ಕರ್ನಾಟಕದಲ್ಲಿ ಓಲಾ ಹಾಗೂ ಉಬರ್ ಟ್ಯಾಕ್ಸಿ ಕಂಪನಿಯ ಕಾರ್‌ಪೂಲಿಂಗ್ ಸೇವೆಗಳನ್ನು ಸರ್ಕಾರ ನಿಷೇಧಿಸಿದೆ. ಸರ್ಕಾರದ ದಿಢೀರ್ ನಿರ್ಧಾರಕ್ಕೆ ಕಾರಣಗಳೇನು? ಓಲಾ ಹಾಗೂ ಉಬರ್ ಕಂಪನಿಯ ಯಾವ ಸೇವೆಗಳು ಇರಲಿದೆ? ಯಾವುದು ನಿಷೇಧವಾಗಲಿದೆ? ಇಲ್ಲಿದೆ ವಿವರ.
ಬೆಂಗಳೂರು(ಜೂ.28): ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಓಲಾ, ಉಬರ್ ಸೇರಿದಂತೆ ಹಲವು ಟ್ಯಾಕ್ಸಿ ಸೇವೆಗಳು ಜನರ ಬದುಕನ್ನು ಹಾಸು ಹೊಕ್ಕಿದೆ. ಓಲಾ ಹಾಗೂ ಉಬರ್ ಟ್ಯಾಕ್ಸಿಗಳು ಪ್ರತಿ ದಿನ ಹೊಸ ಹೊಸ ಯೋಜನೆ ಜಾರಿಮಾಡುತ್ತಿದೆ. ಆದರೆ ಓಲಾ ಹಾಗೂ ಉಬರ್ ವಿಸ್ತರಿಸಿದ ಸೇವೆಗಳನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ.
ಇದನ್ನೂ ಓದಿ: ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ: ಯಾವುದಕ್ಕೆ ಎಷ್ಟು ದಂಡ..?
undefined
ಓಲಾ ಕಂಪನಿ ಪರಿಚಯಿಸಿರುವ ಶೇರ್ ಟ್ಯಾಕ್ಸಿ ಹಾಗೂ ಉಬರ್ ಕಂಪನಿಯ ಕಾರ್ ಪೂಲಿಂಗ್ ಸೇವೆಯನ್ನು ತಕ್ಷಣದಿಂದ ಕರ್ನಾಟಕ ಸರ್ಕಾರ ನಿಷೇಧಿಸಿದೆ. ಓಲಾ ಹಾಗೂ ಉಬರ್ ನಿಷೇಧಿತ ಸೇವೆಯನ್ನು ಮುಂದುವರಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ರಾನ್ಸ್‌ಪೋರ್ಟ್ ಕಮಿಶನ್ ವಿಪಿ ಇಕ್ಕೇರಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ: PRESS, POLICE ಯಾವುದೇ ಸ್ಟಿಕ್ಕರ್ ಹಾಕಿದ್ರೆ ವಾಹನ ಸೀಝ್!
ಕಾರ್ ಪೂಲಿಂಗ್ ನಾವು ವಿರೋಧಿಸುತ್ತಿಲ್ಲ. ಆದರೆ ಓಲಾ ಹಾಗೂ ಉಬರ್ ಕಾರ್ ಪೂಲಿಂಗ್ ಸೇವೆಗೆ ಅನುಮತಿ ಪಡೆದಿಲ್ಲ. ಕೇವಲ ಟ್ಯಾಕ್ಸಿ ಸೇವೆಗೆ ಮಾತ್ರ ಅನುಮತಿ ಪಡೆದಿದೆ. ಹೀಗಾಗಿ ಓಲಾ ಹಾಗೂ ಉಬರ್ ಕಂಪನಿಯ ಕಾರ್ ಪೂಲಿಂಗ್ ಸೇವೆಯನ್ನು ನಿಷೇಧಿಸಲಾಗಿದೆ ಎಂದು ಇಕ್ಕೇರಿ ಹೇಳಿದ್ದಾರೆ. ಓಲಾ ಹಾಗೂ ಉಬರ್ ಕಂಪನಿಯ ಟ್ಯಾಕ್ಸಿ ಸೇವೆ ಇರಲಿದೆ. ಆದರೆ ಓಲಾದ ಶೇರಿಂಗ್ ಹಾಗೂ ಉಬರ್‌ನ ಕಾರ್ ಪೂಲಿಂಗ್ ಸೇವೆ ನಿಷೇಧಿಸಲಾಗಿದೆ.