ಭಾರತದಲ್ಲಿ ಕಾರು, ಬೈಕ್, ಸ್ಕೂಟರ್ ಸೇರಿದಂತೆ ಖಾಸಗಿ ವಾಹನದ ಮೇಲೆ ಪೊಲೀಸ್, ಪ್ರೆಸ್, ವಕೀಲರು ಸೇರಿದಂತೆ ಹಲವು ಸ್ಟಿಕ್ಕರ್ ಅಂಟಿಸಿ ತಿರುಗಾಡುವುದು ಸಾಮಾನ್ಯ. ಹೈಕೋರ್ಟ್ ಆದೇಶದ ಪ್ರಕಾರ ಖಾಸಗಿ ವಾಹನಗಳಲ್ಲಿ ಈ ರೀತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್ ಆಗಲಿದೆ.
ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ತಮ್ಮ ವಾಹನದ ಮೇಲೆ ಪ್ರೆಸ್, ಪೊಲೀಸ್, ವಕೀಲರು, ಆರ್ಮಿ ಸೇರಿದಂತೆ ಹಲವು ಸ್ಟಿಕ್ಕರ್‌ಗಳನ್ನು ಅಂಟಿಸಿರುತ್ತಾರೆ. ಇನ್ಮುಂದೆ ಬೈಕ್, ಸ್ಕೂಟರ್, ಕಾರು ಸೇರಿದಂತೆ ಯಾವುದೇ ಖಾಸಗಿ ವಾಹನದಲ್ಲಿ ಈ ರೀತಿ ಸ್ಟಿಕ್ಕರ್ ಅಂಟಿಸಿ ತಿರುಗಾಡಿದರೆ, ವಾಹನ ಸೀಝ್ ಆಗಲಿದೆ. ಅಥವಾ ದಂಡ ಕಟ್ಟಬೇಕಾಗುತ್ತದೆ.
ಇದನ್ನೂ ಓದಿ: MG ಹೆಕ್ಟರ್ SUV ಕಾರು ಬಿಡುಗಡೆ- ಟಾಟಾ ಹ್ಯಾರಿಯರ್‌ಗಿಂತ ಕಡಿಮೆ ಬೆಲೆ!
undefined
ಈ ನೂತನ ನಿಯಮ ಕಟ್ಟು ನಿಟ್ಟಾಗಿ ಪಾಲನೆ ಆಗುತ್ತಿರುವುದು ಮಹಾರಾಷ್ಟ್ರದಲ್ಲಿ. ಬಾಂಬೆ ಹೈಕೋರ್ಟ್ ನೂತನ ಆದೇಶ ಹೊರಡಿಸಿದೆ. ಖಾಸಗಿ ವಾಹನಗಳು ಪ್ರೆಸ್, ಪೊಲೀಸ್ ಸೇರಿದಂತೆ ಯಾವುದೇ ಸ್ಟಿಕ್ಕರ್ ಅಂಟಿಸಬಾರದು. ಇದು ಕಾನೂನು ಉಲ್ಲಂಘನೆ ಎಂದಿದೆ. ಬಾಂಬೆ ಹೈಕೋರ್ಟ್ ಆದೇಶ ಹೊರಡಿಸುತ್ತಿದ್ದಂತೆ ಎಚ್ಚೆತ್ತ ಮುಂಬೈ ಪೊಲೀಸರು ಸ್ಟಿಕ್ಕರ್ ಇರೋ ಖಾಸಗಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರೆಸ್, ಪೊಲೀಸ್, ವಕೀರಲು ಸೇರಿದಂತೆ ಹಲವು ಸ್ಟಿಕ್ಕರ್‌ಗಳು ಮಾರುಕಟ್ಟೆಯಲ್ಲಿ 15, 20 ರೂಪಾಯಿಗೆ ಸಿಗುತ್ತೆ. ಈ ಸ್ಟಿಕ್ಕರ್ ಯಾರು ಬೇಕಾದರು ಖರೀದಿಸಬಹುದು. ಇಷ್ಟೇ ಅಲ್ಲ ಟ್ರಾಫಿಕ್ ನಿಯಮ ಉಲ್ಲಂಘಿಸಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಇದಕ್ಕೂ ಮುಖ್ಯವಾಗಿ ಇತರರ ವೃತ್ತಿಯ ಸ್ಟಿಕ್ಕರನ್ನು ತಮ್ಮ ವಾಹನದ ಮೇಲೆ ಅಂಟಿಸುವುದು ಕೂಡ ಅಪರಾಧ. ಇದರ ಮೂಲಕ ಟ್ರಾಫಿಕ್ ನಿಯಮದಿಂದ ತಪ್ಪಿಸಿಕೊಳ್ಳೋ ಯತ್ನ ಮಾಡುತ್ತಾರೆ ಎಂದು ಮುಂಬೈ ಪೊಲೀಸ್ ಜಂಟಿ ಆಯುಕ್ತ ಮಧುಕರ್ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ನಿಯಮ: ಆ್ಯಂಬುಲೆನ್ಸ್‌ಗೆ ಅಡ್ಡ ಬಂದರೆ 10 ಸಾವಿರ ರೂ. ದಂಡ!
ಮಹಾರಾಷ್ಟ್ರ ಮೋಟಾರ್ ವಾಹನ ಕಾಯ್ದೆ 134 (6) ಸೆಕ್ಷನ್ 177 ಪ್ರಕಾರ, ಖಾಸಗಿ ವಾಹನಗಳಲ್ಲಿ ಪೊಲೀಸ್, ಪ್ರೆಸ್ ಸೇರಿದಂತೆ ಯಾವುದೇ ಸ್ಟಿಕ್ಕರ್ ಅಂಟಿಸುವುದು ಅಪರಾಧ. ಈ ರೀತಿ ಸ್ಟಿಕ್ಕರ್ ಇದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಬಹುದು ಅಥವಾ 200 ರೂಪಾಯಿ ದಂಡ ವಿದಿಸಬಹುದು. ಇದೀಗ ಬಾಂಬೆ ಹೈಕೋರ್ಟ್ ಆದೇಶ ಹೊರಡಿಸುತ್ತಿದ್ದಂತೆ ಮುಂಬೈ ಪೊಲೀಸರು ಹಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.