ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಬಳಿಕ ಇದೀಗ ಕರ್ನಾಟಕದಲ್ಲಿ ಸಾರಿಗೆ ನಿಯಮದಲ್ಲಿ ಕೆಲ ತಿದ್ದುಪಡಿಗಳಾಗಿದೆ. ಪ್ರಮುಖವಾಗಿ ಹೆಲ್ಮೆಟ್ ಇಲ್ಲದ ಪ್ರಯಾಣಕ್ಕೆ ದುಬಾರಿ ದಂಡದ ಜೊತೆಗೆ ಲೈಸೆನ್ಸ್ ಕೂಡ ರದ್ದಾಗಲಿದೆ.
ಬೆಂಗಳೂರು(ಅ.20): 2019ರಲ್ಲಿ ಕೇಂದ್ರ ಸರ್ಕಾರ ಮೋಟಾರು ಕಾಯ್ದೆ ತಿದ್ದುಪಡಿ ತರಲಾಗಿತ್ತು. ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿತ್ತು. ಇದೀಗ ಕರ್ನಾಟಕದಲ್ಲಿ ಟ್ರಾಫಿಕ್ ನಿಯಮ ಮತ್ತಷ್ಟು ಬಿಗಿ ಗೊಳಿಸಲಾಗಿದೆ. ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಇಲ್ಲದಿದ್ದರೆ 3 ತಿಂಗಳು ಲೈಸೆನ್ಸ್ ರದ್ದಾಗಲಿದೆ.
11 ಕಿ.ಮೀ ರೈಡ್ ಬಳಿಕ ಹೆಲ್ಮೆಟ್ ತೆಗೆದಾಗ ಬೆಚ್ಚಿ ಬಿದ್ದ ಶಿಕ್ಷಕ; ಆಸ್ಪತ್ರೆಗೆ ದಾಖಲು!.
ಸುಪ್ರೀಂ ಕೋರ್ಟ್ ನೇಮಕ ಮಾಡಿಕ ಸಮಿತಿ ಸೂಚನೆ ಮೇರೆಗೆ ಇದೀಗ ಕರ್ನಾಟಕ ಸಾರಿಗೆ ಇಲಾಖೆ ಹೆಲ್ಮೆಟ್ ನಿಯಮ ಬಿಗಿಗೊಳಿಸಿದೆ. ದ್ವಿಚಕ್ರ ವಾಹನ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ಇಷ್ಟೇ ಅಲ್ಲ ಹೆಲ್ಮೆಟ್ ಹಾಕದ ಕಾರಣ ಹೆಚ್ಚಿನ ಸಾವು ನೋವು ಸಂಭಿಸುತ್ತಿದೆ. ಹೀಗಾಗಿ ಸುರಕ್ಷತೆಗೆ ಮೊದಲ ಅದ್ಯತೆ ನೀಡಬೇಕು ಎಂದು ಸಾರಿಗೆ ಇಲಾಖೆ ಸೂಚಿಸಿದೆ.
ದುಬಾರಿ ದಂಡ ವಿಧಿಸಿದರೂ ಹಲವರು ಮತ್ತೆ ಹೆಲ್ಮೆಟ್ ಹಾಕದೆ ಓಡಾಡುತ್ತಿದ್ದಾರೆ. ಮತ್ತೆ ಮತ್ತೆ ನಿಯಮ ಉಲ್ಲಂಘಿಸುತ್ತಿದ್ದಾರೆ. ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಸವಾರಿ ಮಾಡತ್ತಿದ್ದರೆ ಅಂತವರ ಲೈಸೆನ್ಸ್ 3 ತಿಂಗಳು ರದ್ದಾಗಲಿದೆ.
ಪದೇ ಪದೇ ಹೆಲ್ಮೆಟ್ ಹಾಕದೆ ನಿಯಮ ಉಲ್ಲಂಘಿಸಿದರೆ ಶಾಶ್ವತವಾಗಿ ಲೈಸೆನ್ಸ್ ರದ್ದಾಗಲಿದೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇದು ನಿಯಮಕ್ಕಾಗಿ, ದಂಡ ತಪ್ಪಿಸಿಕೊಳ್ಳಲು ಮಾತ್ರವಲ್ಲ, ಸುರಕ್ಷತೆ ದೃಷ್ಟಿಯಿಂದ ಅತ್ಯಂತ ಅವಶ್ಯಕ.