್ ಕಾರು!..

112 ಚಾರ್ಜಿಂಗ್ ಸ್ಟೇಶನ್‌ನ್ನು ಕರ್ನಾಟಕ ಸರ್ಕಾರ ಲೋಕಾರ್ಪಣೆ ಮಾಡಿದೆ. ಇದರಲ್ಲಿ 12 ಚಾರ್ಜಿಂಗ್ ಸ್ಟೇಶನ್ DC(direct current) ಫಾಸ್ಟ್ ಚಾರ್ಜಿಂಗ್ ಪಾಯಿಂಟ್ ಆಗಿದೆ.ಇನ್ನು 100 ಚಾರ್ಜಿಂಗ್ ಸ್ಟೇಶನ್ AC (alternate current)ಆಗಿದೆ. ಸ್ಕೂಟರ್, ಬೈಕ್, ಕಾರು, ಆಟೋ ರಿಕ್ಷಾಗಳಿಗೆ ಈ ಸ್ಟೇಶನ್‌ಗಳಲ್ಲಿ ಚಾರ್ಜ್ ಮಾಡಿಕೊಳ್ಳಬಹುದು. 

ಮೇಡ್ ಇನ್ ಇಂಡಿಯಾ ಜೆಮೊಪೈ ಮಿಸೋ ಎಲೆಕ್ಟಿಕ್ ಸ್ಕೂಟರ್ ಬಿಡುಗಡೆ!

ಈ ಎಲ್ಲಾ ಚಾರ್ಜಿಂಗ್ ಸ್ಟೇಶನ್‌ಗಳಿಗೆ ಬೆಂಗಳೂರು ಎಲೆಕ್ಟ್ರಿಕ್ ಸಿಟಿ ಬೋರ್ಡ್(ಬೆಸ್ಕಾಂ) ವಿದ್ಯುತ್ ನೀಡಲಿದೆ.  ಬೆಸ್ಕಾಂ ಕಚೇರಿ ಪಾರ್ಕಿಂಗ್, ಬಿಡಿಎ ಕಾಂಪ್ಲೆಕ್ಸ್,  ಮೈಸೂರು ಹಾಗೂ ಪೀನ್ಯಾದಲ್ಲಿರುವ ಕೆಎಸ್‌ಆರ್‌ಟಿಸಿ ಟರ್ಮಿನಲ್, ಸಿಟಿ ಸಿವಿಕ್ ವಾರ್ಡ್ ಆಫೀಸ್, RTO ಕಚೇರಿ ಸೇರಿದಂತೆ ಹಲವೆಡೆ ಒಟ್ಟು 112 ಚಾರ್ಜಿಂಗ್ ಸ್ಟೇಶನ್ ಅಳವಡಿಸಲಾಗಿದೆ.

AC ಚಾರ್ಜಿಂಗ್ ಮಾಡಲು ಪ್ರತಿ ಯುನಿಟ್‌ಗೆ 7.30 ರೂಪಾಯಿ, ಇನ್ನು DC ಚಾರ್ಜಿಂಗ್ ಮಾಡಲು 7.42 ಹಾಗೂ ಫಾಸ್ಟ್ ಚಾರ್ಜಿಂಗ್ ಮಾಡಲು ಪ್ರತಿ ಯುನಿಟ್‌ಗೆ 7.99 ರೂಪಾಯಿ ದರ ನಿಗದಿ ಮಾಡಲಾಗಿದೆ.  ಬೆಂಗಳೂರಿನಲ್ಲಿ ಸದ್ಯ 12,000 ಎಲೆಕ್ಟ್ರಿಕ್ ವಾಹನಗಳಿವೆ. ಇತ್ತ ಇಂಧನ ವಾಹನಗಳ ಸಂಖ್ಯೆ 70 ಲಕ್ಷ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ