ಥಾರ್ ಜೀಪ್‌ಗೆ 1 ಲಕ್ಷ ರೂಪಾಯಿ ರೈಲು ಹಾರ್ನ್ ಬಳಕೆ-ಸಂಷ್ಟದಲ್ಲಿ ಮಾಲೀಕ!

By Web DeskFirst Published Oct 22, 2018, 12:23 PM IST
Highlights

ಬರೋಬ್ಬರಿ 1 ಲಕ್ಷ ರೂಪಾಯಿ ಖರ್ಚು ಮಾಡಿ ರೈಲಿನ ಹಾರ್ನ್ ಅಳವಡಿಕೆ ಮಾಡಿದ ಮಾಲೀಕನಿಗೆ ಹಾರ್ನ್ ಬಳಕೆ ಮಾಡೋ ಭಾಗ್ಯವಿಲ್ಲ. ತಮ್ಮ ಜೀಪ್‌ಗೆ ರೈಲು ಹಾರ್ನ್ ಬಳಕೆ ಮಾಡಿ ಪೇಚಿಗೆ ಸಿಲಿಕಿದ ಮಾಲೀಕ ಯಾರು? ಆತನಿಗೆ ಎದುರಾಗಿರೋ ಸಂಕಷ್ಟವೇನು? ಇಲ್ಲಿದೆ.

ಹರಿಯಾಣ(ಅ.22): ಬೈಕ್ ಕಾರು ಖರೀದಿಸಿ ಅದನ್ನ ಕಸ್ಟಮೈಸ್ ಮಾಡುವುದು ಅಷ್ಟು ಸುಲಭವಲ್ಲ. ಕಾರಣ ಹೆಚ್ಚಿನ ಹಣ ಅಲಂಕಾರಕ್ಕೆ ಸುರಿಯಬೇಕು. ಇದೀಗ ಹರಿಯಾಣ  ಅಜಯ್ ಬೆಸ್ಲಾ ತಮ್ಮ ಮಹೀಂದ್ರ ಥಾರ್ ಜೀಪನ್ನ ಕಸ್ಟಮೈಸ್ ಮಾಡಿ ಎಲ್ಲರ ಗಮನಸೆಳೆದಿದ್ದಾರೆ. ಇಷ್ಟೇ ಅಲ್ಲ ಸಂಕಷ್ಟಕ್ಕೂ ಸಿಲುಕಿದ್ದಾರೆ.

ಅಜಯ್ ಮಹೀಂದ್ರ ಥಾರ್ ಜೀಪ್ ಖರೀಜದಿಸಿ ಅದನ್ನ ಮಾಡಿಫೈ ಮಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅಜಯ್ ತಮ್ಮ ಜೀಪ್‌ಗೆ ರೈಲು ಹಾರ್ನ್ ಬಳಕೆ ಮಾಡಿದ್ದಾರೆ. ಈ ಹಾರ್ನ್‌ಗೆ ಅಜಯ್ 1 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಈ ಮೂಲಕ ಗರಿಷ್ಠ ಶಬ್ದ ಹೊಂದಿರು  ಖಾಸಗಿ ವಾಹನ ಅನ್ನೋ ಹೆಗ್ಗಳಿಕೆಗೆ ಅಜಯ್ ಥಾರ್ ಜೀಪ್ ಪಾತ್ರವಾಗಿದೆ.

ಈ ರೈಲು ಹಾರ್ನ್‌ಗೆ 25,000 ರೂಪಾಯಿ, ಇದರ ಕಂಪ್ರೆಸ್ಸರ್ ಬೆಲೆ 50,000 ರೂಪಾಯಿ ಇನ್ನು ಈ ಹಾರ್ನ್ ಅಳವಡಿಕೆಗೆ 25000 ರೂಪಾಯಿ ನೀಡಲಾಗಿದೆ. ಹೀಗಾಗಿ ಒಟ್ಟು 1 ಲಕ್ಷ ರೂಪಾಯಿ ಖರ್ಚು ಮಾಡಿ ಖಾಸಗಿ ಜೀಪ್‌ಗೆ ರೈಲಿನ ಹಾರ್ನ್ ಬಳಕೆ ಮಾಡಲಾಗಿದೆ.

ಬರೋಬ್ಬರಿ 1 ಲಕ್ಷ ರೂಪಾಯಿ ಖರ್ಚು ಮಾಡಿ ರೈಲಿನ ಹಾರ್ನ್ ಬಳಸಿರುವ ಮಾಲೀಕ ಅಜಯ್‌ಗೆ ಸಂಕಷ್ಟ  ಶುರುವಾಗಿದೆ. ನಿಯಮದ ಪ್ರಕಾರ ಭಾರತದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವ ಈ ಹಾರ್ನ್ ಬಳಸುವಂತಿಲ್ಲ. ಹೀಗಾಗಿ ದುಬಾರಿ ಬೆಲೆ ಹಾರ್ನ್ ಅಳವಡಿಸಿದರೂ  ಅದನ್ನೂ ಬಳಸುವಂತಿಲ್ಲ. ಕೇವಲ ದಟ್ಟ ಕಾಡು ರಸ್ತೆಯಲ್ಲಿ ಈ ಹಾರ್ನ್ ಬಳಕೆ ಮಾಡಬಹುದಾಗಿದೆ.

ಇತರ ಯಾವುದೇ  ಭಾಗಗಳಲ್ಲಿ ಈ ಹಾರ್ನ್ ಬಳಕೆ ಮಾಡಿದರೆ ಮಾಲೀಕನ ಮೇಲೆ ಕೇಸ್ ದಾಖಲಾವುಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಲಕ್ಷ ರೂಪಾಯಿ ಖರ್ಚು ಮಾಡಿದರೂ ಮಾಲೀಕನಿಗೆ ಹಾರ್ನ್ ಬಳಸುವ ಭಾಗ್ಯವಿಲ್ಲ.

click me!