ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಡ್ರೈವ್!

By Suvarna News  |  First Published Jul 21, 2020, 5:28 PM IST

ಸೂಪರ್ ಸ್ಟಾರ್ ರಜನಿಕಾಂತ್ ಜನಪ್ರಿಯತೆಯನ್ನು ಬಿಡಿಸಿ ಹೇಳಬೆಕಿಲ್ಲ. ಶ್ರೀಮಂತ ನಟನಾಗಿರುವ ರಜನಿಕಾಂತ್ ಅಷ್ಟೇ ಸರಳ ವ್ಯಕ್ತಿ. ಇತರ ಸ್ಟಾರ್ ನಟ-ನಟಿಯರ ಬಳಿ ಇರುವಂತೆ ರಜನಿಕಾಂತ್ ಬಳಿ ದುಬಾರಿ ಹಾಗೂ ಐಷಾರಾಮಿ ಕಾರುಗಳಿಲ್ಲ. ಇದೀಗ ರಜನಿಕಾಂತ್ ಲಕ್ಷುರಿ ಕಾರಾದ ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ.


ಚೆನ್ನೈ(ಜು.21):  ಸೂಪರ್ ಸ್ಟಾರ್ ರಜಿನಿಕಾಂತ್ ಚಿತ್ರಗಳೆಲ್ಲಾ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿದೆ. ರಜನಿ ಜನಪ್ರಿಯತೆ ದೇಶ-ವಿದೇಶಗಳಲ್ಲೂ ಹಬ್ಬಿದೆ. ಆದರೆ ರಜಿನಕಾಂತ್ ಮಾತ್ರ ಅತ್ಯಂತ ಸರಳ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ರಜನಿ ಬಳಿ ದುಬಾರಿ ಕಾರುಗಳಿಲ್ಲ. ಇತ್ತೀಚೆಗೆ ರಜನಿಕಾಂತ್ BMW X5 ಕಾರು ಖರೀದಿಸಿದ್ದಾರೆ. ರಜನಿ ಬಳಿ ಇರುವ ದುಬಾರಿ ಕಾರು ಇದಾಗಿದೆ.  ರಜನಿಕಾಂತ್ ಪ್ರಯಾಣ ಮಾಡಲು ತಮ್ಮ ಟೊಯೋಟಾ ಇನೋವಾ ಕಾರನ್ನೇ ನೆಚ್ಚಿಕೊಂಡಿದ್ದಾರೆ.

ಬೆಂಗಳೂರಲ್ಲಿ ದುಬಾರಿ ಲ್ಯಾಂಬೋರ್ಗಿನಿ ಕಾರು ಶೋರೂಂ; ದಕ್ಷಿಣ ಭಾರತದಲ್ಲೇ ಮೊದಲು!.

Tap to resize

Latest Videos

undefined

ಶೂಟಿಂಗ್ ಇರಲಿ, ಪ್ರಶಸ್ತಿ ಸಮಾರಂಭವಿರಲಿ, ಯಾವುದೇ ಕಾರ್ಯಕ್ರಮವಿರಲಿ ರಜನಿಕಾಂತ್ ಪ್ರಯಾಣ ಇನೋವಾ ಕಾರಿನಲ್ಲೇ. ಆದರೆ ಇದೀಗ ರಜನಿಕಾಂತ್ ದಿಢೀರ್ ಆಗಿ ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ನೀಲಿ ಬಣ್ಣದ ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಸ್ವತಃ ರಜನಿಕಾಂತ್ ಡ್ರೈವಿಂಗ್ ಮಾಡಿಕೊಂಡು ಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!.

ಲ್ಯಾಂಬೋರ್ಗಿನಿ ಉರುಸ್ SUV ಕಾರಾಗಿದ್ದು, ಇದರ ಬಲೆ 3.55 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದು ವಿಶ್ವದ ಕ್ವಿಕ್ ಹಾಗೂ ಫಾಸ್ಟೆಸ್ಟ್ SUV ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. 4.0 ಲೀಟರ್ ಟ್ವಿನ್ ಟರ್ಬೋ ಚಾರ್ಜಡ್ V8 ಪೆಟ್ರೋಲ್ ಎಂಜಿನ್ ಹೊಂದಿರುವ ಲ್ಯಾಂಬೋರ್ಗಿನಿ ಉರುಸ್ 641BHP ಪವರ್ ಹಾಗೂ  850NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 0 ರಿಂದ 100 ಕಿ.ಮೀ ವೇಗ ತಲುಪಲು 3.6 ಸೆಕೆಂಡ್ ತೆಗೆದುಕೊಳ್ಳುತ್ತದೆ. ಈ ಕಾರಿನ ಗರಿಷ್ಠ ವೇಗ 305 ಕಿಲೋಮೀಟರ್ ಪ್ರತಿ ಗಂಟೆಗೆ.

ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ರಜನಿಕಾಂತ್ ಪ್ರತ್ಯಕ್ಷರಾಗಿದ್ದಾರೆ. ಈ ಕಾರನ್ನು ರಜನಿಕಾಂತ್ ಖರೀದಿಸಿದ್ದಾರೆಯೇ? ಅಥವ ಆಪ್ತರ, ಅಥವಾ ಟೆಸ್ಟ್ ಡ್ರೈವ್ ಕಾರೋ ಅನ್ನೋದು ಸ್ಪಷ್ಟವಾಗಿಲ್ಲ. ಐಷಾರಾಮಿ, ಶ್ರೀಮಂತಿಕೆ ಜೀವನ ಇಷ್ಟಪಡದ ರಜನಿಕಾಂತ್, ಇದೀಗ ಉರುಸ್ ಕಾರಿನ ಮೂಲಕ ಕುತೂಹಲ ಹುಟ್ಟುಹಾಕಿದ್ದಾರೆ.

click me!