ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ ಮಾಡಿ ಹೊಸ ನಿಯಮ ಜಾರಿಯಾಗಿದೆ. ಹಾಗಾದ್ರೆ ಹೊಸ ನಿಯಮದ ಪ್ರಕಾರ ಯಾವ ತಪ್ಪಿಗೆ ಎಷ್ಟು ದಂಡ..? ಈ ಕೆಳಗಿನಂತಿದೆ ಪಟ್ಟಿ.
ಬೆಂಗಳೂರು, [ಜೂ.27]: ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದಿ ತಿದ್ದುಪಡಿಗೆ ಮೊನ್ನೇ ಅಷ್ಟೇ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ.
ಇದರ ಬೆನ್ನಲ್ಲೇ ಕರ್ನಾಟಕ ಮೋಟಾರ್ ವಾಹನ ಕಾಯ್ದೆದಲ್ಲೂ ತಿದ್ದುಪಡಿ ಮಾಡಿ ಜಾರಿ ಮಾಡಲಾಗಿದೆ. ಇಂದು [ಗುರುವಾರ] ಹೊಸ ನಿಯಮ ಜಾರಿಗೊಳಿಸಿ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ.
ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ- ಫೈನ್ ಮೊತ್ತ ಡಬಲ್!
ಹಾಗಾದ್ರೆ ಹೊಸ ನಿಯಮದ ಪ್ರಕಾರ ಯಾವುದಕ್ಕೆ ಎಷ್ಟು ದಂಡ ಎನ್ನುವ ಪಟ್ಟಿ ಈ ಕೆಳಗಿನಂತಿದೆ.
* ಮಿತಿ ಮೀರಿದ ವೇಗದ ಚಾಲನೆಗೆ 1 ಸಾವಿರ ರೂ. ದಂಡ. -[ಮುಂಚೆ 500 ರೂ. ಇತ್ತು]
* ವಾಹನ ಚಲಾಯಿಸುವಾಗ ಮೊಬೈಲ್ ಬಳಿಸಿದರೆ 1 ಸಾವಿರ ರೂ. ದಂಡ.
* ಚಾಲನೆ ವೇಳೆ 2ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ 2 ಸಾವಿರ ರೂ. ದಂಡ.
* ನೊಂದಣಿ ಇಲ್ಲದೆ ವಾಹನ ಚಲಾವಣೆ ಮಾಡಿದರೆ ಮೊದಲ ಬಾರಿಗೆ 5 ಸಾವಿರ ರೂ. ದಂಡ. - [ಮುಂಚೆ 100 ರೂ. ಇತ್ತು]
* ನೊಂದಣಿ ಇಲ್ಲದೆ ಚಲಾಯಿಸಿ 2 ಬಾರಿಗೆ ಸಿಕ್ಕಿ ಬಿದ್ದರೆ 10 ಸಾವಿರ ರೂ.- [ಮುಂಚೆ 300 ರೂ. ಇತ್ತು]
* ಇನ್ಷೂರೆನ್ಸ್, DL ಇಲ್ಲದೆ ಚಾಲನೆ ಮಾಡಿದರೆ 1 ಸಾವಿರ ರೂ.
*ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ವಾಹನ ಚಲಾಯಿಸಿದರೆ 2 ಸಾವಿರ ರೂ.
*ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೆ 2ನೇ ಬಾರಿ ಚಲಾಯಿಸಿದರೆ 5 ಸಾವಿರ ರೂ.
* ಬಸ್ ನಲ್ಲಿ ಚಿಲ್ಲರೆ ಹಿಂದಿರುಗಿಸದಿದ್ದರೆ ಕಂಡಕ್ಟರ್ ಗೆ 500 ರೂ. ದಂಡ- [ಮುಂಚೆ 100 ರೂ. ಇತ್ತು]
* ಅವಧಿ ಮೀರಿದ ಟಿಕೆಟ್ ನೀಡಿದರೆ ಕಂಡಕ್ಟರ್ ಗೆ 500 ರೂ. ದಂಡ- [ಮುಂಚೆ 100 ರೂ. ಇತ್ತು]
* ಪ್ರಯಾಣದ ದೂರಕ್ಕೆ ತಕ್ಕಂತೆ ಟಿಕೆಟ್ ನೀಡದಿದ್ದರೆ ಕಂಡಕ್ಟರ್ 500 ರೂ. ದಂಡ.- [ಮುಂಚೆ 100 ರೂ. ಇತ್ತು]
ದಂಡಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಸಾರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ.